ವೆಬ್: ನಿನ್ನೆ ಭಾ. ಕಾ. ಗಂಟೆ ರಾತ್ರಿ 9.00 ಕೆ ನಡೆದ ವಕ್ಫ್ ತಿದ್ದುಪಡಿ ಕಾಯ್ದೆಗೆ ವಿಷಯದಲ್ಲಿ ಸಮಾಜಿಕ ಜಾಲ ವಾಟ್ಸ್ ಆಫ್ ಮೆಸ್ಸೆಂಜರ್ ಹ್ಯಾಂಡಲ್ ಪಬ್ಲಿಕ್ ವಾಯ್ಸ್ ನಲ್ಲಿ ನಡೆದ ಆನ್ಲೈನ್ ಸಂವಾದ ಕಾರ್ಯ ಕ್ರಮದಲ್ಲಿ ಯುನಿ ವಫ್ ಮುಖ್ಯಸ್ಥರಾದ ರಫೀಉದ್ದೀನ್ ಕುದ್ರೋಳಿ ನಿರೂಪಕ ರಫೀಕ್ ಪರ್ಲಿಯ ಪ್ರಶ್ನೆಗೆ ವಕ್ಫ್ ಬಗ್ಗೆ ಮಾಹಿತಿ ನೀಡಿದ್ದಾರೆ.
1.ರಫೀಕ್ ಪರ್ಲಿಯಾ:
ಭಾರತ ದೇಶದಾದ್ಯಂತ ಈ ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಚರ್ಚೆ, ಜನಾಂದೋಲನ, ಜನಾಭಿಪ್ರಾಯ ನಡೆಯುತ್ತಾ ಇದೆ, ಈ ವಕ್ಫ್ ಕಾಯ್ದೆ ತಿದ್ದುಪಡಿ 2024 ಅಂದರೆ ಏನು? ಕೇಂದ್ರ ಸರಕಾರ ಯಾಕೆ ಜಾರಿಗೆ ತರಲಿದೆ?
ರಫೀಯುದ್ದೀನ್ ಕುದ್ರೋಳಿ:
ಈ ದೇಶದಲ್ಲಿ ಮುಸಲ್ಮಾನರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದಾರೆ. ಒಂದರ ಹಿಂದೆ ಒಂದು ಸಮಸ್ಯೆ ,ಅನೇಕ ವಿಷಯ ಗಳಿಗೆ ನಾವೇ ಕಾರಣರು? ಇನ್ನು ಅದೆಷ್ಟೋ ಸಮಸ್ಯೆ ಹಿಡನ್ ಅಜೆಂಡಾ ಆಗಿದೆ. ಬಾಬರಿ ಮಸೀದಿ, ತ್ರಿವಳಿ ತಲಾಕ್ ಮೊಹರಂ, ಈಗ ಸಮಾನ ಸಿವಿಲ್ ಕೋಡ್ ಮತ್ತು ಈಗ ವಕ್ಫ್ ತಿದ್ದುಪಡಿ ಕಾಯ್ದೆ,ಇತ್ಯಾದಿ.
2024 ಆಗಸ್ಟ್ 08 ರಂದು ಈಗಿನ ಎನ್.ಡಿ. ಏ ಸರಕಾರ ಒಂದು ಬಿಲ್ ತಂದಿತು.ಒಂದು ವೇಳೆ ಬಿಜೆಪಿಗೆ ಬಹುಮತ ಇರುತ್ತಿದ್ದರೆ ಅವರು ಅದನ್ನು ಚರ್ಚೆಗೆ ತರುತ್ತಾ ಇರಲಿಲ್ಲ ಅದನ್ನು ನೇರವಾಗಿ ಕಾನೂನು ಆಗಿ ಪರಿವರ್ತಿಸುವ ಪ್ರಯತ್ನ ಮಾಡುತ್ತಿದ್ದರು. ಯಾಕೆಂದರೆ ಅವರಿಗೆ ಪಾರ್ಲಿಮೆಂಟ್ ನಲ್ಲಿ ಬಹುಮತ ಇರುತ್ತಿದ್ದರೆ ರಾಜ್ಯ ಸಭೆಯಲ್ಲಿ ಅವರಿಗೆ ಬಹು ಮತ ಇತ್ತು, ಮತ್ತು ರಾಷ್ಟ್ರಪತಿ ಅಂಕಿತ ಅವರಿಗೆ ಬಹಳ ಸುಲಭ. ಆದರೆ ಈ ಬಾರಿ ಎನ್ ಡಿ ಎ ಸರಕಾರ ಅಧಿಕಾರ ಬಂದದ್ದು, ಅದರ ಎರಡೂ ಮಿತ್ರ ಪಕ್ಷಗಳು ತೆಲುಗು ದೇಶಮ್ ಮತ್ತು ಜೆಡಿಯು ಅದು ಅಧಿಕ ಮುಸ್ಲಿಮ್ ಮತವನ್ನು ಪಡೆದು ಗೆದ್ದಿದೆ. ಆದರೆ ಬಿಲ್ ಮಂಡನೆ ಆದಾಗ ಪ್ರಭಲ ವಿರೋಧ ವ್ಯಕ್ತವಾಗಿ ಹಾಲಿ ಕಾಯ್ದೆ ಯ.ಅನುಷ್ಠಾನ ಸಾಧಕ ಭಾದಕ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಕೇಳುವಿಕೆ ಮತ್ತು ಜಂಟಿ ಸಂಸದೀಯ ಸಮಿತಿಗೆ ಹಸ್ತಾಂತರಿಸಿದ್ದಾರೆ. ಸಾಮನ್ಯವಾಗಿ ಬೋಫೋರ್ಸ್ ಹಗರಣ ಇತ್ಯಾದಿ ಗಳು ಈ ಹಿಂದೆ ಸರಕಾರ ಮುಜುಗರ ತಪ್ಪಿಸಲಿಕ್ಕಾಗಿ ಮಂಡಿಸ ಬೇಕೋ ಬೇಡವೋ ಅದನ್ನು ಜೆಪಿಸಿ ಗೆ ನೀಡುತ್ತದೆ. ಜೆಪಿಸಿಯಲ್ಲಿ ಮೇಲ್ಮನೆ, ಕೆಳಮನೆ ಸದಸ್ಯರು ಇದ್ದು ಅವರ ಅಭಿಪ್ರಾಯದ ನಂತರ ಪುನಃ ಸದನದಲ್ಲಿ ಚರ್ಚಿಸಿ ಮಂಡನೆ ಸಾದ್ಯತೆ ಇದೆ.
ನೋಡಿ ಯಾಕ್ಟ್ಸ್ ಏನು ಎಂಬುದರ ಕುರಿತು ಹೆಚ್ಚಿನವರಿಗೆ ಮಾಹಿತಿ ಇಲ್ಲ. ಯಾಕೆಂದರೆ ತುರಾತುರಿಯಲ್ಲಿ ತಂದಂತಹ ಒಂದು ಬಿಲ್ ನಮಗೆ ಕಾಣುವಾಗ ಇದು ತರಾತುರಿಯಲ್ಲಿ ತಂದಂತಹ ಬಿಲ್ ಆಗಿ ಕಂಡರೂ ಕೂಡಾ ಕನಿಷ್ಠ ಇದರ ಹಿಂದೆ ಹತ್ತು ವರ್ಷ ಅವರು ಹೋಮ್ ವರ್ಕ್ ಮಾಡಿದ್ದಾರೆ. ಯಾವ ರೀತಿ ಮುಸಲ್ಮಾನರನ್ನು ಈ ದೇಶದಿಂದ ಉಚ್ಚಾಟಿಸಬೇಕು ಎಂಬ ಆ ವ್ಯವಸ್ಥೆಗೆ ನಾಂದಿ ಹಾಡುವಂತಹ ಕಾರಣಕ್ಕೆ ಅವರು ವಕ್ಫ್ ಬೋರ್ಡು ಮೇಲೆ ಅವರು ಕೈ ಹಾಕಿದ್ದಾರೆ. 1995 ನಲ್ಲಿ ಮೊದಲು ನಾವು ಇತಿಹಾಸ ತಿಳಿಯುವುದಾದರೆ, ವಕ್ಫ್ ಆಸ್ತಿ ದೇಶಕ್ಕೆ ಹೇಗೆ ಬಂದವು. ಈ ದೇಶದಲ್ಲಿ ಭೌಗೋಳಿಕವಾಗಿ ಮೂರು ಪ್ರಮುಖ ಶಕ್ತಿಗಳು ಇದೆ. ಅದರಲ್ಲಿ ಒಂದು ಈ ದೇಶದ ಮಿಲಿಟರಿ,ನಂತರ ರೈಲ್ವೆ, ಅದರ ನಂತರ ಭೂ ಪ್ರದೇಶ ಇರುವುದು ಮುಸ್ಲಿಮ್ ವಕ್ಫ್ ಆಗಿದೆ. ಈ ಒಂದು ಮಾಹಿತಿ ಬಂದ ಬಳಿಕ ಈ ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಿದ್ದರೂ, ಸಂಪತ್ತು ಮುಸ್ಲಿಮರ ಬಳಿ ಇದೆ, ಈ ಕಾರಣದಿಂದ ಈ ವಕ್ಫ್ ಭೂಮಿಯನ್ನು ಕಬಳಿಸುವ ಏಕೈಕ ಕಾರಣದಿಂದ ಈ ಬಿಲ್ ಮಂಡಿಸಲಾಗಿದೆ.
ಇತಿಹಾಸ ಏನೆಂದರೆ ಈ ದೇಶದಲ್ಲಿ ಮುಸಲ್ಮಾನರು ಆಳಿದಾಗ, ಆ ಕಾಲದಲ್ಲೇ ಈ ದೇಶದ ಉದ್ದಗಲದಲ್ಲಿ ಮಸೀದಿಗಳು ಮತ್ತು ಮದರಸಾ ಗಳು ನಿರ್ಮಾಣವಾದವು, ಆಗಲೇ ಅದನ್ನು ಅಲ್ಲಾಹನಿಗಾಗಿ ಅರ್ಪಿಸಿದರು. ವಕ್ಫ್ ಇಲಲ್ಲಾ ಅಂದರೆ ಅಲ್ಲಾಹನಿಗಾಗಿ ಅರ್ಪಿಸುವ ಭೂಮಿ ಅಥವಾ ಸಂಪತ್ತಿಗೆ ಭೂಮಿ ಎಂದು ಕರೆಯುತ್ತೇವೆ, ಅರೇಬಿಯಾದಲ್ಲಿ ಇನ್ನೊಂದು ಅರ್ಥ ನಿಲ್ಲು ಅಥವಾ ನಿಲ್ಲಿಸು. ಅರ್ಪಿಸುವವನು ವಾಕಿಫ್ ಆಗುತ್ತಾನೆ ನಿರ್ವಹಿಸುವವರನ್ನು ಮೂತವಲ್ಲಿ ಎಂದು ಕರೆಯಲಾಗುತ್ತದೆ.ಇದು ಬ್ರಿಟಿಷ್ ಪೂರ್ವದಲ್ಲಿ ಬ್ರಿಟಿಷರಿಗಿಂತ ಮುಂಚೆ ಈ ದೇಶವನ್ನು ಆಳಿದ ಮುಸ್ಲಿಮರು ಭಾರತದಲ್ಲಿ ಅನೇಕ ಪ್ರದೇಶದಲ್ಲಿ ಮಸೀದಿ, ಮದರಸ ಗಳಿಗೆ ಅರ್ಪಿಸಿದ್ದಾರೆ. ಬ್ರಿಟಿಷರ ಕಾಲದಲ್ಲಿ ವಕ್ಫ್ ಬೋರ್ಡು ಅನ್ನು ವಿರೋಧಿಸಿದ್ದು , ಅವರು ಅದನ್ನು ಬರ್ಕಸ್ತು ಗೊಳಿಸಬೇಕು ಎಂದು ವಾದಿಸಿದಾಗ, ಇಲ್ಲಿರುವ ಅಗಾಧ ಸಂಪತ್ತನ್ನು ಅವರು ಕಾನೂನು ಬದ್ಧ ಗೋಳೀಸಿದರು. ಆದುದರಿಂದ ನೆನಪಿನಲ್ಲಿರಬೇಕು, ಸ್ವಾತಂತ್ರ್ಯ ನಂತರ ಆದ ವಕ್ಫ್ ಬೋರ್ಡ್ ಅಲ್ಲ, ಮತ್ತು ಅದರ ಮುಂಚೆಯೇ ಸ್ಥಾಪನೆ ಆಗಿದೆ. ಬ್ರಿಟಿಷರ 200 ವರ್ಷ ಆಡಳಿತದಲ್ಲಿ ವಕ್ಫ್ ಬೋರ್ಡ್ ಇತ್ತು.
ಈ ದೇಶದಲ್ಲಿ ಮುಸಲ್ಮಾನರ ಕೈಯಲ್ಲಿ ಇದ್ದಂತಹ ಸಂಪತ್ತು ಈ ದೇಶ ವಿಭಜನೆ ಆದಾಗ ಇಲ್ಲಿನ ಉತ್ತರ ಭಾರತದ ಅನೇಕ ಮುಸಲ್ಮಾನರು ಈ ದೇಶ ಬಿಟ್ಟು ಪಾಕಿಸ್ತಾನಕ್ಕೆ ಹೋದರು, ಆಗ ಈ ದೇಶದಲ್ಲಿರುವ ಸಂಪತ್ತನ್ನು ವಕ್ಫ್ ಬೋರ್ಡ್ ಗೆ ಅರ್ಪಿಸಿದರು ಮತ್ತು ವಕ್ಫ್ ಬೋರ್ಡು ತನ್ನ ವಶಕ್ಕೆ ಪಡೆದು ಕೊಂಡಿತು. ಕೆಲವರು ಹೇಳುವುದು ಇಲ್ಲಿ ದೇವಸ್ಥಾನ ಇದೆ ಇಲ್ಲಿ ಚರ್ಚ್ ಇದೆ, ಆಗ ಅದಕ್ಕೆ ಇದು ಅನ್ವಯ ವಾಗುವುದಿಲ್ಲವೆ? ಈ ದೇಶದಲ್ಲಿ ಅಂತಹ ಮುಸ್ಲಿಮರ ಸಂಪತ್ತನ್ನು ಒಂದು ವಕ್ಫ್ ಗೆ ಕೊಟ್ಟು ಯಾಕೆ ಧ್ರುವೀಕರಣ ಮಾಡಬೇಕು? ಎಂದು. ನಾವು ಅರ್ಥ ಮಾಡಬೇಕಿದೆ ಈ ದೇಶಾದ್ಯಂತ ಇರುವಂತಹ ದೇವಸ್ತಾ ನಗಳು ಟ್ರಸ್ಟ್ ಮೂಲಕ ನಿರ್ವಹಿಸುತ್ತಾರೆ ಅದನ್ನು ಖಾಸಗಿಯಾಗಿ ಅಥವಾ ಸರಕಾರ ನಡೆಸುತ್ತಾ ಬರುವುದು ಕಾಣುತ್ತದೆ. ವಕ್ಫ್ ಅಂದರೆ ಇದು ಸರಕಾರ ನೀಡಿದ ದೇಣಿಗೆ ಭೂಮಿ ಅಲ್ಲ, ಇದು ನಮ್ಮ ಪೂರ್ವಿಕರು ಮರಣ ಹೊಂದುವಾಗ ಅಲ್ಲಹನಿಗಾಗಿ ಸಮುದಾಯ್ಕಾಗಿ ಮಾದರಸಕ್ಕಾಗಿ ಮಸೀದಿಗಾಗಿ ಅರ್ಪಿಸಿದ ಭೂಮಿ ಅಥವಾ ಇದು ಹಿಂದೂಗಳಿಂದ ಬಲವಂತವಾಗಿ ಕಬಳಿಸಿದಂತಹ ಸಂಪತ್ತು ಅಲ್ಲ.
ಈ ದೇಶದಲ್ಲಿ ಬ್ರಿಟಿಷರು ನಿರ್ಗಮಿಸಿದ ಬಳಿಕ ವಕ್ಫ್ ಅನ್ನು ಸುದಾರಿಸುವ ಒಂದು ಪ್ರಯತ್ನ ಮಾಡಲಾಯಿತು ಮತ್ತು 1954 ನಲ್ಲಿ ವಕ್ಫ್ ಯಾಕ್ಟ್ ಎಂದು ತಿದ್ದುಪಡಿ ಗೋಲಿಸಲಾಯಿತು, ಅದನ್ನು 1995 ನಲ್ಲಿ ಪುನರ್ ಆವೃತ್ತಿ ಗೊಳಿಸಾಯಿತು 1913 ನಲ್ಲಿ ಕೂಡಾ ಇದಕ್ಕೆ ತಿದ್ದುಪಡಿ ಮಾಡಲಾಗಿದೆ. ಆದರೆ ಯಾವ ತಿದ್ದುಪಡಿ ಯಲ್ಲಿ ಕೂಡಾ ಆತಂಕ ಇರಲ್ಲಿಲ್ಲ ಬದಲ್ಲಾಗಿ 2024 ರಲ್ಲಿನ ಉದ್ದೇಶಿತ ತಿದ್ದುಪಡಿ ಮಸೂದಯಲ್ಲಿ ಆತಂಕ ಇದೆ.
ಮೊದಲು ನಮ್ಮ ಕೈಯಲ್ಲಿ ಇರುವ ಸಂಪತ್ತು ಏನು ಎಂದು ತಿಳಿದು ಕೊಳ್ಳಬೇಕು. 8.7 ಲಕ್ಷ ಆಸ್ತಿ ವಕ್ಫ್ ಬಳಿ ಇದೆ. 9.4 ಲಕ್ಷ ಎಕರೆ ಭೂಮಿ ವಕ್ಫ್ ಕೈಯಲ್ಲಿ ಇದೆ ಮೂರು ಸಾವಿರ ಚದರ ಕಿಲೋ ಮೀಟರ್ ಆಸ್ತಿ , ಪುಟ್ಟ ಮೂರು ರಾಜ್ಯದಷ್ಟು , ಅದರ ಮೌಲ್ಯ 1.2 ಲಕ್ಷ ಕೋಟಿ ರುಪಾಯಿ , ವರಮಾನ 12000 ಕೋಟಿ ರುಪಾಯಿ, ಇಷ್ಟು ಅಗಾಧ ಮೌಲ್ಯ ದ ಆಸ್ತಿಯನ್ನು ಮುಸ್ಲಿಮರ ಕೈಯಿಂದ ವಶ ಪಡಿಸಿ ಕೊಳ್ಳುವ ಹೊಸ ಕಾನೂನು ತರಲು ಕೇಂದ್ರ ಹುನ್ನಾರ ನಡೆಸಿದೆ.
2.ರಫೀಕ್ ಪರ್ಲಿಯ: ವಕ್ಫ್ ಜಂಟಿ ಸಂಸದೀಯ ಮಂಡಳಿ ಯ ಮೇಲೆ ಮುಸ್ಲಿಮರು ಭರವಸೆ ಇಡಬಹುದೇ?.ಮತ್ತು ಅದರಲ್ಲಿನ ಅಪಾಯಗಳು ಏನು?
ರಪೀಉದ್ದೀನ್ ಕುದ್ರೋಳಿ: ಕೆಲವು ವಿಚಾರಗಳು, ನೋಡಿ ಅಪಾಯ ಏನು ಎಂಬುದಕ್ಕಿಂತ ಮೊದಲು ಹೊಸ ನಿಯಮದಂತೆ ಯಾವುದಾದರೂ ಸಂಪತ್ತನ್ನು ಯಾರು ಬೇಕಾದರೂ ವಕ್ಫ್ ಬೋರ್ಡ್ ಗೆ ನೀಡ ಬಹುದಿತ್ತು, ಓರ್ವ ಮುಸ್ಲಿಮೇತರ ವ್ಯಕ್ತಿ ತನ್ನ ಭೂಮಿಯನ್ನು ವಕ್ಫ್ ಗೆ ನೀಡಿ ಅರ್ಪಿಸಬಹುದಿತ್ತು , ನೋಂದಣಿ ಕೂಡಾ ಮಾದ ಬಹುದಿತ್ತು, ಈಗಿನ ತಿದ್ದುಪಡಿಯಲ್ಲಿ ಓರ್ವ ಕನಿಷ್ಠ ಪಕ್ಷ ಐದು ಮುಸ್ಲಿಮ್ ಆಗಿರಬೇಕಾಗುತ್ತದೆ. ದಾನಿತ ವಕ್ಫ್ ಆಸ್ತಿಯಲ್ಲಿ ಮಹಿಳೆಯ ವಾರೀಸು ಹಕ್ಕು ಆಸ್ತಿ ವಿವಾದ ಇದ್ದರೆ ಅದನ್ನು ತನಿಖೆ ನಡೆಸಿ ಆ ಮಹಿಳೆಗೆ ಹಿಂಪಡೆಯುವಿಕೆ ಹಕ್ಕು ನೀಡಲಾಗಿದೆ. ವಕ್ಫ್ ಮಂಡಳಿಯಲ್ಲಿ ಈ ತನಕ ಮುಸ್ಲಿಮ್ ಮಾತ್ರ ಇದ್ದು ಹಾಲಿ ಕಾನೂನಿನಲ್ಲಿ ಮುಸ್ಲಿಮೇತರ ಮತ್ತು ಮಹಿಳೆಗೆ ಸದಸ್ಯ ಹಕ್ಕು ಸ್ಥಾಪಿಸಲಾಗಿದೆ. ಈ ಮೊದಲು ಕಲಂ 40 ರ ಪ್ರಕಾರ ವಕ್ಫ್ ಆಸ್ತಿ ಯಾವುದು ಎಂಬುದನ್ನು ಘೋಷಿಸುವ ಅಧಿಕ್ಕಾರ ವಕ್ಫ್ ಮಂಡಳಿಗೆ ಇತ್ತು, ಹಾಲಿ ಕಾನೂನಿನಲ್ಲಿ ಅದನ್ನು ಸರಕಾರದ ಪರವಾಗಿ ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ.
ಇನ್ನೊಂದು ಹೊಸ ತಿದ್ದುಪಡಿಯಲ್ಲಿ ವಕ್ಫ್ ಸಂಭಂಧಿಸಿದ ವಿವಾದ ವ್ಯಾಜ್ಯ ಈ ಹಿಂದೆ ವಕ್ಫ್ ನ್ಯಾಯಾಧಿಕರಣ ದಲ್ಲಿ ಮಾತ್ರ ಮಾಡಲಾಗಿತ್ತು,ಹಾಲಿ ಅಂತಹ ತೀರ್ಪು ಅನ್ನು ಹೈ ಕೋರ್ಟ್ ನಲ್ಲಿ ಪ್ರಶ್ನಿಸುವ ಆಯ್ಕೆ ಮಾಡಲಾಗಿದೆ ಮತ್ತು ಹಾಲಿ ಕಾನೂನಿನಲ್ಲಿ ಅದನ್ನು ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ನೀಡಲಾಗಿದೆ.
3. ರಫೀಕ್ ಪರ್ಲಿಯ : ಹಾಲಿ ಉದ್ದೇಶಿತ ವಕ್ಫ್ ತಿದ್ದುಪಡಿ ಕಾಯ್ದೆಗೆ ಮುಸ್ಲಿಮ್ ಸಮುದಾಯ ಪ್ರಭಲ ವಿರೋಧ ದ ಭಾಗವಾಗಿ ಇಮೇಲ್ ಅಭಿಯಾನ ಕೈ ಗೊಂಡಿದ್ದು, ಅಲ್ಪ ಸಂಖ್ಯಾತರ ಮತ್ತು ಬಹುಸಂಖ್ಯಾತ ಪ್ರತಿಕ್ರಿಯೆ ಯ ಪರಿಣಾಮ ಏನಾಗಬಹುದು?
ರಫೀಉದ್ದೀನ್ ಕುದ್ರೋಳಿ: ವಕ್ಫ್ ತಿದ್ದುಪಡಿ ಅನ್ನು ಈ ದೇಶದಲ್ಲಿ ಅಲ್ಪ ಸಂಖ್ಯಾತ ಯಾ ಬಹು ಸಂಖ್ಯಾತ ಸಂಖೆಯ ಅದಾರದಲ್ಲಿ ಮಾಡುವುದಾದರೆ, ಅಭಿವಾಯದ ಭಾಗವಾಗಿ ಹಾಲಿ ನಡೆಯುತ್ತಿರುವ ಈ ಮೇಲ್ ರವಣೆಯ ಸಂಖ್ಯೆ ಮುಖ್ಯವಲ್ಲ, ಇಡೀ ದೇಶಾದ್ಯಂತ ಈ ಹಿಂದೆ ಕಾಣದಂತಹ ಒಂದು ಒಗ್ಗಟ್ಟು ಹಾಲಿ ಸಂದರ್ಭದ ವಕ್ಫ್ ವಿಷಯದಲ್ಲಿ ಆಗಿದೆ. ಆದರೆ ಮುಸ್ಲಿಮೇತರ ರಲ್ಲಿ ಅಂತಹ ಒಗ್ಗಟ್ಟು ಈಗಲೂ ಕೂಡ ಮೂಡಿ ಬರಲಿಲ್ಲ.ಬಾಬರಿ ಮಸೀದಿ ನ್ಯಾಲಯದಲ್ಲಿ ಇರುವಾಗ ನಮಗೆ ನಿರೀಕ್ಷೆ ಇತ್ತು ಖಂಡಿತವಾಗಿ ತೀರ್ಪು ನಮ್ಮ ಪರವಾಗಿ ಬರಬಹುದು ಎಂದು. ಅದೆಷ್ಟೋ ಸರಕಾರ ಬಂದರೂ, ಹೋರಾಟಗಳು ನಡೆದರೂ, ಅದೆಷ್ಟೋ ಜೀವ ಹಾನಿ ಆದರೂ ಕೂಡ ನಮಗೆ ಭರವಸೆ ಇತ್ತು, ಎಲ್ಲಾ ರಾಜಕೀಯ ಪಕ್ಷಗಳಿಗೆ ತಿಳಿದಿತ್ತು, ಪ್ರಮಾಣಗಳು ಸಾಕ್ಷಿಗಳು ಮುಸ್ಲಿಮ್ ಪರವಾಗಿ ಇದ್ದುದರಿಂದ ತೀರ್ಪು ಮುಸ್ಲಿಮರ ಪರವಾಗಿ ಇರುತ್ತದೆ ಎಂದು. ವಕ್ಫ್ ವಿಷಯದಲ್ಲಿ ಹಾಲಿ ಮುಸ್ಲಿಮರಿಗೆ ಪ್ರತಿರೋಧ ವ್ಯಕ್ತ ಪಡಿಸುವ ಅವಕಾಶ ಸಿಕ್ಕಿದ್ದರೂ ಇದು ಪ್ರತಿರೋಧ ವಿಷಯ ಅಲ್ಲ, ಈಗ ವಕ್ಫ್ ಕುರಿತು ಮುಸ್ಲಿಮರಲ್ಲಿ ಜ್ಞಾನ ಇದೆ, ಮುಸ್ಲಿಮರು ತಮ್ಮ ಪಾರಿಜ್ಞಾನ ದೊಂದಿಗೆ ವಕ್ಫ್ ಅನ್ನು ಅರ್ಥ ಮಾಡಿ ಕೊಂಡಿದ್ದಾರೆ ಎಂದು ತಿಳಿಸಲಿಕ್ಕಾಗಿ 14.7 ಶೇಕಡದಷ್ಟು ಮುಸಲ್ಮಾನರ ಪೈಕಿ, ಅರ್ಧಾದಷ್ಟು ಜನರು ಒಂದು ವೇಳೆ ಈ ಜೇಪಿಸಿ ಗೆ ಮನವಿ ಮಾಡಿದರೆ ಇನ್ನು ನೀವು ತೀರ್ಮಾನ ಮಾಡುವಾಗ ಅಷ್ಟೂ ಸುಲಭವಲ್ಲ, ಒಂದು ಸಮುದಾಯವನ್ನು ಕಡೆಗಣಿಸಿ, ಒಂದು ಯುನೈಟೆಡ್ ಕಿಂಗ್ ಡಮ್ ನಷ್ಟು ವಿಸ್ತಾರವಾದ ಒಂದು ಸಮುದಾಯವನ್ನು ಕಡೆಗಣಿಸಿ ನೀವು ತೀರ್ಮಾನ ಮಾಡಲು ಸಾದ್ಯವಿಲ್ಲ ಎಂದು ಅವರಿಗೆ ಮನವರಿಕೆ ಮಾಡಲು ಮತ್ತು ಈ ದೇಶದ ಮುಸ್ಲಿಮರಲ್ಲಿ ಇನ್ನೂ ಕೂಡಾ ಚಳುವಳಿ ಮಾಡುವಷ್ಟು ಸಾಮರ್ಥ್ಯ ಮತ್ತು ಶಕ್ತಿ ಇನ್ನೂ ಇದೆ ಎಂದು ಅವರ ಗಮನಕ್ಕೆ ತರಲಿಕ್ಕಾಗಿ ಈ ಒಂದು ಅಭಿಯಾನವನ್ನು ಮಾಡಲಾಗಿದೆ. ಈ ಮೇಲ್ ಅಭಿಯಾನ ಅವರ ಮೇಲೆ ಪರಿಣಾಮ ಬೀರುತ್ತದೆ. ಐದು ಕೋಟಿ ಯಷ್ಟು ಜನರು ಒಂದು ವಿಚಾರವನ್ನು ವಿರೋಧಿಸುವುದಾದ್ರೆ ಆ ವಿಷಯವನ್ನು ಕಾನೂನಾಗಿ ತರಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆದುದರಿಂದ ಹತ್ತು ಕೋಟಿಯಷ್ಟು ಈ ಮೇಲ್ ಕಳುಹಿಸಿದರೆ ಅಷ್ಟೂ ದೊಡ್ಡ ಮೊತ್ತದ ಒಂದು ಪ್ರತಿರೋಧ ವನ್ನು ಯಾವುದೇ ರಾಷ್ಟ್ರ ತುಳಿಯಲು ಸಾಧ್ಯವಿಲ್ಲ. ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಇದರ ನೇತೃತ್ವ ವಹಿಸಿದೆ. ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ರಂಗಕ್ಕೆ ಇಳಿದು ಕೆಲಸ ಮಾಡಿದೆ. ಅಂದು ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಶಬಾನೋ ಪ್ರಕರಣದಲ್ಲಿ ಅಂದಿನ ಶರಿಯತ್ ವಿರೋಧಿ ನಿಯಮಕ್ಕೆ ವಿರುದ್ಧವಾಗಿ ಕಾನೂನು ಜಾರಿಗೊಳಿಸಲು ಒತ್ತಾಯಿಸಿ ಸರಕಾರಕ್ಕೆ ಒತ್ತಡ ಹೇರಲು ದೇಶಾದ್ಯಂತ ಕರೆ ನೀಡಿದಾಗ ಮುಸ್ಲಿಮ್ ಸಮುದಾಯದವರನ್ನು ಒಗ್ಗಟ್ಟಿಗೆ ತರುವಲ್ಲಿ ಯಶಸ್ವಿ ಆದದ್ದು ಮಾತ್ರವಲ್ಲ ಚರಿತ್ರೆಯಲ್ಲಿ ಪ್ರಥಮಾ ಬಾರಿಗೆ ಸುಪ್ರೀಮ್ ಕೋರ್ಟಿನಲ್ಲಿ ಬೆಳಗ್ಗಿನ ಜಾವದ ವರೆಗೆ ಚರ್ಚೆ ನಡೆದು. ಶರಿಯತ್ ನಿಯಮಕ್ಕೆ ವಿರುದ್ಧವಾದ ಕಾನೂನನ್ನು ಜಾರಿಗೆ ತರಲು ಯಶಸ್ವಿ ಆಗಿದೆ ಎಂಬುದು ನಾವು ಅರಿತು ಕೊಳ್ಳಬೇಕಿದೆ.
4.ರಫೀಕ್ ಪರ್ಲಿಯಾ: ರಫೀಯುದ್ದೀನ್ ಕುದ್ರೋಳಿ ನೇತೃತ್ವದಲ್ಲಿ, ಒಂದು ನಿಯೋಗ ರಾಜದಲ್ಲಿ ನಡೆದ ಬಹುಕೋಟಿ ಮೊತ್ತದ ವಕ್ಫ್ ಹಗರಣದ ಬಗ್ಗೆ , 2012 ರಲ್ಲಿ ಅಂದಿನ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ತಯಾರಿಸಿದ ವಕ್ಫ್ ಸ್ಥಿರಾಸ್ತಿ ಅಕ್ರಮ ಒತ್ತುವರಿ ವರದಿ ಯು ಈ ಹಿಂದೆ ಈಗಾಗಲೇ ಕರ್ನಾಟಕ ವಿಧಾನ ಸಭೆಯಲ್ಲಿ ಮಂಡನೆಯಾಗ್ಗಿದ್ದು , ಸದ್ರಿ ವರದಿಯ ಚರ್ಚೆ ಆಗ್ರಹಿಸಿ ಹಾಲಿ ವಿಧಾನ ಸಭಾಧ್ಯಕ್ಷರುವ ಶ್ರೀ ಯು.ಟಿ.ಖಾದರ್ ಹತ್ತಿರ ನಿಮ್ಮ ನಿಯೋಗ ಆಗ್ರಹಿಸಿದೆ. ಈ ವರದಿ ಸದನದಲ್ಲಿ ಚರ್ಚೆಗೆ ಬರಬಹುದೇ ಮತ್ತು ತನಿಖೆ ಆಗಬಹುದೇ?.
ರಫೀ ಉದ್ದೀನ್ ಕುದ್ರೋಳಿ: ಕರ್ನಾಟಕದಲ್ಲಿ ಮಾತ್ರ ಅಲ್ಲ, ದೇಶಾದ್ಯಂತ ವಕ್ಫ್ ಅತಿಕ್ರಮಣ ನಡೆದಿದೆ. ಮಹಾರಾಷ್ಟ್ರದ ಪೊಲೀಸ್ ಆಯುಕ್ತಾಲಯ ಕಚೇರಿ, ಮತ್ತು ಅಧಾನಿ ಅವರ ಬಂಗ್ಲೆ ಕೂಡಾ ವಕ್ಫ್ ಆಸ್ತಿ, ಅನೇಕ ದೇವಸ್ಥಾನಗಳು ಇಂದು ವಕ್ಫ್ ಭೂಮಿಯಲ್ಲಿದೆ. ಕೃಷಿ ಭೂಮಿಗಳು ಅನೇಕ ಕಡೆ ವಕ್ಫ್ ಆಸ್ತಿ ಆಗಿದೆ. ದೇಶಾದ್ಯಂತ ಅನೇಕ ಜನರು ಅದನ್ನು ಬಗೆಹರಿಸಿ ಕೊಳ್ಳಬೇಕು, ಎಲ್ಲಿ ಅದು ಅತಿಕ್ರಮಣ ನಡೆದಿದೆ ಅದನ್ನು ತನಿಖೆಗೆ ಒಳಪಡಿಸಬೇಕು ಎಂಬ ಕೂಗು ಕರೆ ಬರುತ್ತಾ ಇದೆ. ಅದರ. ಭಾಗವಾಗಿ ಕರ್ನಾಟಕದಲ್ಲಿ ಅನ್ವರ್ ಮಾಣಿಪ್ಪಾಡಿ ಯವರು ಅವರು ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ವರದಿ ತಯಾರಿಸಿದ್ದಾರೆ. ಅದರಲ್ಲಿ ಅನೇಕ ಕಡೆ ವಕ್ಫ್ ಆಸ್ತಿ ಕಬಳಿಕೆ ಆದ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಾರೆ. ಹೀಗೆ ಪ್ರಸ್ತಾಪವಾದ ವಿಚಾರ ಕರ್ನಾಟಕ ವಿಧಾನ ಸಭೆಯಲ್ಲಿ ಚರ್ಚೆ ಆಗಬೇಕು, ವಿಧಾನ ಸಭಾಧ್ಯಕ್ಷರು ಅಂತಹ ಒಂದು ವರದಿ ಮಂಡನೆ ಆದಾಗ ಅದನ್ನು ಚರ್ಚೆಗೆ ಒಳಪಡಿಸಬೇಕು. ಅದು ಚರ್ಚ್ ಆದಾಗ ಮಾತ್ರ ಮತ್ತು ಪ್ರತಿ ಒಬ್ಬರು ಈ ಚೆಚೆಯಲ್ಲಿ ಭಾಗವಹಿಸಿದಾಗ ಮಾತ್ರ ಅದರ ಸತ್ಯಾಸತ್ಯತೆ ತಿಳಿಯುತ್ತದೆ. ಇದಕ್ಕೆ ಒಂದು ವಿಶೇಷ ಕೌನ್ಸಿಲ್ ರಚನೆ ಆಗಬೇಕಿದೆ. ತನಿಖಾ ತಂಡ ರಚನೆ ಆಗುತ್ತದೆ. ಸರಕಾರ ಮಟ್ಟದ ಅಧಿಕಾರ ಇರುತ್ತದೆ, ಒಂದು ಮಾಜಿ ನ್ಯಾಧೀಶರ, ಅಥವಾ ವಿಶೇಷ ಅಧಿಕಾರ ಇರುವ ವ್ಯಕ್ತಿಗಳಿಂದ ನೇತೃತ್ವದಲ್ಲಿ ತನಿಖೆಗೆ ಒಳಪಡಿಸಿ ಅತಿಕ್ರಮಣ ಆದದ್ದು ಸತ್ಯವೂ ಸುಳ್ಳೋ ಎಂಬುದನ್ನು ತನಿಖೆಗೆ ಒಳ ಪಡಿಸಿ ನಮಗೆ ಸೇರಿದ ಆಸ್ತಿಯನ್ನು ನೀಡಬೇಕಿದೆ. ಈ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚೆ ಅನುಕೂಲ ಆಗಲಿದೆ ಎಂಬ ಕಾರಣಕ್ಕೆ ನಾವು ಇದೇ ಪಬ್ಲಿಕ್ ವಾಯ್ಸ್ ಮತ್ತು ಮುಸ್ಲಿಮ್ ವಾಯ್ಸ್ ಎಂಬ ಎರಡು ಸಾಮಾಜಿಕ ಜಾಲ ತಾಣದ ಪ್ರಮುಖ ವಾಟ್ಸ್ ಆಫ್ ಗ್ರೂಪ್ ಆಯ್ದ ಸದಸ್ಯರು ಸ್ಪೀಕರ್ ಗೆ ಮನವಿ ಮಾಡಿದ್ದೇವೆ.2024 ರಲ್ಲಿ ಒಂದು ಹೊಸ ಕಾನೂನು ಬರುತ್ತದೆ ಈ ದೇಶದ ಪ್ರಧಾನ ಮಂತ್ರಿ ಯವರು ತಂದಿದ್ದು ವಕ್ಫ್ ಆಸ್ತಿಯನ್ನು ಅತಿಕ್ರಮಣ ಮಾಡಿದರೆ ಎರಡು ವರ್ಷಗಳ ಕಾಲ ಉಗ್ರ ಶಿಕ್ಷೆ ಮತ್ತು ಜಮೀನು ರಹಿತ ಬಂಧನ ವಾರೆಂಟ್ ಜಾರಿ ಗೊಳಿಸಲಾಗುತಿತ್ತು. ಈಗಿನ ಕಾನೂನು ಪ್ರಕಾರ ವಕ್ಫ್ ಅತಿಕ್ರಮಣ ನಡೆದರೆ ಸರಳೀಕೃತ ಶಿಕ್ಷೆ ಮಾತ್ರ ಆಗಿದೆ. ಹೀಗೆ ವಕ್ಫ್ ಸೊತ್ತನ್ನು ನೀವು ನೇರವಾಗಿ ಕಬಳಿಸಬಹುದು ಎಂದು ನೀವು ಸೂಚನೆ ಕೊಟ್ಟ ಹಾಗೆ ಎಂದು ಕಾನೂನು ಮತ್ತು ಸಂವಿಧಾನ ತಜ್ನರ ಅಭಿಪ್ರಾಯ ಆಗಿದೆ. ಈ ರಾಜ್ಯದಲ್ಲಿ ಇಂತಹ ಅಕ್ರಮ ಒತ್ತುವರಿ ತನಿಖೆ ಆಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಇದಕ್ಕೆ ವಿಧಾನ ಸಭೆಯಲ್ಲಿ ಚರ್ಚೆ ಆಗಬೇಕಿದೆ.ವಿಧಾನ ಸಭೆಯಲ್ಲಿ ಚರ್ಚೆ ಆಗದಿದ್ದರೆ ನಾವು ಅದನ್ನು ಹೊರಗೆ ಹೋರಾಟ ನಡೆಸಿ ಸರಕಾರಕ್ಕೆ ಅದರ ಬಿಸಿ ಮುಟ್ಟಿಸಬೇಕಿದೆ. ಅದರ ಪ್ರಥಮ ಹಂತದಲ್ಲೇ ಇದ್ದೇವೆ ನನಗೆ ಭರವಸೆ ಇದೆ, ನಾವು ಹಂತ ಹಂತವಾಗಿ ಹೋದರೆ ಇಂದಲ್ಲ ನಾಳೆ ವಿಧಾನ ಸಭೆಯಲ್ಲಿ ಚರ್ಚೆಗೆ ಬರುತ್ತದೆ ಚರ್ಚೆಗೆ ಬಂದರೆ ಯಾರು ಇದನ್ನು ಕಬಳಿಸಿದ್ದಾರೆ, ಎಂಬುದು ಇಡೀ ದೇಶಾದ್ಯಂತ ವಕ್ಫ್ ಅನ್ನು ಅತೀ ಹೆಚ್ಚು ಕಬಲಿಸಿದ್ದು ಮುಸಲ್ಮಾನರು, ಮಸೀದಿಯ ,ಮದರಸಾ ಖನರಸ್ತಾನದ ಸ್ಥಳವನ್ನು ಇನ್ನಿತರರು ಉಯಿಲು ಬರೆದು ಕೊಟ್ಟಿದ್ದನ್ನು ಪರಭಾರೆ ಮಾಡಿದ್ದು ಅಧಿಕ ಸಂಖ್ಯೆಯಲ್ಲಿ ಮುಸಲ್ಮಾನರು ಕಾಣುತ್ತಾರೆ. ಆದುದರಿಂದಲೇ ಇದು ತನಿಖೆಗೆ ಒಳಪಡಿಸುವಾಗ ನನ್ನ ಭಾವನೆ ಹೆಚ್ಚಿನ ಅದನ್ನು ಅನುಭವಿಸುವವರು ಇದನ್ನು ವಿರೋಧಿಸುತ್ತಾರೆ, ಆಗ ಮುಸಲ್ಮಾನರು ಅದನ್ನು ವಿರೋಧಿಸಬೇಕು.
5. ರಫೀಕ್ ಪರ್ಲಿಯ: ರಫೀಉದ್ದೀನ್ ಕುದ್ರೋಳಿ ರವರು ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಚರ್ಚಿಸಬೇಕು ಎಂಬ ನಿಮ್ಮ ಆಗ್ರಹಕ್ಕೆ,ಪ್ರತಿಯಾಗಿ ಸ್ಪೀಕರ್ ರವರು ತನಗೆ. ಸ್ವಯಂ ಚರ್ಚಾ ಪ್ರಸ್ತಾಪ ಸಾದ್ಯವಿಲ್ಲ, ಚರ್ಚೆಗೆ ಬೇಡಿಕೆ ಯಾವುದೇ ಶಾಸಕರ ಕಡೆಯಿಂದ ಬರಬೇಕು ಎಂದಿದ್ದಾರೆ, ಇದರಲ್ಲಿ 224 ಶಾಸಕರಲ್ಲಿ ಯಾವುದಾದರೂ ಓರ್ವ ಮುಸ್ಲಿಮ್ ಶಾಸಕ ಈ ಬಗ್ಗೆ ಬೇಡಿಕೆ ಮುಂದಿಡಲು ಬರಲು ಸಾಧ್ಯವೇ?.
ರಫೀಉದ್ದೀನ್ ಕುದ್ರೋಳಿ: ಕರ್ನಾಟಕ ವಿಧಾನ ಸಭೆಯ 224 ಸದಸ್ಯರಲ್ಲಿ ಅದರಲ್ಲಿ ಕೆಲವರಿಗಾದರೂ ಆತ್ಮ ಸಾಕ್ಷಿ ಇದೆ ಎಂದು ನಾನು ಭಾವಿಸುತ್ತೇನೆ, ಅಧಿಕಾರ ಸಂಪತ್ತು ಶಾಶ್ವತ ಏನು ಅಲ್ಲ, ಆದುದರಿಂದ ನಾವು ನಮ್ಮ ಪ್ರಯತ್ನದ ಭಾಗವಾಗಿ, ನಾನು ಹೇಳುವುದಿಲ್ಲ, ಮುಸ್ಲಿಮ್ ಶಾಸಕರು ಈ.ಬಗ್ಗೆ ಅವರು ದ್ವನಿ ಎತ್ತಿದರೆ ತಾವು ನೋಟೆಡ್ ಆಗುತ್ತಾರೆ ಎಂಬುದು,. ಆದರೂ ಕೂಡಾ ಈ ರಾಜ್ಯದಲ್ಲಿ ಅಪ್ಪಟ ಜಾತ್ಯಾತೀತ ಮನೋ ಭಾವನೆ ಇರುವ ರಾಜಕಾರಾಣಿಗಳಿದ್ದಾರೆ, ಯಾರು ಎಂಬುದು ಎಂದು ನಾವು ಅರಿಯಬೇಕಿದೆ. ನಾನು ಭಾವಿಸುವುದು ಇಲ್ಲಿ ನಮಗೆ ಸಮಸ್ಯೆ ಬಂದಾಗ ಮತ್ತು ಅದನ್ನು ವಿಧಾನ ಸಭೆಯಲ್ಲಿ, ಪಾರ್ಲಿಮೆಂಟ್ ನಲ್ಲಿ ಚರ್ಚಿಸುವುದು ಹೆಚ್ಚಿನವರು ಅಂದರೆ, ಎನ್.ಡಿ. ಏ ನ್ನು ವಿರೋಧಿಸುವ ವರು, ಕೋಮುವಾದವನ್ನು ವಿರೋಧಿಸುವವರು, ಮುಸ್ಲಿಮ್ ವಿಚಾರ ಬಂದಾಗ ಸೈಲೆಂಟ್ ಆಗುತ್ತಾರೆ, ಉದಾಹರಣೆಗೆ ತ್ರಿವಳಿ ತಲಾಖ್ ನಲ್ಲಿ ಮುಸ್ಲಿಮೇತರರು ಅದರಲ್ಲಿ ಮಾತನಾಡಿದಾಗ, ಆರ್ ಜೇ ಡಿ ಯ ಸದಸ್ಯೆ, ಅದನ್ನು ವಿರೋಧಿಸಿದರು, ತಲಾಕ್ ನಲ್ಲಿ ನೀವು ತಿದ್ದುಪಡಿ ತರಬಾರದು, ಕಾನೂನು ಜಾರಿ ಗೊಳಿಸಬಾರದು, ವಿನಂತಿ ಮಾಡಿದರು ಮತ್ತು ಸವಿಸ್ತಾರವಾದ ಖುರ್ ಆನ್ ನ ವಚನ, ಸೂಕ್ತವನ್ನು, ಹೇಳಿ ಹೇಳಿ ಪ್ರಸ್ತಾಪ ಮಾಡಿದರು. ಆದರೆ ಆರ್.ಜೇ.ಡಿ,ಪಕ್ಷ ಟಿ.ಎಂ.ಸಿ ಪಕ್ಷ, ಕಮುನಿಸ್ಟ್ ಪಕ್ಷ,. ಜೇ.ಡಿ.ಯು ಪಕ್ಷ ಇವುಗಳೆಲ್ಲವೂ ಜಾತ್ಯತೀತ ಪಕ್ಷ ಆದರೆ ಎಲ್ಲವೂ ಮೌನ ತಾಳಿದವು. ಯಾಕೆಂದರೆ ಅವರು ಭಾವಿಸಿದ್ದು ಕೂಡಾ ಹಾಗೆ ಈ ತ್ರಿವಳಿ ತಲಾಕ್ ನಿಂದಾಗಿ ಹೆಣ್ಣು ಶೋಷಿತಲಾಗುತ್ತಾಳೆ ಎಂದು, ಈ ತಲಾಕ್ ಮತ್ತು ಶರಿಯತ್ ಇರುವ ಸಂಬಂಧವನ್ನು ವಿವರಿಸುವಂತಃ ಯಾವುದೇ ಪ್ರಯತ್ನವನ್ನು ಮಾಡಿಲ್ಲ.ಮುಸ್ಲಿಮ್ ಶಾಸಕರಿಗೆ ಶರಿಯತ್ ವಿಧಿ ಗೊತ್ತಿಲ್ಲ ಇನ್ನೂ ಮುಸ್ಲಿಮೇತರ ಶಾಸಕರಿಗೆ ಹೇಗೆ ಗೊತ್ತಾಗುವುದು. ನಾವು ಅವರ ಬಳಿ ಹೋಗಬೇಕು, ಇಡೀ ಸವಿಸ್ತಾರವಾದ ಚರ್ಚೆ ನಡೆಸಬೇಕು, ವೈಯುಕ್ತಿಕ ಭೇಟಿ ಮಾಡಬೇಕು, ಮತ್ತು ಅವರಿಗೆ ಹೇಳಬೇಕು, ಎಷ್ಟು ಅಪಾಯಕಾರಿ ವ್ಯವಸ್ಥೆ ಅನ್ನು ಇಲ್ಲಿ ಪಾರ್ಲಿಮೆಂಟ್ ನಲ್ಲಿ ಮಂಡಿಸ್ತಾ ಇದೆ ಇದೆ ಇದು ಸಂವಿಧಾನ ವಿರೋಧಿ, ಸಂವಿಧಾನದ ಆಶಯಕ್ಕೆ ಕೊಡಲಿ ಏಟು ಹಾಕಲಾಗುತ್ತಿದೆ ಎಂದು ನಾವು ಮನೋಜ್ಞವಾಗಿನವರಿಗೆ ತಿಳಿಸಿದರೆ ಈ ದೇಶದ ಅದೆಷ್ಟೋ ಜಾತ್ಯತೀತ ಪಕ್ಷದ ಸದಸ್ಯರು ಒಂದೂ ಪಕ್ಷದ ಮಟ್ಟದಲ್ಲಿ ವೈಯುಕ್ತಿಕ ವಾಗಿ ಅವರು ನಮಗೆ ಬೆಂಬಲಿಸಬಹುದು.
ಇನ್ನಷ್ಟು ವರದಿಗಳು
ವಕ್ಫ್ ವಿಚಾರದಲ್ಲಿ ಮುಸ್ಲಿಮ್ ನಾಯಕರು ದ್ವನಿ ಎತ್ತಲೇ ಬೇಕಿದೆ: ಆನ್ ಲೈನ್ ಸಂವಾದದಲ್ಲಿ ಡಾ. ನಾಝಿಯಾ ಕೌಸರ್.
ವಕ್ಫ್ ಮತ್ತು ಸಮುದಾಯದ ಬಗ್ಗೆ ಚಿಂತನೆ ನಡೆಯಬೇಕಿದೆ: ಆನ್ಲೈನ್ ಸಂವಾದದಲ್ಲಿ ಮೌಲಾನ ಶಾಫಿ ಸಹದಿ.
ಮುಸ್ಲಿಮ್ 2 ಬಿ ಮೀಸಲಾತಿ ಮರುಸ್ಥಾಪನೆ ಆಗಬೇಕಿದೆ: ಆನ್ಲೈನ್ ಸಂವಾದದಲ್ಲಿ ಕೆಎಂಯು ಪ್ರ ಕಾರ್ಯದರ್ಶಿ ಕಾಸಿಮ್ ಸಾಬ್ ಎ.