July 27, 2024

Vokkuta News

kannada news portal

ಬಹುರಾಜ್ಯ ಸೊಸೈಟಿಯಿಂದ ಗ್ರಾಹಕರಿಗೆ ವಂಚನೆ ಆರೋಪ: ಕೆ.ಆರ್.ಎಸ್ ಪಕ್ಷದಿಂದ ಪ್ರತಿಭಟನೆ.

ಸುಮಾರು 30 ಗ್ರಾಹಕರ ವಂಚನೆಯ ಮೊತ್ತವು ಸುಮಾರು ರೂಪಾಯಿ 4.50 ಲಕ್ಷ ಆಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮಂಗಳೂರು: ಮಂಗಳೂರು ಕೇಂದ್ರವಾಗಿ ಇರಿಸಿಕೊಂಡು, ಮಲ್ಲಿಕಟ್ಟೆಯ ಖಾಸಗಿ ಸಂಕೀರ್ಣ ಒಂದರಲ್ಲಿ 2016 ನೇ ಇಸವಿಯಲ್ಲಿ ಸ್ಥಾಪಿತ ಗೊಂಡ ಎನ್ನಲಾದ ಬಹುರಾಜ್ಯ ಕೊ.ಆಪರೇಟಿವ್ ಸೊಸೈಟಿ ಯ ಪ್ರಮುಖ ಪದಾಧಿಕಾರಿಗಳು ಮುಂದಿನ 4 ವರ್ಷಗಳಲ್ಲಿ ಮಧ್ಯಸ್ಥ ದಾರರನ್ನು ನೇಮಿಸಿ ಸುಮಾರು 3ರಿಂದ 5 ಕೋಟಿಯಷ್ಟು ಹಣವನ್ನು ಸಂಗ್ರಹಿಸಿ ಅಂತಹ ಟೇವಣಿ ಮೊತ್ತವನ್ನು ಯಾ ಅದರ ಪ್ರತಿಫಲ ಮೊತ್ತವನ್ನು ಗ್ರಾಹಕರಿಗೆ ಮರುಪಾವತಿ ಮಾಡದೇ ವಂಚಿಸಲಾಗಿದೆ ಎಂದು ಆರೋಪಿಸಿ ಇಂದು ಮಂಗಳೂರಿನ ಮಿನಿ ವಿಧಾನಸೌಧ ಎದುರುಗಡೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಡೊಮಿನಿಕ್ ಅಲೆಗ್ಸಾಂಡರ್ ಡಿ ಸೋಜಾ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ,ಹಲವಾರು ಗ್ರಾಹಕರು ನಂತರ ಮೆರವಣಿಗೆ ಮೂಲಕ ಆರೋಪಿತ ಸಂಸ್ಥೆಯ ವಿರುದ್ಧ ಘೋಷಣೆ ಕೂಗಿ ಮಂಗಳೂರು ಪೊಲೀಸು ಆಯುಕ್ತರ ಕಚೇರಿ ವರೆಗೆ ತೆರಳಿ ದೂರು ಸಲ್ಲಿಸಿದರು.

ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ದಲ್ಲಿ ತೆರಳಿ ಅಪರ ಜಿಲ್ಲಾಧಿಕಾರಿ ರವರಿಗೆ ಕೂಡಾ ಮನವಿ ಸಲ್ಲಿಸಲಾಯಿತು.

ಪ್ರಕರಣವನ್ನು ಆರೋಪಿಸಿ ಈ ಹಿಂದೆ ಪೊಲೀಸು ದೂರು ಸಲ್ಲಿಸಿದರೂ ಕೂಡ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಲಾಗಿತ್ತು.

ಸುಮಾರು 30 ಗ್ರಾಹಕರ ವಂಚನೆಯ ಮೊತ್ತವು ಸುಮಾರು ರೂಪಾಯಿ 4.50 ಲಕ್ಷ ಆಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಆರೋಪಿತ ಸೊಸೈಟಿಯ ಸರ್ವ ಪದಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಪ್ರತಿಭಟನಾ ಕಾರರು ಬೇಡಿಕೆ ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಂಘಟನಾ ಕಾರ್ಯದರ್ಶಿ ಆದ ಪ್ರವೀಣ ಚಂದ್ರ ರಾವ್,ಕಾರ್ಯದರ್ಶಿ ಶ್ರೀಮತಿ ಶಾರದಾ ಸದಸ್ಯರಾದ ಆಲ್ವಿನ್ ಡಿ ಸೋಜ, ಪ್ರಸಾದ್,ಪ್ರಕಾಶ್, ಸಂತ್ರಸ್ತ ಗ್ರಾಹಕರಾದ ಜೆಸಿಂತಾ,ಮರಿಯ, ಮೇರಿ,ಲೀಲಾವತಿ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಘಟನೆಯ ಈಶ್ವರ್ ರಾಜ್, ಅಜಯ್ ಡಿಸಿಲ್ವಾ, ಆಗಷ್ಟಿನ್ ಡಿ ಸೋಜ ಮತ್ತು ಇತರರು ಭಾಗವಹಿಸಿದ್ದರು.