November 9, 2024

Vokkuta News

kannada news portal

ದೇಶಾದ್ಯಂತ ಭಾರತ್ ಬಂದ್ ಗೆ ವ್ಯಾಪಕ ಬೆಂಬಲ, ವಿವಿದೆಡೆ ಪ್ರತಿಭಟನೆ,ರಸ್ತೆ ತಡೆ.

ಚಾರಿತ್ರಿಕ ರೈತ ಚಳುವಳಿಗೆ ಬೆಂಬಲವಾಗಿ ನಿಂತ ಜನತೆ.

ಮಂಗಳೂರು: ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್ ಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು,ಪ್ರಸಕ್ತ ದೆಹಲಿಯಲ್ಲಿ ಬೀಡು ಬಿಟ್ಟಿದೆ ದೇಶದ ಅಸಂಖ್ಯಾತ ರೈತರ ಚಳುವಳಿಗೆ ಬೃಹತ್ ಪ್ರಜಾ ಸತ್ತಾತ್ಮಕ ಮುನ್ನಡೆ ದೊರೆತಂತಾಗಿದೆ.

ಒಂದು ವರ್ಷದಿಂದೀಚೆಗೆ ವಿವಾದಿತ ಕೃಷಿ ಕಾಯಿದೆ ಅಂಗೀಕಾರ ಮತ್ತು ಅನುಷ್ಠಾನ ವಿರೋಧಿಸಿ ದೇಶದ ಅಸಂಖ್ಯಾತ ರೈತರು ರಾಜಧಾನಿ ದೆಹಲಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ಮುಷ್ಕರ ಹೊಡಲಾಗಿತ್ತು.

ಇಂದು ದೆಹಲಿಯಲ್ಲಿ ರೈತ ಓರ್ವ ಹೃದಯಾಘಾತ ದಿಂದ ಮೃತ ಪಟ್ಟಿದ್ದು,ದೆಹಲಿ ಮತ್ತು ದೇಶಾದ್ಯಂತ ವಿವಿಧ ರಾಜಕೀಯ ಪಕ್ಷಗಳು,ಸಂಘಟನೆಗಳು,ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ ಪ್ರಯುಕ್ತ ಸಾರ್ವಜನಿಕ ಪ್ರತಿಭಟನೆ ಹಮ್ಮಿ ಕೊಂಡಿದ್ದವು. ಪಂಜಾಬ್ ಮತ್ತು ಹರ್ಯಾಣದಲ್ಲಿ ಬಹುತೇಕ ಜನ ಜೀವನ ಸ್ತಭ ವಾಗಿದ್ದು ಸಂಚಾರ ವ್ಯವಸ್ಥೆ ಸಂಪೂರ್ಣ ನಿಲ್ಲಿಸಲಾಗಿತ್ತು. ಕರ್ನಾಟಕ ರಾಜಧಾನಿ ಯಲ್ಲಿ ವಿವಿಧ ರೈತ ಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ರೈತ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಮಂಗಳೂರು ನಗರದ ಕ್ಲಾಕ್ ಟವರ್ ಬಳಿ ಇಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಮೊಹಮ್ಮದ್ ಅಥಾವುಲ್ಲ ಜೋಕಟ್ಟೆ ನೇತೃತ್ವದಲ್ಲಿ ರೈತ ವಿರೋಧಿ ಕೃಷಿ ಕಾಯಿದೆ ಜಾರಿ ವಿರೋಧಿಸಿ ಮತ್ತು ಕೇಂದ್ರ ಸರಕಾರದ ಇತರ ಜನ ವಿರೋಧಿ ಕ್ರಮಗಳನ್ನು ವಿರೋಧಿಸಿ ಸಾರ್ವಜನಿಕ ಪ್ರತಿಭಟನೆ ನಡೆಸಲಾಯಿತು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.