ಮಂಗಳೂರು: ಬ್ಯಾರಿ ಕಲಾ ರಂಗ ಮೈಕಾಲ ಮಂಗಳೂರು ವತಿಯಿಂದ ಇಂದು ‘ ಬ್ಯಾರಿ ಬಾಷೆರೊ ಕೊಂಡಾಡ್ ರೊ ನಾಲ್ ‘ ಎಂಬ ಭಾಷಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿತ್ತು.ಕಾರ್ಯಕ್ರಮವನ್ನು ಉದ್ದೇಶಿಸಿ ತುಳು ಮತ್ತು ಕನ್ನಡ ಚಲನ ಚಿತ್ರ ಸಂಗೀತ ನಿರ್ದೇಶಕ ವಿಜಯ ಕುಮಾರ್ ಮಾತನಾಡುತ್ತಾ ಬ್ಯಾರಿ ಭಾಷೆ ಪಿರಿಸತ್ತೊ ಬಾಷೆ (ಸ್ನೇಹದ ಬಾಷೆ) ಎಂದು ಹೇಳಿ ಮೊಹಮ್ಮದ್ ಬಡ್ಡುರ್ ರಚಿತ ‘ ಪಡಚೋನೋ ನೀನೇ ಅಲ್ ಹಮ್ ದುಲಿಲ್ಲಾಹ್’ ಎಂಬ ಸಂಗೀತದ ಪ್ರಥಮ ಸಾಲುಗಳನ್ನು ಹಾಡಿದರು. ಮಂಗಳೂರು ಸ್ಟೇಟ್ ಬ್ಯಾಂಕ್ ಸಮೀಪದ ನೆಲ್ಲಿಕ್ಕಾಯಿ ರಸ್ತೆಯಲ್ಲಿನ ಪಾಯ ನೀರ್ ಕಾಂಪ್ಲೆಕ್ಸ್ ಕಟ್ಟಡ ದ ಮೆಲ್ಮಹಡಿ ಯಲ್ಲಿನ ನೇಷನಲ್ ಟ್ಯು ಟರಿಯಲ್ ಸಭಾಂಗಣ ದಲ್ಲಿ ಬೆಳಿಗ್ಗೆ ಗಂಟೆ 11.00 ಕೆ ಜರುಗಿದ ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಅಬ್ದುಲ್ ಅಝೀಝ್ ಬೈಕಂಪಾಡಿ ವಹಿಸಿದ್ದರು, ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಆದ ಮನ್ಸೂರ್ ಅಝಾದ್ ರವರು ಭಿತ್ತಿಪತ್ರ ಬಿಡುಗಡೆ ಮಾಡಿದರು. ಅತಿಥಿಯಾಗಿ ಕರ್ನಾಟಕ ರಾಜ್ಯ ಜೇ.ಡಿ.ಎಸ್. ಕಾರ್ಯದರ್ಶಿ ಆದ ಹೈದರ್ ಪರ್ತಿಪ್ಪಾಡಿ, ಸಾರಂಗ್ ರೇಡಿಯೋ ದ್ವನಿ ಸಂಸ್ಥೆಯ ವರದಿಗಾರ ಎಡ್ವರ್ಡ್ ಲೋಬೋ ರವರು ಭಾಗವಹಿಸಿದ್ದರು.
ಅಕ್ಟೋಬರ್ 03 ರಂದು ಈ ಹಿಂದೆ ಕರ್ನಾಟಕ ಸರಕಾರದ ಸಂಸ್ಕೃತಿ ಇಲಾಖೆ ಬ್ಯಾರಿ ಭಾಷೆಯ ಮಹತ್ವವನ್ನು ಪರಿಗಣಿಸಿ,ಬ್ಯಾರಿ ಸಾಹಿತ್ಯವನ್ನು ಉತ್ತೇಜಿಸುವ ಮತ್ತು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಅಡಿಯಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಯನ್ನು ಮಂಜೂರು ಮಾಡಿತ್ತು. ಆ ಮೂಲಕ ಈ ಹಿಂದೆ ಸರಕಾರ ಬ್ಯಾರಿ ಸಾಹಿತ್ಯವನ್ನು ಮಾನ್ಯತೆಯ ವ್ಯಾಪ್ತಿ ಯಲ್ಲಿ ಒಳಪಡಿಸಿತ್ತು. ಈ ದಿನವನ್ನು ಬ್ಯಾರಿ ಬಾಷಾ ನಾಲಾಚಾರಣೆ ಎಂದು ಪರಿಗಣಿಸಿ ಆಚರಿಸಲಾಗಿದೆ.
ಸಭೆಯಲ್ಲಿ ದ.ಕ.ಕಾಂಗ್ರೆಸ್ ಕಾರ್ಯದರ್ಶಿ ಆದ ಸಿ.ಎಂ.ಮುಸ್ತಾಫಾ,ಅಬ್ದುಲ್ ಮಜೀದ್ ಸೂರಲ್ಪಾಡಿ,ಅಬ್ದುಲ್ ಹಮೀದ್ ಉಳ್ಳಾಲ, ಆಸಿಫ್ ಬೆಂಗ್ರೆ, ಎಚ್ಚ್ ನಂದಾವರ, ಲತೀಫ್ ಬ್ಲೂ ಸ್ಟಾರ್, ಕಾದರ್ ಹಾಜಿ ಕಂದಕ್,ಅಯ್ಯೂಬ್ ಬಿಕರ್ಣಕಟ್ಟೆ, ಮೊಹಮ್ಮದ್ ಹನೀಫ್.ಯು, ಸಿದ್ದೀಕ್ ಪಾಂಡೇಶ್ವರ್, ಹುಸೈನ್ ಕೂಳೂರು, ಅಬ್ದುಲ್ ಸಮದ್,ಅಬ್ದುಲ್ ಜಲೀಲ್ ಅದ್ದು ಕೃಷ್ಣಾಪುರ, ಇಸ್ಮಾಯಿಲ್ ಮೂಡು ಶೆಡ್ಡೆ,ಇಕ್ಬಾಲ್ ಕುತ್ತಾರ್,ಸುರಯ್ಯ ಮೇಡಂ, ನ್ಯಾಷನಲ್ ಟ್ಯುಟೋರಿಯಲ್ ಆದ್ಯಾಪಿಕೆ ಯರಾದ, ಶಫೀದ,ಅಶೂರಾ, ನಾಫಿಯರವರು ಭಾಗವಹಿಸಿದ್ದರು.
ಬ್ಯಾರಿ ಕಲಾ ರಂಗದ ಪ್ರಧಾನ ಕಾರ್ಯದರ್ಶಿ ಆದ,ಖಾಲಿದ್ ಉಜಿರೆ ರವರು ಪ್ರಾಸ್ತಾವಿಕ ಭಾಷಣ ಮಾಡಿ ಬ್ಯಾರಿ ಭಾಷೆಯ ಮಹತ್ವ, ಪ್ರಾಮುಖ್ಯತೆ,ಅನಿವಾರ್ಯತೆ ಬಗ್ಗೆ ಮಾತನಾಡಿ ಆಥಿತಿ ಗಳನ್ನು ಪರಿಚಯಿಸಿದರು. ಸಾರಂಗ್ ರೇಡಿಯೋ ದ್ವನಿ ವರದಿಗಾರ ಮಾತನಾಡಿ ಕಳೆದ ಹನ್ನೆರಡು ವರ್ಷದಿಂದ ಕರಾವಳಿ ಯಾದ್ಯಂತ ಸಂಚರಿಸಿ ಬ್ಯಾರಿ ಭಾಷೆಯ ವಿವಿಧ ಜನರೊಂದಿಗೆ ಲೈವ್ ಸಂದರ್ಶನ ಮಾಡಿದ್ದೇನೆ ಎಂದು ತನ್ನ ಕಟು ಅನುಭವ ವನ್ನು ಬ್ಯಾರಿ ಭಾಷೆಯಲ್ಲಿ ಮಾತನಾಡಿದರು. ಅಬ್ದುಲ್ ಅಝೀಝ್ ಬೈಕಂಪಾಡಿ.ರವರು ಅವರಿಗೆ ನೀಡಿದ ಸಹಕಾರವನ್ನು ಸ್ಮರಿಸಿದರು ಕೊನೆಯಲ್ಲಿ ಬ್ಯಾರಿ ಚುಟುಕು ಹೇಳಿದರು.
ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ನ ಪ್ರಧಾನ ಕಾರ್ಯದರ್ಶಿ ಆದ ಮನ್ಸೂರ್ ಆಝಾದ್ ಮಾತನಾಡಿ ಈ ಹಿಂದೆ ಪುರಭವನದಲ್ಲಿ ನಡೆದ ಬ್ಯಾರಿ ಮೇಳ ಬಗ್ಗೆ ಪ್ರಸ್ತಾಪಿಸಿದರು. ಅವರು ಬ್ಯಾರಿ ಚೆಂಬರ್ ಸ್ಥಾಪನೆ ಮಾಡುವಾಗ ಮಧ್ಯ ಪ್ರಾಚ್ಯ ದೇಶದಲ್ಲಿ ಕರಾವಳಿ ಭಾಗದ ಉನ್ನತ ಉದ್ಯಮಿಗಳು, ವ್ಯಾಪಾರಸ್ಥರ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಬ್ಯಾರಿ ಬಾಷೆಯಲ್ಲಿ ಸಂವಹನ ನಡೆಸಲಾಯಿತು, ಮತ್ತು ಆ ಬಗ್ಗೆ ನಂತರದ ಅವಧಿಗಳಲ್ಲಿ ಈ ಬಗ್ಗೆ ಶ್ಲಾಘನೆ ವ್ಯಕ್ತವಾಯಿತು,ಎಂದು ಅನುಭವದ ಮಾತು ಹೇಳಿದರು.
ಹೈದರ್ ಪರ್ತಿಪ್ಪಾಡಿ ಮಾತನಾಡಿ ಬ್ಯಾರಿ ಮಹಿಳೆಯಲ್ಲಿ ಅಧಿಕ ಸಂಖ್ಯೆಯಲ್ಲಿ ವಿಧ್ಯಾಭ್ಯಾಸ ಪಡೆದು ಸಮಾಜದ ಅಭ್ಯುದಯಕ್ಕೆ ಸಹಕರಿಸಬೇಕು. ಸಮಾಜದ ಅಭಿವೃದ್ಧಿ ಬ್ಯಾರಿ ಮಹಿಳೆ ಶಿಕ್ಷಣ ಪಡೆದಾಗ ಮಾತ್ರ ಎಂದು ಹೇಳಿದರು. ಮತ್ತು ಬ್ಯಾರಿ ಪ್ರಾದ್ಯಪಿಕೆಯರನ್ನು ಶ್ಲಾಘಿಸಿದರು.
ಖಾಲಿದ್ ಉಜಿರೆ ರವರು ನಬಿ ಮುತ್ತು ರಸೂಲಲ್ಲೇ,,, ಎಂಬ ಬ್ಯಾರಿ ಹಾಡು ಹಾಡಿದರು.
ಭಿತ್ತಿ ಪತ್ರ ಬಿಡುಗಡೆಗೆ ಮುನ್ನ ನ್ಯಾಷನಲ್ ಟ್ಯೂಟೋ ರಿಯಲ್ ವಿಧ್ಯಾರ್ಥಿಗಳು ರಿಂದ ‘ ಚೆರಿಯೋ ರಾಜಾವು ‘ ಎಂಬ ಆಗಮನ ಪ್ರಹಸನ ನಡೆಯಿತು.
ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ ಮಾತನಾಡಿ ಬ್ಯಾರಿ ಜನತೆ ತಮ್ಮ ಮನೆಗಳಲ್ಲಿ ಮಕ್ಕಳಲ್ಲಿ ಸಂವಹನ ನಡೆಸುವಾಗ ಕುಟುಂಬ ಸಂಬಂಧಿಕರ ಹೆಸರುಗಳನ್ನು ಇಂಗ್ಲಿಷ್ ಬಾಷೆಯ ಬದಲಿಗೆ ಬ್ಯಾರಿ ಬಾಷೆಯ ಪದಗಳನ್ನು ಬಳಸುವ ಅನಿವಾರ್ಯತೆ ಇದೆ. ಬ್ಯಾರಿ ಬಾಷೆಯಲ್ಲಿ ಲಭ್ಯವಿರುವಶ್ಟು ಕುಟುಂಬ ಸಂಬಂಧಿಕರ ಹೆಸರಿನ ಪದಬಳಕೆ ಇನ್ನಿತರ ಭಾಷೆಗಳಲ್ಲಿ ಲಭ್ಯವಿಲ್ಲ ಎಂದು ಹೇಳಿದರು. ಕರಾವಳಿ ಜಿಲ್ಲೆಗಳಲ್ಲಿ ಮಂಗಳೂರಿನ ಬ್ಯಾರಿ ಬಾಷೆ ಉಚ್ಚಾರ ಮೂಲ ಬ್ಯಾರಿ ಭಾಷೆ ಆಗಿದ್ದು ಇತರ ವ್ಯತ್ಯಯ ಉಚ್ಛಾಟಿತ ಭಾಷೆ ಕೂಡ ಬ್ಯಾರಿ ಆಗಿದೆ.ಬ್ಯಾರಿ ಭಾಷೆ ಮಂಗಳೂರಿನ ಮುಸ್ಲಿಮ್ ಮಾತ್ರವಲ್ಲದೆ,ಮೊಗವೀರ, ಬೆಲ್ಛಡ ಸಮುದಾಯದವರು ಮಾತನಾಡುತ್ತಾರೆ. ಆದರೆ ಅದನ್ನು ಅವರು ಮಲಯಾಳಂ ಎಂದು ಕರೆಯುವುದು ಖೇದಕರ ಎಂದರು.
ಧಾರ್ಮಿಕ ಬೋಧನಾ ಕೇಂದ್ರಗಳಲ್ಲಿ ಬ್ಯಾರಿ ಭಾಷಾ ಬಳಕೆ, ಮನೆಯಲ್ಲಿ ಮಕ್ಕಳೊಂದಿಗೆ ಬ್ಯಾರಿ ಭಾಷೆಯಲ್ಲಿ ಸಂವಹನ ಸಂಭಾಷಣೆ, ವಾಲ್ ಪ್ರವಚನ, ನಿಖಾ ಸಂದರ್ಭಗಳಲ್ಲಿ ಇದೇ ಭಾಷೆ ಬಳಕೆ, ಬರಹಗಾರರು ಇದೇ ಭಾಷೆಯಲ್ಲಿ ತಮ್ಮ ಬರಹ, ಕಥೆ,ಕವನ, ಹಾಡು ಇತ್ಯಾದಿ ಬರೆಯುವಿಕೆಗೆ ಉತ್ತೇಜನ,.ಬ್ಯಾರಿ ಬರಹಗಾರರಿಗೆ ಧನ ಸಹಾಯ,ಬ್ಯಾರಿ ಸಂಸ್ಕೃತಿ ಯನ್ನು ಮುಂದಿನ ಪೀಳಿಗೆಗೆ ಪರಿಚಯ, ಇನ್ನಿತರ ಭಾಷೆ ಯೊಂದಿಗೆ, ಬ್ಯಾರಿ ಭಾಷೆಯ ಒಡನಾಟ ಅಧಿಕ ಗೊಳಿಸುವುದು, ಬ್ಯಾರಿ ಬಾಷಾ ಉತ್ತೇಜಿತ ಸಂಸ್ಥೆಗಳಿಗೆ ಬೆಂಬಲ ಇತ್ಯಾದಿ ಘೋಷ ವಾಕ್ಯದೊಂದಿಗೆ ಭಿತ್ತಿ ಪತ್ರ ಅಭಿಯಾನ ವನ್ನು ಕೈ ಗೊಂಡಿದೆ.
ಕೊನೆಯಲ್ಲಿ ಕಲಾರಂಗದ ಸಂಚಾಲಕರಾದ ಹುಸೈನ್ ಕಾಟಿಪಳ್ಳ ಧನ್ಯವಾದ ಸಮರ್ಪಿಸಿದರು.
ಇನ್ನಷ್ಟು ವರದಿಗಳು
ಮುಸ್ಲಿಮ್ ಒಕ್ಕೂಟದಿಂದ ಷರೀಫ್ ದೇರಳಕಟ್ಟೆ ರವರಿಗೆ ಹಜ್ ಬೀಳ್ಕೊಡುಗೆ.
ಪಿ.ಎ.ಗ್ರೇಡ್ ಕಾಲೇಜು, ರೆಡ್ ಕ್ರಾಸ್,ಲೇಡಿ ಗೋಶನ್ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರ.
ಮೂಡಾ ಸದಸ್ಯರಾಗಿ ನೀರಜ್ ಚಂದ್ರ,ಸುಮನ್ ದಾಸ್, ಅಬ್ದುಲ್ ಜಲೀಲ್,ಸಬಿತಾ ಮಿಸ್ಕಿತ್ ಆಯ್ಕೆ.