ಬೆಂಗಳೂರು: ಫ್ಯಾಶಿಸ್ಟ್ ಸರ್ಕಾರದ ಕುತಂತ್ರದಿಂದ ದೇಶದ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಯೊಬ್ಬರೂ ಒಂದಾಗಬೇಕು ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಂವಿಧಾನ ಬದ್ಧವಾಗಿ ಸ್ಥಾಪನೆಗೊಂಡ ಪಿಎಫ್ಐ ಸಂಘಟನೆಯ ನಾಯಕರ ಬಂಧನವು ಫ್ಯಾಶಿಸ್ಟ್ ಸರಕಾರದ ಮಿತಿಮೀರಿದ ಸರ್ವಾಧಿಕಾರವನ್ನು ಸಾರುತ್ತದೆ. ಇವತ್ತು ಪಿಎಫ್ಐ, ನಾಳೆ ಯಾರು ಎಂಬುದರ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ, ದೇಶದ ಜಾತ್ಯಾತೀತತೆ-ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಅಂಗೀಕರಿಸುವ ಪ್ರತಿಯೊಬ್ಬರೂ ಒಂದಾಗಬೇಕು ಎಂದು ತಿಳಿಸಿದ್ದಾರೆ.
ದೇಶಾದ್ಯಂತ ಎನ್.ಐ. ಎ ತನಿಖಾ ಸಂಸ್ಥೆಯು ಸಾಮಾಜಿಕ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವನ್ನು ಗುರಿಯಾಗಿಸಿ ದಾಳಿ ನಡೆಸಿ, ಅದರ ನಾಯಕರ ಬಂಧನದ ಹಿನ್ನೆಲೆಯಲ್ಲಿ ಅಥಾವುಲ್ಲಾ ಜೋಕಟ್ಟೆ ಈ ಹೇಳಿಕೆ ನೀಡಿದ್ದಾರೆ.
ಇನ್ನಷ್ಟು ವರದಿಗಳು
ಪ್ರವಾದಿ ಮುಹಮ್ಮದ್ ಶಾಲಾ ಪಠ್ಯಕ್ರಮದಲ್ಲಿ ಸೇರ್ಪಡೆ: ಚುನಾವಣೆಗೂ ಮುನ್ನ ಸ್ಟಾಲಿನ್ ಮುಸ್ಲಿಂ ಪ್ರಚಾರ.
ಕೋಟೆಪುರ – ಬೋಳಾರ ಸೇತುವೆ, ₹200 ಕೋ.ಯೋಜನೆಗೆ ರಾಜ್ಯ ಅನುಮೋದನೆ,ಜಿಲ್ಲಾ 79 ನೇ ಸ್ವಾತಂತ್ರ್ಯೋತ್ಸವದಲ್ಲಿ ದಿನೇಶ್ ಗುಂಡೂರಾವ್.
ಮರ್ಚೆಂಟ್ ಶಿಪ್ಪಿಂಗ್ ಮಸೂದೆ ಮಂಗಳೂರಿನ ಕಡಲ ವಲಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುಲಿದೆ: ಕ್ಯಾಪ್ಟನ್ ಚೌಟ