June 13, 2024

Vokkuta News

kannada news portal

ಇಂದು ಸಾಮರಸ್ಯ ಮಂಗಳೂರು ವತಿಯಿಂದ ಸಮಾನ ಮನಸ್ಕರ, ಸೌಹಾರ್ಧ ಸಮ್ಮಿಲನ ಕಾರ್ಯಕ್ರಮ.

ಮಂಗಳೂರಿನ ಸಮಾನ ಮನಸ್ಕರ ಸಾಮಾಜಿಕ ಸಂಘಟನೆಯಾದ ಸಮಾರಸ್ಯ ಮಂಗಳೂರು ವತಿಯಿಂದ ಮಂಗಳೂರು ಕದ್ರಿ,ಬಂಟ್ಸ್ ಹಾಸ್ಟೆಲ್, ಕರಂಗ್ಲಾಪಾಡಿ, ಸಿ. ವಿ. ನಾಯಕ್ ಹಾಲ್ ಸಭಾ ಭವನದಲ್ಲಿ ಸೌಹಾರ್ಧ ಸಮ್ಮಿಲನ ಎಂಬ ಸಾಮಾಜಿಕ ಸೌಹಾರ್ಧ ಸಭೆ ನಡೆಯಲಿದೆ.

ಸಂಜೆ ಗಂಟೆ 4.00 ರಿಂದ ಸಭೆಯು ಶ್ರಿ ಗುರು ಪಾದೇಶ್ವರ ಸ್ವಾಮೀಜಿ ವೀರಕ್ತ ಮಠ, ಹುಬ್ಬಳ್ಳಿ ಧಾರವಾಡ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮಾಜಿ ಐ.ಪಿ.ಎಸ್ ಅಧಿಕಾರಿ ಶಶಿಕಾಂತ್ ಸೆಂತಿಲ್ ರವರು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಮಂಗಳೂರು ರಾಮಕೃಷ್ಣ ಮಠ ಇದರ ಏಕಗ ಮ್ಯಾನಂದ ಸ್ವಾಮೀಜಿ, ದೇರೆಬೈಲ್ ಚರ್ಚ್ ನ ಧರ್ಮ ಗುರುಗಳಾದ ಫಾ.ಜೋಸೆಫ್ ಮಾರ್ಟಿಸ್, ಜಮಾಅತ್ ಇಸ್ಲಾಮಿ ಹಿಂದ್ ನ ಜ. ಮೊಹಮ್ಮದ್ ಕುಂಞ ಮಂಗಳೂರು, ಸಹಬಾಳ್ವೆ ಉಡುಪಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಮೃತ್ ಶೆಣೈ, ಸತ್ಯ ಹಾರ್ಮನಿ ಯುವ ವೇದಿಕೆ ತುಳುನಾಡು ಅಧ್ಯಕ್ಷರಾದ ಶ್ರೀ ರಘು ಧರ್ಮ ಸೇನ ಬೆಳ್ತಂಗಡಿ, ರಾ.ಚಿಂತನ್ ಪತ್ರಕರ್ತರು, ಶ್ರೀ ಮಂಜುನಾಥ ಕುರಹಟ್ಟಿ ಹುಬ್ಬಳ್ಳಿ ,ಶ್ರೀಮತಿ ಮಂಜುಳಾ ಹೀರೆಮಠ ರವರು ಭಾಗವಹಿಸಲಿದ್ದಾರೆ, ಎಂದು ಸಾಮರಸ್ಯ ಮಂಗಳೂರು ಇದರ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ವೈ ಕಾಮತ್ ಮತ್ತು ಪ್ರಧಾನ ಕಾರ್ಯದರ್ಶಿ ಕೆ.
ಚೇತನ್ ಕುಮಾರ್, ಕೋಶಾಧಿಕಾರಿ ಪ್ರಕಾಶ್. ಬೀ. ಸಾಲ್ಯಾನ್, ಸಂಚಾಲಕರಾದ ಶ್ರೀ ಮೊಹಮ್ಮದ್ ಕುಂಜತ್ತ ಬೈಲ್,ಜೆರಾಲ್ಡ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.