November 7, 2024

Vokkuta News

kannada news portal

ಯುನೈಟಡ್ ಲೀಗಲ್ ಟ್ರಸ್ಟ್ ನಿಯೋಗದಿಂದ ವಕ್ಫ್ ಅಧ್ಯಕ್ಷರ ಭೇಟಿ ಮತ್ತು ಅವಹಾಲು ಸಲ್ಲಿಕೆ.

ಮಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಮೌಲಾನ ಶಾಫಿ ಸಹದಿ ರವರನ್ನು ಇಂದು ಮಂಗಳೂರಿನ ವಕ್ಫ್ ಕಚೇರಿಯಲ್ಲಿ ಯುನೈಟೆಡ್ ಲೀಗಲ್ ರಿಸರ್ಚ್ ಮತ್ತು ಜಸ್ಟಿಸ್ ಟ್ರಸ್ಟ್ ನ ನಿಯೋಗ ಭೇಟಿ ಮಾಡಿ ವಕ್ಫ್ ಸಂಬಂಧಿತ ವಿಷಯಗಳ ಬಗ್ಗೆ ಅವಹಾಲು ಸಲ್ಲಿಸಲಾಯಿತು.

ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ನಾಸಿರ್ ಲಕ್ಕಿ ಸ್ಟಾರ್ ರವರ ಸಮಕ್ಷಮದಲ್ಲಿ ಹಿರಿಯ ಮತ್ತು ಕಿರಿಯ ವಕೀಲರ ನಿಯೋಗ ಅಧ್ಯಕ್ಷರನ್ನು ಭೇಟಿ ಮಾಡಿ ಪ್ರಮುಖವಾಗಿ,ಜಿಲ್ಲಾ ವಕ್ಫ್ ಇಲಾಖೆಯಿಂದ ಜ್ಯಾರಿ ಗೊಳಿಸುತ್ತಿದ್ದ ಮುಸ್ಲಿಮ್ ದಂಪತಿಗಳ ವಿವಾಹ ನೋಂದಣಿ ಪ್ರಮಾಣ ಪತ್ರದ ಸ್ಥಗಿತ ವಾಗಿದ್ದು, ಶೀಘ್ರದಲ್ಲಿಯೇ ಪುನರ್ ಜಾರಿಗೆ ಒತ್ತಾಯಿಸ ಲಾಯಿತು.ವಿವಾಹ ನೋಂದಣಿ ಪ್ರಮಾಣ ಪತ್ರವು ಪ್ರವಾಸಿ ದಂಪತಿಗಳಿಗೆ ವಿದೇಶಿ ಪ್ರಯಾಣ ಮತ್ತು ವಲಸೆ ದಸ್ತಾವೇಜೀಕರಣಕ್ಕೆ ಅತೀ ಮುಖ್ಯ ದಾಖಲೆ ಆಗಿರುತ್ತದೆ.

ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ವಕ್ಫ್ ಇಲಾಖೆ ಈಗಾಗಲೇ ಜ್ಯಾರಿ ಗೊಳಿಸುತ್ತಿದ್ದು, ಕಳೆದ ಆರು ತಿಂಗಳಿಂದ ಈಚೆಗೆ ಸರಕಾರದ ಆದೇಶದ ಮೇರೆಗೆ ಜ್ಯಾರಿಯನ್ನು ಸ್ಥಗಿತ ಗೊಳಿಸಲಾಗಿದೆ.

ನಿಯೋಗದಲ್ಲಿ ಹಿರಿಯ ವಕೀಲರಾದ ಬಿ. ಎ.ಮೊಹಮ್ಮದ್ ಹನೀಫ್, ಸುಲೈಮಾನ್ ಸುರಿಬೈಲ್,ಅಬ್ದುಲ್ ಅಝೀಝ್ ನೋಟರಿ ಮತ್ತು ಶುಕೂರ್ ಮತ್ತಿತರ ವಕೀಲರು, ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.