ಬೆಂಗಳೂರು : ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಯು ಜನರ ಮತದಾನದ ಹಕ್ಕನ್ನು ಸಾಂವಿಧಾನಿಕವಾಗಿ ರಕ್ಷಣೆ ಗೊಳಿಸಬೇಕಾದ ಆಯೋಗ, ಅದರ ಬದಲು ಜನತಾ ಮತದಾನದ ಹಕ್ಕನ್ನು ಕಸಿದು ಕೊಳ್ಳುವ ಯೋಜನೆಯ ವಿರುದ್ಧ ವಿವಿಧ ರಾಜಗಳಲ್ಲಿ ಪ್ರತಿರೋಧ ಸೃಷ್ಟಿಯಾಗಿದ್ದು, ಕರ್ನಾಟಕದಲ್ಲಿ ಇಂದು ವಿವಿಧ ಸಂಘಟನೆಗಳು , ಸಂಪನ್ಮೂಲ ವ್ಯಕ್ತಿಗಳು ಬೆಂಗಳೂರು ಫ್ರೀಡಮ್ ಪಾರ್ಕಿನಲ್ಲಿ ಕೇಂದ್ರದ ಎಸ್ ಐ ಆರ್ ಪ್ರಕ್ರಿಯೆ ವಿರೋಧಿಸಿ ಬೃಹತ್ ಪ್ರತಿರೋಧ ನಡೆಸಲಿದೆ. ಬೆಳಿಗ್ಗೆ ಹತ್ತು ಗಂಟೆಗೆ ಆರಂಭವಾಗುವ ಈ ಪ್ರತಿಭಟನೆಯಲ್ಲಿ ಹಲವು ಪ್ರಮುಖರು ಬಾಗಿಯಾಗಲಿದ್ದಾರೆ.
ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಂದೆಂದೂ ನಡೆಯದ ಅಪಚಾರ ಏಪ್ರಿಲ್ 23 ರಂದು ನಡಿಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಕಡಿಮೆ ಅರ್ಧ ಕೋಟಿ ಜನರ ಮತದಾನದ ಹಕ್ಕನ್ನು ಕಸಿದು ಚುನಾವಣೆ ನಡೆಸಲಾಗುತ್ತಿದೆ. ಸುಪ್ರೀಂ ಕೋರ್ಟು ‘ಮಾತಿನಲ್ಲಿ ಚಾಟಿ – ಮಾಡುವುದರಲ್ಲಿ ಸಾಥಿ’ ಎಂಬಂತೆ ನಡೆದುಕೊಳ್ಳುತ್ತಿದೆ. ಇದು ಪ್ರಜಾತಂತ್ರ ಪ್ರೇಮಿಗಳೆಲ್ಲರ ಎದೆಗಳಿಗೆ ಇರಿದಿರುವ ಚೂರಿ.
ಬಂಗಾಳಕ್ಕೆ ಬಂದಿರುವ ಸ್ಥಿತಿ ನಾಳೆ ಕರ್ನಾಟಕ್ಕೂ ಬರಲಿದೆ. ಈಗಾಗಲೇ 13 ರಾಜ್ಯಗಳ 6.5 ಕೋಟಿ ಜನರ ಮತದಾನದ ಹಕ್ಕು ರದ್ದಾಗಿದೆ. ಹಂತಹಂತವಾಗಿ ಇದು ಇಡೀ ದೇಶದ ವಿದ್ಯಮಾನವಾಗಲಿದೆ. ಪ್ರಜಾತಂತ್ರ ವ್ಯವಸ್ಥೆಯಿಂದ ಹೊರದಬ್ಬಲ್ಪಟ್ಟಿರುವ ಲಕ್ಷಾಂತರ ಜನರ ಜೊತೆ ಸಾಲಿಡಾರಿಟಿ ವ್ಯಕ್ತಪಡಿಸಿ, ಕರ್ನಾಟಕದಲ್ಲೂ ಇದನ್ನೇ ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿ ಅದೇ ದಿನ (ಏಪ್ರಿಲ್ 23) ಕರ್ನಾಟಕದಲ್ಲಿ SIR ಅನ್ನು ವಿರೋಧಿಸುತ್ತಿರುವ ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯಾತೀತ ಪಕ್ಷಗಳೆಲ್ಲಾ ಕೂಡಿ ಫ್ರೀಡಂ ಪಾರ್ಕಿನಲ್ಲಿ “SIR ವಿರೋಧಿ ಪ್ರತಿಭಟನಾ ಸಮಾವೇಶ” ವನ್ನು ಆಯೋಜಿಸಿವೆ.
ಈ ಸಮಾವೇಶದಲ್ಲಿ ಭಾಗವಹಿಸಲು ಮತದಾನದ ಹಕ್ಕನ್ನು ಕಳೆದುಕೊಂಡಿರುವ ಬಂಗಾಳದ ಸಂತ್ರಸ್ತರ ಪರವಾಗಿ ಸ್ವಯಂ ಮತ ಕಳೆದುಕೊಂಡಿರುವ, ಓಟ್ ಅಧಿಕಾರ್ ಮಂಚ್ ನ ಶೇಕ್ ಫರಿದುಲ್ ಇಸ್ಲಾಂ ಅವರು ಪ್ರತ್ಯೆಕ್ಷ ದರ್ಶಿಯಾಗಿ ಬಂದು ಬಂಗಾಳದ ಕತೆಯನ್ನು ಬಿಚ್ಚಿಡಲಿದ್ದಾರೆ. ಮತದಾನದ ಹಕ್ಕನ್ನು ಕಳೆದುಕೊಂಡಿರುವ ಅನೇಕ ಜನ ಬಂಗಾಳಿ ವಲಸೆ ಕಾರ್ಮಿಕರು ಜೀವಂತ ನಿದರ್ಶನವಾಗಿ ಸಮಾವೇಶದಲ್ಲಿ ಇರುತ್ತಾರೆ.
ಸಮಾವೇಶದಲ್ಲಿ ಕರ್ನಾಟಕದ ಸಮಸ್ತ ಜನಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ಮಾಜಿ ಸಚಿವರಾದ ಬಿ.ಟಿ. ಲಲಿತಾ ನಾಯ್ಕ್, ರೈತ ಚಳವಳಿಯ ಬಡಗಲಪುರ ನಾಗೇಂದ್ರ, ಹೆಚ್. ಆರ್. ಬಸವರಾಜಪ್ಪ, ಅನುಸೂಯಮ್ಮ, ಹೈದರ್ ಬೇಗ್, ಕಾರ್ಮಿಕ ಚಳವಳಿಯ ಎಸ್. ವರಲಕ್ಷ್ಮಿ, ಬಾಬು ಮ್ಯಾಥ್ಯೂ, ಎಸ್. ಬಾಲನ್, ಕೆ.ವಿ. ಭಟ್, ಸುಷ್ಮ ವರ್ಮ; ದಲಿತ ಚಳವಳಿಯ ಮುಖಂಡರಾದ ಎನ್. ವೆಂಕಟೇಶ್, ಇಂದಿರಾ ಕೃಷ್ಣಪ್ಪ,, ಇಂದುಧರ ಹೊನ್ನಾಪುರ, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ವಿ. ನಾಗರಾಜ್, ಅಂಬಣ್ಣ ಆರೋಲಿಕರ್, ಬಸವರಾಜ್ ಕೌತಾಳ್, ಎದ್ದೇಳು ಕರ್ನಾಟಕದ ಸಮನ್ವಯಕರಾದ ತಾರಾ ರಾವ್, ಕೆ.ಎಲ್. ಅಶೋಕ್, ವೀರಸಂಗಯ್ಯ, ಮೊಹಮ್ಮದ್ ಕುಂಞಿ, ಅರುಣ್ ಲೂಯಿಸ್, ನಮ್ಮ ಮತ ನಮ್ಮ ಹಕ್ಕು ವೇದಿಕೆಯ ವಿನಯ್ ಶ್ರೀನಿವಾಶ್, ಶ್ರೀಪಾದ್ ಭಟ್, ಗೀತಾ ಮೆನನ್, ಜಾಗೃತ ಕರ್ನಾಟಕದ ಆದಾಮ್ ಖಾನ್; ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಗಳಾಗಿ ಮಸೂದ್ ಅಬ್ದುಲ್ ಖಾದರ್, ಮೊಹಮ್ಮದ್ ಯೂಸೂಪ್ ಕನ್ನಿ, ಯಾಸೀನ್ ಮಲ್ಪೆ,ಪರಿಚೋ ಪ್ರಭು, ಮನೋಹರ್ ಚಂದ್ರಪ್ರಸಾದ್, ಆಂಥೋಣಿ ವಿಕ್ರಂ, ಮಹಿಳಾ ಚಳವಳಿಯ ಮಲ್ಲಿಗೆ ಸಿರಿಮನೆ, ಮಾನವ ಬಂಧುತ್ವ ವೇದಿಕೆಯ ಎ.ಬಿ. ರಾಮಚಂದ್ರಪ್ಪ, ಮೇ ಸಾಹಿತ್ಯ ಮೇಳದ ಬಸವರಾಜ್ ಸೂಳಿಭಾವಿ, ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್, ಕನ್ನಡಪರ ಹೋರಾಟಗಾರ ರಮೇಶ್ ಬೆಲ್ಲಂಕೊಂಡ, ಶೆ.ಭೋ. ರಾಧಕೃಷ್ಣ, ದಿನೇಶ್ ಕುಮಾರ್; ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಅಕ್ಕೈ ಪದ್ಮಸಾಲಿ, ಮನೋಹರ್ ಇಳುವರ್ತಿ, ಮಲ್ಲು ಕುಂಬಾರ್, ಅಲೆಮಾರಿ ಸಮುದಾಯದ ಮಂಜುನಾಥ್, ಬಸವರಾಜ್ ಅವರು, ಮಾನವ ಹಕ್ಕು ಹೋರಾಟಗಾರರದಾದ ವಿ.ಎಸ್. ಶ್ರೀಧರ್, ವಿದ್ಯಾರ್ಥಿ ಚಳವಳಿಯ ಮೊಹಮ್ಮದ್ ಪೀರ್, ಸರೋವರ್ ಬೆಂಕಿಕೆರೆ, ಆರ್ ಟಿ ಐ ಮುಂದಾಳುಗಳಾದ ಆದರ್ಶ ಐಯರ್, ಕರ್ನಾಟಕ ರಕ್ಷಣಾ ವೇದಿಕೆಯ ದಿನೇಶ್ ಕುಮಾರ್ ದಿನೂ, ಮೂಢ ನಂಬಿಕೆ ವಿರೋಧಿ ಆಂದೋಲನದ ನಾಗೇಶ್ ಅರಳುಕುಪ್ಪೆ, ಚಿಂತಕರಾದ ಅಲ್ಲಮಪ್ರಭು ಬೆಟ್ಟದೂರು, ಬಂಜಗೆರೆ ಜಯಪ್ರಕಾಶ್, ಶಿವಸುಂದರ್, ಮುಂತಾದ ಸಾವಿರಾರು ಸಾಮಾಜಿಕ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.
ಜನಪರ ಸಂಘಟನೆಗಳ ಜೊತೆ ಕರ್ನಾಟಕದ ಎಲ್ಲಾ ಜಾತ್ಯಾತೀತ ಪಕ್ಷಗಳೂ ಈ ಸಮಾವೇಶದ ಯಶಸ್ವಿಯಲ್ಲಿ ಕೈಗೂಡಿಸುತ್ತಿವೆ. ಕಾಂಗ್ರೆಸ್ ಪಕ್ಷದ ಜಿ.ಸಿ. ಚಂದ್ರಶೇಖರ್, ನಸೀರ್ ಅಹ್ಮದ್, ಬಿ.ಆರ್. ಪಾಟೀಲ್, ವೆಲ್ಫೇರ್ ಪಾರ್ಟಿಯ ತಾಹೀರ್ ಹುಸೇನ್, ಎಸ್.ಡಿ.ಪಿ.ಐ ನ ಕೆ.ಹೆಚ್. ಅಬ್ದುಲ್ ಮಜೀದ್, ಸರ್ವೋದಯ ಪಕ್ಷದ ಚಾಮರಸ ಮಾಲಿ ಪಾಟೀಲ್, ಸಿಪಿಎಂ ಪಕ್ಷದ ಪ್ರಕಾಶ್, ಸಿಪಿಐ ಪಕ್ಷದ ಸಿದ್ದನಗೌಡ ಪಾಟೀಲ್, ಸಿಪಿಐ [ಎಂಎಲ್] ಪಕ್ಷದ ಕ್ಲಿಫ್ಟನ್ ರೊಜಾರಿಯೋ, ಸಿಪಿಐಎಂಎಲ್[ಮಾಸ್ ಲೈನ್]ನ ಡಿ.ಹೆಚ್. ಪೂಜಾರ್, ವಿ.ಎನ್. ರಾಜಶೇಖರ್, ರಾಜ್ಯ ಸಮಿತಿ ಸದಸ್ಯರು, SUCI(c), ಸಿವಿಕ್ ಬೆಂಗಳೂರಿನ ಕಾತ್ಯಾಯಿನಿ ಚಾಮರಾಜನಗರ, ಐಶ್ವರ್ಯ (ಪಿಯುಸಿಎಲ್) ಭಾಗವಹಿಸುತ್ತಿದ್ದಾರೆ. ಇದೊಂದು ರೀತಿಯಲ್ಲಿ ಕರ್ನಾಟಕದ ಸಮಸ್ತ ಪ್ರಗತಿಪರ ಸಂಘಟನೆಗಳ ಹಾಗೂ ಎಲ್ಲಾ ಜಾತ್ಯಾತೀತ ಪಕ್ಷಗಳ ಸಂಯುಕ್ತ ಕೂಗಾಗಿ ಮಾರ್ದನಿಸಲಿದೆ.
ಈ ಸಮಾವೇಶಕ್ಕೆ ಕರ್ನಾಟಕದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರನ್ನೂ ಆಹ್ವಾನಿಸುತ್ತಿದ್ದೇವೆ. ಬನ್ನಿ, ಬಂಗಾಳದ ಸಂತ್ರಸ್ತರ ಜನರಿಗೆ “ನಾವೂ ನಿಮ್ಮ ನೋವಿನಲ್ಲಿ ಇದ್ದೇವೆ” ಎಂಬ ಸಂದೇಶ ರವಾನಿಸೋಣ. ಕರ್ನಾಟಕದಲ್ಲಿ ಇದನ್ನು ಪುನಾರವರ್ತನೆ ಮಾಡಲು ಬಿಡುವುದಿಲ್ಲ ಎಂದು ಚುನಾವಣಾ ಆಯೋಗಕ್ಕೆ ಕಡಕ್ ಸಂದೇಶ ಸಹ ನೀಡಿ ಬರೋಣ.
ನಮಸ್ಕಾರ.
ಮೇಲ್ಕಂಡ ಒಕ್ಕೂಟದ ಪರವಾಗಿ
ಜೆ.ಎಂ. ವೀರಸಂಗಯ್ಯ, ಶ್ರೀಪಾದ್ ಭಟ್, ಕೆ.ಎಲ್. ಅಶೋಕ್.
ಎಸ್ ಐ ಆರ್ ವಿರೋಧಿ ಜಾತ್ಯತೀತ ಪಕ್ಷಗಳು- ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ಪತ್ರಿಕಾ ಪ್ರಕಟಣೆ. ನೀಡಿದೆ.
ಇನ್ನಷ್ಟು ವರದಿಗಳು
ಮುಸ್ಲಿಮ್ ಸಂಘಟನೆಗಳಿಂದ ಕಾಂಗ್ರೆಸ್ ವರಿಷ್ಠರಿಗೆ ಅವಹಾಲು ಪತ್ರ, ಬೇಡಿಕೆ ಈಡೇರದಿದ್ದರೆ ಕವಲು ದಾರಿ?.
ಚುನಾವಣಾ ಪೂರ್ವ ಮುಸ್ಲಿಮ್ ಮತ ಬೆಂಬಲ V/s ಚುನಾವಣೋತ್ತರ ಮುಸ್ಲಿಮ್ ನಿರ್ಲಕ್ಷ್ಯ : ರಾಜ್ಯ ಕಾಂಗ್ರೆಸ್ ವಿರುದ್ಧ ಸಂಘಟನೆಗಳು ಘರಂ.
ಬೆಂಗಳೂರು ಅಝೀಮ್ ಪ್ರೇಂಜಿ ಯೂನಿವರ್ಸಿಟಿ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಎಪಿಸಿಆರ್ ಖಂಡನೆ.