October 15, 2024

Vokkuta News

kannada news portal

ಮುಸ್ಲಿಮ್ 2 ಬಿ ಮೀಸಲಾತಿ ಮರುಸ್ಥಾಪನೆ ಆಗಬೇಕಿದೆ: ಆನ್ಲೈನ್ ಸಂವಾದದಲ್ಲಿ ಕೆಎಂಯು ಪ್ರ ಕಾರ್ಯದರ್ಶಿ ಕಾಸಿಮ್ ಸಾಬ್ ಎ.

ವೆಬ್: ಸಾಮಾಜಿಕ ಜಾಲ ವಾಟ್ಸ್ ಯಾಪ್ ಹ್ಯಾಂಡಲ್ ಮುಸ್ಲಿಮ್ ವಾಯ್ಸ್ ನಲ್ಲಿ ನಿನ್ನೆ ರಾತ್ರಿ ಭಾ. ಕಾ 9.00 ಕೆ ನಡೆದ ಮುಸ್ಲಿಮ್ 2 ಬೀ ಮೀಸಲಾತಿ ಸವಾಲುಗಳು ಎಂಬ ಸಂವಾದದಲ್ಲಿ ಮಾತನಾಡಿದ ಕರ್ನಾಟಕ ಮುಸ್ಲಿಮ್ ಯುನಿಟಿ ಪ್ರಧಾನ ಕಾರ್ಯದರ್ಶಿ ಜ. ಕಾಸಿಂ ಸಾಬ್ ಏ ಅವರು ಕರ್ನಾಟಕ ರಾಜ್ಯದಲ್ಲಿ ಮುಸ್ಲಿಮ್ 2 ಬೀ ಮೀಸಲಾತಿ ಹಾಲಿ ಇದ್ದ ಪ್ರಮಾಣಕ್ಕಿಂತ ಇಮ್ಮಡಿ ಯಾಗಿ ಜಾರಿಯಾಗ ಬೇಕಿದೆ ಎಂದು ಒತ್ತಾಯಿಸಿದ್ದಾರೆ. ಸಂವಾದದಲ್ಲಿ ನಿಸಾರ್ ಗುಡ್ಡೆ ಅಂಗಡಿ ಅವರು ನಿರೂಪಣೆ ಮಾಡುತ್ತಾ ಈ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

1.) ನಿಸಾರ್ ಗುಡ್ಡೆ ಅಂಗಡಿ: ಮುಸ್ಲಿಮ್ 2ಬಿ ಮೀಸಲಾತಿ ಅಂದರೇನು ಇದು ಕರ್ನಾಟಕದಲ್ಲಿ ಜಾರಿಗೆ ಬರಲು ಕಾರಣ ಏನು?.

ಕಾಸಿಂ ಸಾಬ್ ಏ: ಪ್ರಥಮವಾಗಿ ಕರ್ನಾಟಕದಲ್ಲಿ ಮುಸ್ಲಿಮ್ 2 ಬಿ ಜಾರಿ. ಆದದ್ದು ನ್ಯಾಯ ಮೂರ್ತಿ ಚಿನ್ನಪ್ಪ ರೆಡ್ಡಿ ಸಮಿತಿ ಆಗಿತ್ತು, ಆ ಸಮಿತಿ ಸರಕಾರಕ್ಕೆ ಒಂದು ವರದಿ ಕೊಡುತ್ತದೆ. ಕರ್ನಾಟಕದ ಮುಸ್ಲಿಮರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶಿಕ್ಷಣದಲ್ಲಿ ಹಿಂದುಳಿದಿದೆ, ಆ ವರದಿ ಆಧಾರದ ಮೇಲೆ 2 ಬಿ ಮೀಸಲಾತಿ ಜಾರಿ ಆಗುತ್ತದೆ.

ಏ.ಆರ್. ರೆಹಮಾನ್ ಖಾನ್ ರವರ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಆಗುತ್ತದೆ. ಮುಸ್ಲಿಮರಿಗೆ ಹತ್ತು ಶೇಕಡಾ ಕೊಡಬೇಕೆಂದು ಮೊಯ್ಲಿ ಮಂಜೂರು ಮಾಡಿದಾಗ, ಆದರೆ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಕ್ಷೇಪ ಸಲ್ಲಿಕೆ ಆಗಿ ಕರ್ನಾಟಕದಲ್ಲಿ ಒಟ್ಟು ಮೀಸಲಾತಿ 50 ಶೇಕಡಾ ಕ್ಕಿಂತ ಅಧಿಕ ವಾಗುತ್ತದೆ ಎಂದು ಈ ಕಾರಣಕ್ಕೆ ಅದು ವಿಲೇ ಆಗುತ್ತದೆ.

ರದ್ದು ಆಗುತ್ತದೆ, ಕೇಂದ್ರ ಸರಕಾರ ಮತ್ತು ಸರ್ವೋಚ್ಛ ನ್ಯಾಯಾಲಯದ ಆದೇಶ ಇದೆ ಯಾವುದೇ ರಾಜ್ಯ ಸರಕಾರದ ಮೀಸಲಾತಿ ಶೇಕಡಾ 50 ಕ್ಕಿಂತ ಮೀರಬಾರದು ಎಂದು, ನಂತರ ದೇವೇ ಗೌಡ ನೇತೃತ್ವದ ಸರಕಾರ ಕಡಿತಗೊಳಿಸಿ ಮುಸ್ಲಿಮರಿಗೆ 4 ಶೇಕಡಾ ಮೀಸಲಾತಿ ಜಾರಿಗೆ ಬರುತ್ತದೆ.

2.ನಿಸಾರ್ ಗುಡ್ಡೆ ಅಂಗಡಿ: ಇದುವರೆಗೆ ಕರ್ನಾಟಕದಲ್ಲಿ 2 ಬಿ ಮೀಸಲಾತಿ ಯಾವ ರೀತಿಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ಅನುಕೂಲವಾಗಿದೆ.?

ಖಾಸಿಂ ಸಾಬ್ ಏ: ಈಗ ನಾವು ಒಂದು ಅರ್ಥ ಮಾಡಬೇಕು, ಒಟ್ಟು ಭಾರತೀಯ ಸಮಾಜದಲ್ಲಿ ಸಾಮಾಜಿಕವಾಗಿ ಆರ್ಥಿಕವಾಗಿ ಇರುವಂತಹ ಒಂದು ವರ್ಗ, ಅದರಲ್ಲಿ ಶೋಷಿತ ಸಮುದಾಯ ಎಸ್.ಸಿ ಎಸ್.ಟಿ, ಒಬಿಸಿ,ಅಲ್ಪ ಸಂಖ್ಯಾತರು ಇವರು ಮೀಸಲಾತಿ ಇಲ್ಲದೆ ಬದುಕು ನಡೆಸಲು ಆಗದಂತಹ ಒಂದು ಸಮಾಜ ಇದು, ಸಾಮಾಜಿಕವಾಗಿ, ಧಾರ್ಮಿಕವಾಗಿ ವಿಭಾಗ ಆದಂತಹ ಸಮುದಾಯ ಇದು. ಶೇಕಡಾ ಎಂಭತ್ತು ರಷ್ಟು ಜನಸಂಖ್ಯೆ ಇರುವ ಸಮುದಾಯ ಇದು. ಈ ಕಾರಣಕ್ಕಾಗಿ ಭಾರತೀಯ ಸಂವಿಧಾನ ಡಾಕ್ಟರ್ ಬೀ.ಆರ್.ಅಂಬೇಡ್ಕರ್ ಅವರು ಒಂದು ಮೀಸಲಾತಿ ಎಂದು ಪರಿಗಣನೆ ಕೊಟ್ಟಿದ್ದಾರೆ. ಆದುದರಿಂದ ಕರ್ನಾಟಕದಲ್ಲಿ ಮುಸ್ಲಿಮ್ 2 ಬೀ ಮೀಸಲಾತಿ ಎಂದು ಜಾರಿ ಆಗಿದೆ. ಒಂದು ವೇಳೆ ಮುಸ್ಲಿಮ್ 2 ಬಿ ಮೀಸಲಾತಿ ಇಲ್ಲ ಎಂದಿದ್ದರೆ ಕರ್ನಾಟಕದಲ್ಲಿ ಕನಿಷ್ಠ ಸರಕಾರದಲ್ಲಿ ಇರುವಂತಹ ಉದ್ಯೋಗಗಳು ಮುಸ್ಲಿಮರಿಗೆ ಸಿಗುತ್ತಿರಲಿಲ್ಲ. ಮುಸ್ಲಿಮ್ ಮಕ್ಕಳಿಗೆ ಶಿಕ್ಷಣ ಸಿಗುತ್ತಿರಲಿಲ್ಲ. ಸರಕಾರಿ ಯೋಜನೆಗೂ ಕೂಡಾ ಅರ್ಹತೆ ಆಗುತ್ತಿರಲಿಲ್ಲ. ಟೆಂಡರ್ ಗಳು ಮುಸ್ಲಿಮ್ ಪಾಲಿಗೆ ಸಿಗುತ್ತಿರಲಿಲ್ಲ. ದೇಶದ ಎಲ್ಲಾ ರಾಜ್ಯದಲ್ಲಿ ಮುಸ್ಲಿಮರಿಗೆ ಮೀಸಲಾತಿ ಇದೆ. ಮುಸ್ಲಿಮ್ ಮೀಸಲಾತಿ ಯನ್ನು ರದ್ದು ಮಾಡಿದ್ದು ಕರ್ನಾಟಕದಲ್ಲಿ ಮಾತ್ರ , ಇತರ ಎಲ್ಲಾ ರಾಜ್ಯದಲ್ಲಿ ಮುಸ್ಲಿಮ್ ಮೀಸಲಾತಿ ಇದೆ.

3. ನಿಸಾರ್ ಗುಡ್ಡೆ ಅಂಗಡಿ: ಮುಸ್ಲಿಮ್ 2 ಬಿ ಮೀಸಲಾತಿ ರದ್ದು ಗೋಳ್ಳಲು ಕಾರಣವೇನು ಇದರ ಹಿಂದಿನ ಹಿಡನ್ ಅಜೆಂಡಾ ಏನು?.

ಖಾಸಿಂ ಸಾಬ್: ಕಳೆದ ಬೊಮ್ಮಾಯಿ ಅವರ ನೇತೃತ್ವದ ಸರಕಾರ ಇದನ್ನು ರದ್ದು ಮಾಡಿದೆ, ಸದ್ಯಕ್ಕೆ ರದ್ದತಿ.ಜಾರಿಯಲ್ಲಿ ಇದೆ, ಅದಕ್ಕೆ ಮಾನ್ಯ ಮುಖ್ಯ ಮಂತ್ರಿಗಳ ಹೇಳಿಕೆ ಏನೆಂದರೆ ಮುಸ್ಲಿಮರ 2 ಬಿ ಮೀಸಲಾತಿ ಎಂಬುದು ಧಾರ್ಮಿಕ ಆಧಾರದಲ್ಲಿ ಕೊಟ್ಟಿದ್ದು,ಒಟ್ಟು ಭಾರತದಲ್ಲಿ ಧಾರ್ಮಿಕ ಆಧಾರದ ಮೇಲೆ ಧಾರ್ಮಿಕ ಆಧಾರದ ಮೇಲೆ ಯಾರಿಗೂ ಕೂಡಾ ವಿಶೇಷ ಆದ್ಯತೆ ಕೊಡಬಾರದು ಎಂದು ರದ್ದು ಆಯಿತು. ಈ ಕ್ರಮಕ್ಕೆ ಯಾವುದೇ ಒಂದು ದೊಡ್ಡ ಪ್ರತಿರೋಧ ಅಂದು ಬರಲಿಲ್ಲ.

ಮತ್ತೆ ಇದು 2 ಬಿ ಮೀಸಲಾತಿ ಬೊಮ್ಮಾಯಿ ಯವರ ರಾಜ್ಯ ಸರಕಾರ ರದ್ದು ಮಾಡಿದ ಮೇಲೆ, ಅಮಿತ್ ಶಾ ಅವರು ಒಂದು ಹೇಳಿಕೆ ಕೊಡುತ್ತಾರೆ. ಇದು ನಮ್ಮ ಮೊದಲ ಹೆಜ್ಜೆ ಎಂದು, ಮುಸ್ಲಿಮರಿಗೆ ಧಾರ್ಮಿಕ ಧಾರ್ಮಿಕ ಆಧಾರದ ಮೇಲೆ ಯಾವುದೇ ಸವಲತ್ತು ಸಹಕಾರ ಸಿಗಬಾರದು, ಮೀಸಲಾತಿ ಕೊಡಲ್ಲ, ಇದು ನಾವು ಪ್ರಥಮ ಬಾರಿಗೆ ಕರ್ನಾಟಕದಲ್ಲೇ ಮಾಡಿದ್ದೇವೆ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆ.

ಆದರೆ ಕರ್ನಾಟಕದಲ್ಲಿ ಮುಸ್ಲಿಮರಿಗೆ ಇದುವರೆಗೂ ಸಿಕ್ಕಿರುವಂತಃ ಮೀಸಲಾತಿ ಧಾರ್ಮಿಕ ಆಧಾರಿತ ಅಲ್ಲ, ಹೈಕೋರ್ಟ್ ನಲ್ಲಿ ನನ್ನ ಪೀ ಐ ಎಲ್ ಕೂಡಾ ಇದೆ ನಾನು ಕೂಡಾ ಭಾಗಿಯಾಗಿದ್ದೇನೆ. ನಾನು ಸಲ್ಲಿಸಿದ ವ್ಯಾಜ್ಯ ಏನು ಅಂದರೆ ಮುಸ್ಲಿಮರು 2 ಬೀ ಅಡಿಯಲ್ಲಿ,ಧಾರ್ಮಿಕ ಆಧಾರದ ಅಡಿಯಲ್ಲಿ ಅಲ್ಲ ಕೆ ಎಂ ಯು, ಕೆ.ಎಂ.ಡಿ.ಸಿ,, ಅಲ್ಪ ಸಂಖ್ಯಾತ ಆಯೋಗ ಕಡೆಯಿಂದನೋ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಕಡೆಯಿಂದಲೂ, ಮೀಸಲಾತಿ ಪಡೆಯುತ್ತಿಲ್ಲ, ಅವರು ಒಬಿಸಿ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮೀಸಲಾತಿ ಪಡೆದು ಕೊಂಡಿದ್ದಾರೆ ಪೀ.ಎಲ್.ಐ ಸಲ್ಲಿಸಲಾಗಿದೆ, ಮುಸ್ಲಿಮರು ಆರ್ಥಿಕವಾಗಿ,ಸಾಮಾಜಿಕವಾಗಿ, ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಹಿಂದುಳಿದ ಕಾರಣಕ್ಕೆ ಬಂದಿದೆ. ಇದರ ಆಧಾರದಲ್ಲಿ ಕೋರ್ಟ್ ಮೇಲ್ಮನವಿ ಸಲ್ಲಿಸಿದ್ದೇವೆ.

4.)ನಿಸಾರ್ ಗುಡ್ಡೆ ಅಂಗಡಿ: ಕರ್ನಾಟಕದಲ್ಲಿ ಮುಸ್ಲಿಮರ ಮೀಸಲಾತಿಗಳಿವೆ , ಮುಸ್ಲಿಮರ ಮೀಸಲಾತಿ, ಈ ಡಬ್ಲ್ಯೂ ಎಸ್, ಎಕನಾಮಿಕಲಿ ಬ್ಯಾಕ್ ವಾರ್ಡ್ ಸೆಕ್ಷನ್,ಒಕ್ಕಲಿಗ ,ಲಿಂಗಾಯಿತ ಮೀಸಲಾತಿ.ಇವೆಲ್ಲದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ?.

ಕಾಸಿಂ ಸಾಬ್ : ಮಾನ್ಯ ಮಾಜಿ ಮುಖ್ಯ ಮಂತ್ರಿಗಳು ಬೊಮ್ಮಾಯಿ ಅವರು ಇದನ್ನು ರದ್ದು ಮಾಡುವಾಗ , ಈ ಮುಸ್ಲಿಮರಿಗೆ 4 ಶೇಕಾಡ ಇದ್ದುದನ್ನು ಕ್ಯಾಟಗರಿ ಮಾಡಿ ಒಕ್ಕಲಿಗರು ಮತ್ತು ಲಿಂಗಾಯಿತರು ನಮಗೆ ಮೀಸಲಾತಿ ಬೇಕು ಎಂದು ತುಂಬಾ ದೊಡ್ಡ ಮಟ್ಟದ ಹೋರಾಟ ಮತ್ತು ಆಂದೋಲನ ಮಾಡುತ್ತಾ ಇದ್ದರು, ಬೇಡಿಕೆ ಇತ್ತು, ಆಗ ಬೊಮ್ಮಾಯಿ ಅವರು 2 ಏ ಸುಮಾರು 47 ಸಮುದಾಯಗಳಿಗೆ ಹಾಗೇನೇ ಇಟ್ಟಿದ್ದರು, 2 ಬೀ ನನ್ನು ಯಾರಿಗೂ ಕೊಟ್ಟಿಲ್ಲ ಅವರು ಹಾಗೆ ಇಟ್ಟಿದ್ದರು, ಹಾಗೇನೇ, 2 ಸಿ ಹಾಗು 2 ಡಿ ಎಂದು ಮಾಡಿ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಈ ಮುಸ್ಲಿಮ್ 2 ಬೀ ನಾಲ್ಕು ಶೇಕಡಾ ವನ್ನು 2 ಸಿ ಮತ್ತು 2 ಡಿ ಲಿಂಗಾಯತ ಮತ್ತು ಒಕ್ಕಲಿಗರಿಗೆ ಕೊಟ್ಟಿದೆ ಎಂದು ಹೇಳಿ ಘೋಷಣೆ ಮಾಡಿದರು, ಅದೇ ಇಂದು ಜಾರಿಯಲ್ಲಿ ಇರುವಂತದ್ದು, ಲಿಂಗಾಯತರು ಮತ್ತು ಒಕ್ಕಲಿಗರು ಕೇಳುತ್ತಾ ಇದ್ದಾರೆ ನಮ್ಮ ಮೀಸಲಾತಿ ಕೋರ್ಟ್ ನಲ್ಲಿ ಇದೆ ಸಾಬೀತು ಮಾಡಿ ಎಂದು, ಆದುದರಿಂದ ಮೂಲತ ಮುಸ್ಲಿಮರ ಮೀಸಲಾತಿ ಯನ್ನು ಬಿಜೆಪಿ ಸರಕಾರ ಕಿಟ್ಕೊಂಡು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಹಂಚಿದೆ. ಇದು ಆಪಾದನೆ ಅಲ್ಲ ಇದಕ್ಕೆ ಸಾಕ್ಷ್ಯಾಧಾರ ಇದೆ, 2 ಬೀ ಮೀಸಲಾತಿ ಇಲ್ಲದೆ ನಮಗೆ ಸರಕಾರದಿಂದ ಸವಲತ್ತು ಇಲ್ಲ.

ಹಾಗೇನೇ ಈಗ ಏನು ಮುಸ್ಲಿಮರಿಗೆ 2 ಬೀ ಮೀಸಲಾತಿ ರದ್ದು ಮಾಡಿ ಬೊಮ್ಮಾಯಿ ಅವರ ಆದೇಶ ಹೀಗೆ ಮುಂದುವರಿದರೆ ಕರ್ನಾಟಕದ ಒಟ್ಟು ಮುಸ್ಲಿಮರ ಮೀಸಲಾತಿ ರದ್ದು ಗೊಂಡು ನಾವು ಈ ಡಬ್ಲ್ಯೂ ಎಸ್ ಗೆ ಸೇರಬೇಕಾಗುತ್ತದೆ. ನಾವು ಅಲ್ಲಿ ಲಭಿಸುವುದು ಮಾತ್ರ ಸಿಗುತ್ತದೆ, ಆಗ ನಾವು ಆರ್ಥಿಕವಾಗಿ, ಸಾಮಾಜಿಕವಾಗಿ ಉದ್ಯೋಗದಲ್ಲಿ ಶೈಕ್ಷಣಿಕ ಹಿಂದೆ ಉಳಿದ್ದಿದ್ದೇವೆ ಎಂಬ ಪ್ರಶ್ನೆ ನೆ ಬರಲ್ಲ,ಆಗ ಈ ಡಬ್ಲ್ಯೂ ಎಸ್ ಸಮುದಾಯದಲ್ಲಿ ಯಾರು ಬರುತ್ತಾರೆ ಅವರೊಂದಿಗೆ ನಾವು ಪೈಪೋಟಿ ಮಾಡಬೇಕಾಗುತ್ತದೆ, ಯಾರು ಮೇಲ್ಜಾತಿ ,ಬ್ರಾಹ್ಮಣ ಬನಿಯಾ ಸಮುದಾಯ ಮಕ್ಕಳು ಬರುತ್ತಾರೆ ಅಲ್ಲಿ ನಮ್ಮ ಪಾಲು ಕೇಳ ಬೇಕಾಗುತ್ತದೆ.ಅಂತಃ ಪರಿಸ್ಥಿತಿ ಸದ್ಯಕ್ಕೆ ಸೃಷ್ಟಿ ಆಗಿದೆ.

ಹಾಗೇನೇ ಏನು 2 ಬೀ ಮೀಸಲಾತಿ ಯನ್ನು ಬೊಮ್ಮಾಯಿ ಸರಕಾರ ರದ್ದತಿ ಮಾಡಿದೆ, ಅದನು ಒಕ್ಕಲಿಗರಿಗೆ ಲಿಂಗಾಯತ ರಿಗೆ ಕೊಡಬೇಕು ಎಂದು ಆದೇಶ ಮಾಡಿತ್ತು, ಅದರ ನಂತರ ನಾನು ಲಿಂಗಾಯತ ಮತ್ತು ಒಕ್ಕಲಿಗ ಮುಖಂಡರಿಗೆ ಕೇಳಿದೆ, ಈ ವಿಷಯ ಪ್ರಜಾವಾಣಿ , ವಾರ್ತಾ ಭಾರತಿಯಲ್ಲ್ಲಿ ಬಂದಿತ್ತು , ಅವರ ಅಭಿಪ್ರಾಯ ತುಂಬಾ ಚೆನ್ನಾಗಿತ್ತು, ತುಂಬಾ ಖುಷಿ ಕೂಡಾ ಆಯಿತು, ಆ ಸಮುದಾಯದ ಮುಖಂಡರು ಏನು ಹೇಳುತ್ತಾರೆ ಅಂದರೆ, ನಿಮ್ಮ ತಟ್ಟೆಯ ಅನ್ನ ಕಿ ತ್ಕೊಂಡು ನಾವು ತಿನ್ನಲಿಕ್ಕೆ ಆಗಲ್ಲ, ನಿಮಗೆ ಮೀಸ ಲಾತಿ ಇಲ್ಲದೆ ಅದನ್ನು ನಮಗೆ ಕೊಟ್ಟರೆ ಅದನ್ನು ನಾವು ಒಪ್ಪವುದಿಲ್ಲ, ಎಂದು ಪತ್ರಿಕಾ ಘೋಷಣೆ ಮಾಡಿದ್ದಾರೆ ತುಂಬಾ ಅದ್ಬುತ ಎಂದರೆ, ಲಿಂಗಾಯತ ಮಹಾ ಸಬಾದ ಅಧ್ಯಕ್ಷ ಕಾಶಪ್ಪ ಅವರು ಶಾಸಕರು ಆಗಿದ್ದಾರೆ,

ಅವರು ಈ ಕಾರಣಕ್ಕೆ ಲಿಂಗಾಯತ ವೀರಶೈವ ಸಭಾದ ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ, ನಮ ನ್ಯಾಯಕ್ಕಾಗಿ ನೀವೂ ಇದ್ದೀರಿ ಎಂದು ಅಭಿನಂದನೆ ಸಲ್ಲಿಸಿದ್ದೇನೆ , ನಮಗೆ ಪ್ರತ್ಯೇಕ ಮೀಸಲಾತಿ ಬೇಕು ಎಂದು ಹೇಳಿದ್ದಾರೆ.