June 22, 2024

Vokkuta News

kannada news portal

ಆ.25 ರಂದು ನಗರದಲ್ಲಿ ಯುನಿವೆಫ್ ಕರ್ನಾಟಕ ಸಂಘಟನೆಯಿಂದ ಸಂವಾದ ಕಾರ್ಯಕ್ರಮ.

ಬಹು ಧಾರ್ಮಿಕ ವಿದ್ವಾಂಸರ ಮತ್ತು ಸಹ ಧರ್ಮೀಯ ಮಿತ್ರರ ಸಂವಾದ ಕಾರ್ಯಕ್ರಮ

ಮಂಗಳೂರು: ಯೂನಿವರ್ಸಲ್ ವೆಲ್ಫೇರ್ ಫಾರಮ್ ಕರ್ನಾಟಕ ಮಂಗಳೂರು ಸಂಘಟನೆಯು ತನ್ನ ವರ್ಷಂಪ್ರತಿ ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿರುವ ‘ ಅರಿಯಿರಿ ಮನುಕುಲದ ಪ್ರವಾದಿ ಮುಹಮ್ಮದ್ ಸ.ಅ’ ಸಂದೇಶ ಪ್ರಚಾರ ಕಾರ್ಯಕ್ರಮದ ಅಂಗವಾಗಿ ನಗರದ ಬಲ್ಮಠ ಮಿಷನ್ ಕಾಂಪೌಂಡ್ ಶಾಂತಿ ನಿಲಯ ಸಭಾಂಗಣದಲ್ಲಿ ಧರ್ಮ ಗ್ರಂಥಗಳು ಮತ್ತು ಸಾಮಾಜ ಪರಿವರ್ತನೆ ಎಂಬ ಬಹು ಧಾರ್ಮಿಕ ವಿದ್ವಾಂಸರ ಮತ್ತು ಸಹ ಧರ್ಮೀಯ ಮಿತ್ರರ ಸಂವಾದ ಕಾರ್ಯಕ್ರಮವನ್ನು 25 ನೇ ಆಗೂಸ್ತು 2023 ರಂದು ಈ ವರ್ಷದ ಅಭಿಯಾನದ ಭಾಗವಾಗಿ ಆಯೋಜಿಸಿದೆ.

ಅರೇಬಿಯಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮಾನವೀಯತೆಯ ಪ್ರತಿಪಾದನೆಯ ಪ್ರವಾದಿ ಸಂದೇಶ ಅಭಿಯಾನವನ್ನು ವಿವಿಧ ರೀತಿಯ ಕಾರ್ಯಕ್ರಮ ರೂಪಿಸುವುದರೊಂದಿಗೆ, ವಾಹನ ಜಾಥಾ, ಬೀದಿ ಬದಿ ಕಾರ್ಯಕ್ರಮ,ಕರಪತ್ರ ವಿತರಣೆ,ಅರಿವು ಮತ್ತು ಜಾಗೃತಿ ಸಭೆ,ಸಮಾಲೋಚನೆ ಸಭೆ ಇತ್ಯಾದಿ ಕಾರ್ಯಕ್ರಮ ದೊಂದಿಗೆ, ಬಹು ಧರ್ಮೀಯ ಸಹೋದರರಲ್ಲಿ ಮೂಡಿರುವ ಧಾರ್ಮಿಕ ಅಪನಂಬಿಕೆಗಳನ್ನು ಹೋಗಲಾಡಿಸುವ ಸಂವಾದ ಕಾರ್ಯಕ್ರಮವನ್ನು ಈ ನಿಟ್ಟಿನಲ್ಲಿ ಹಮ್ಮಿ ಕೊಂಡಿದೆ.

ಸಂಜೆ 6.45 ರಿಂದ ಆರಂಭವಾಗುವ ಸಂವಾದ ಸಭೆಯಲ್ಲಿ ಪ್ರಮುಖ ಭಾಷಣಕಾರರಾಗಿ ಶ್ರೀ ಶಿಕಾರಿಪುರ ಕೃಷ್ಣಮೂರ್ತಿ, ಫಾದರ್ ಹ್ಯಾರಿ ಡಿ’ ಸೋಜ ಮತ್ತು ಯುನಿವೆಫ್ ಮುಖ್ಯಸ್ಥ ಜ.ರಫಿಉದ್ದೀನ್ ಕುದ್ರೋಳಿ ರವರು ಧಾರ್ಮಿಕ ಗ್ರಂಥಗಳು ಮತ್ತು ಸಾಮಾಜ ಪರಿವರ್ತನೆ ಎಂಬ ವಿಷಯದ ಮಂಡನೆ ಮತ್ತು ಚರ್ಚೆ ನಡಸಲಿದ್ದು ಕೊನೆಯಲ್ಲಿ ಸಭಿಕರ ಪ್ರಶ್ನೆಗೆ ಜ. ರಫಿ ಉದ್ದೀನ್ ಕುದ್ರೋಳಿ ರವರು ಉತ್ತರಿಸಲಿದ್ದಾರೆ. ಸಾರ್ವಜನಿಕರು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಯುನಿವೆಫ್ ಮುಖ್ಯಸ್ಥರಾದ ರಫಿ ಉದ್ಧೀನ್ ರವರು ಕರೆ ನೀಡಿದ್ದಾರೆ.