March 19, 2025

Vokkuta News

kannada news portal

ದೆಹಲಿ ಅಧಿಕಾರಿ ಸಬೀಯಾ ಸೈಫೀ ಸಾಮೂಹಿಕ ಅತ್ಯಾಚಾರ, ಹತ್ಯೆ ಖಂಡಿಸಿ ಉಳ್ಳಾಲ ಕಾಂಗ್ರೆಸ್ ನಿಂದ ಪ್ರತಿಭಟನೆ.

ಮಂಗಳೂರು: ದೆಹಲಿಯಲ್ಲಿ ಇತ್ತೀಚೆಗೆ ಸಾಮೂಹಿಕ ಅತ್ಯಾಚಾರ ಗೊಂಡು ಬರ್ಬರ ವಾಗಿ ಹತ್ಯೆಯಾದ,ದೆಹಲಿ ಪೊಲೀಸ್ ಡಿಫೆನ್ಸ್ ಫೋರ್ಸ್ ಅಧಿಕಾರಿಯಾದ ಸಬಿಯಾ ಸೈಫೀ ಯಾಳ ಕುಟುಂಬಕ್ಕೆ ನ್ಯಾಯ ಒದಗಿಸ ಬೇಕೆಂಬ ಬೇಡಿಕೆ ಆಗ್ರಹಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮತ್ತು ಉಳ್ಳಾಲ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ವತಿಯಿಂದ ತೊಕ್ಕೊಟು ಬಸ್ ನಿಲ್ದಾಣ ಬಳಿ ಸಾರ್ವಜನಿಕ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಸದಾಶಿವ ಉಳ್ಳಾಲ್ ರವರು ಮಾತನಾಡಿ ದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ, ಸರಕಾರ ಈ ಬಗ್ಗೆ ಮೌನ ವಹಿಸಿದೆ. ಇಂದು ಸಬಿಯ ಸೈಫ್ ಗೆ ಆದ ಅನ್ಯಾಯ ನಾಳೆ ಎಲ್ಲಿಯೂ ಸಂಭವಿಸಬಹುದು, ಈ ಬಗ್ಗೆ ಜನರು ಜಾಗೃತರಾಗಿ ಸಾಮೂಹಿಕವಾಗಿ ಹೋರಾಡಬೇಕಿದೆ ಎಂದು ಹೇಳಿದರು, ಸಬೀಯ ಸೈಫ್ ಗೆ ಆದ ಅತ್ಯಾಚಾರ ಮತ್ತು ಹತ್ಯೆ ವಿರುದ್ಧ ಘೋಷಣೆ ಕೂಗ ಲಾ ಯಿತು.ಪ್ರತಿಭಟನೆಯಲ್ಲಿ ಬ್ಲಾಕ್ ಅಧ್ಯಕ್ಷರಾದ ಸದಾಶಿವ ಉಳ್ಳಾಲ್,ಕರ್ನಾಟಕ ರಾಜ್ಯ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗ ಸಂಚಾಲಕ ರಾದ ಮುಸ್ತಫಾ ಅಬ್ದುಲ್ಲಾ ಉಳ್ಳಾಲ, ಉಳ್ಳಾಲ ಬ್ಲಾಕ್ ಪದಾಧಿಕಾರಿ ದಿನೇಶ್ ರೈ, ಎನ್.ಎಸ್. ಕರೀಮ್, ತಾಲೂಕ್ ಪಂಚಾಯತ್ ಅಧ್ಯಕ್ಷರಾದ ಮಹಮದ್ ಮೋನು ,ಉಸ್ಮಾನ್ ಕಲ್ಲಾಪು,ಬಾಸಿಲ್ ಡಿ ಸೋಜಾ, ಸಾಜಿದ್ ಉಳ್ಳಾಲ್,ಆಲ್ವಿನ್ ಡಿ ಸೋಜ,ಸಲಾಮ್ ಉಚ್ಚಿಲ್, ಮಹಿಳಾ ಘಟಕದ ಪದಾಧಿಕಾರಿಳು ಮತ್ತು ಇನ್ನಿತರರು ಭಾಗವಹಿಸಿದ್ದರು.