June 30, 2025

Vokkuta News

kannada news portal

ದ.ಕ.ಜಿಲ್ಲಾಡಳಿತ ಕಚೇರಿಗಳಲ್ಲಿ ಸುಗಮ ಸಂವಹನಕ್ಕಾಗಿ ಕಲಾರಂಗ ನಿಯೋಗದಿಂದ ಬ್ಯಾರಿ ಭಾಷೆ ಪಡಿಕೊರು ಕೃತಿ ವಿತರಣೆ.

ಸಾರ್ವಜನಿಕ ಸೇವಾ ವಲಯದಲ್ಲಿ ಸುಗಮ ಸಂವಹನಕ್ಕೆ ಅನುಕೂಲವಾಗುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬ್ಯಾರಿ ಭಾಷೆಯ ಬಗ್ಗೆ ಸ್ಪರ್ಷತೆ ಹೊಂದಲು ಬ್ಯಾರಿ ಕಲಾರಂಗ ಇತ್ತೀಚೆಗೆ ಬ್ಯಾರಿ ಪದಪುಂಜ ಹೊಂದಿರುವ ಕೃತಿ ರಚಿಸಿ ಬಿಡುಗಡೆ ಮಾಡಿತ್ತು.

ಮಂಗಳೂರು: ದ.ಕ.ಜಿಲ್ಲಾಡಳಿತ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕರಲ್ಲಿ ಸುಗಮ ಸಂವಹನ ಉದ್ದೇಶದಿಂದ, ಬ್ಯಾರಿ ಕಲಾ ರಂಗ ನಿಯೋಗದಿಂದ ದ.ಕ. ಅಪರ ಜಿಲ್ಲಾಧಿಕಾರಿ ರವರನ್ನು ಭೇಟಿ ಮಾಡಿ ಅಬ್ದುಲ್ ಅಝೀಝ್ ಬೈಕಂಪಾಡಿ ರಚಿತ ಬ್ಯಾರಿ ಭಾಷೆ ಪಡಿಕೋರು ಕೃತಿಯನ್ನು ಹಂಚಲಾಯಿತು.

ದ.ಕ.ಜಿಲ್ಲೆ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಅಲ್ಪ ಸಂಖ್ಯಾತ ಸಮುದಾಯ ಬ್ಯಾರಿ ಬಾಷೆ ಮಾತನಾಡುತ್ತಿದ್ದು, ಸಾರ್ವಜನಿಕ ಸೇವಾ ವಲಯದಲ್ಲಿ ಸುಗಮ ಸಂವಹನಕ್ಕೆ ಅನುಕೂಲವಾಗುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬ್ಯಾರಿ ಭಾಷೆಯ ಬಗ್ಗೆ ಸ್ಪರ್ಷತೆ ಹೊಂದಲು ಬ್ಯಾರಿ ಕಲಾರಂಗ ಇತ್ತೀಚೆಗೆ ಬ್ಯಾರಿ ಪದಪುಂಜ ಹೊಂದಿರುವ ಕೃತಿ ರಚಿಸಿ ಬಿಡುಗಡೆ ಮಾಡಿತ್ತು.

ಈ ನಿಟ್ಟಿನಲ್ಲಿ ಇತ್ತೀಚೆಗೆ ಬ್ಯಾರಿಕಲಾ ರಂಗ ನಿಯೋಗ ಅಬ್ದುಲ್ ಅಝೀಝ್ ಬೈಕಂಪಾಡಿ ನೇತೃತ್ವದಲ್ಲಿ ಬ್ಯಾರಿ ಬಾಷೆ ಪಡಿಕೋರು ಕೃತಿಗಳನ್ನು ದ.ಕ.ಜಿಲ್ಲಾಡಳಿತ ಅಪರ ಜಿಲ್ಲಾಧಿಕಾರಿಗೆ ಹಸ್ತಾಂತರಿಸಿತು.. ನಿಯೋಗದಲ್ಲಿ ಹುಸೈನ್ ಕಾಳಿಪಳ್ಳ, ಡಾಕ್ಟರ್ ಸಿದ್ದೀಕ್, ಶಾಹುಲ್ ಹಮೀದ್ ಮತ್ತು ಮೊಹಮ್ಮದ್ ಹನೀಫ್ ಯು ಉಪಸ್ಥಿತರಿದ್ದರು.