December 23, 2024

Vokkuta News

kannada news portal

ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ: ಉಳ್ಳಾಲದಲ್ಲಿ ಫಲಾನುಭವಿಗಳ ಸಭೆ.

ಉಳ್ಳಾಲ: ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರಕಾರದ ಬಹು ನಿರೀಕ್ಷಿತ ಸಾಮಾಜಿಕ ಭದ್ರತಾ ಯೋಜನೆ ಕಾಂಗ್ರೆಸ್ ಗ್ಯಾರಂಟೀ ಇದರ ಗೃಹ ಲಕ್ಷ್ಮಿ,ಮಾಸಿಕ ಮನೆ ಯಜಮಾನಿ ಬ್ಯಾಂಕ್ ಖಾತೆಗೆ ಪ್ರತೀ ತಿಂಗಳು ಸರಕಾರದ ಸಹಾಯ ಧನ ರೂಪಾಯಿ 2000 ಪಾವತಿ ಯೋಜನೆಯು ಇಂದು ಅಧಿಕೃತವಾಗಿ ಚಾಲನೆಗೆ ಬರಲಿದ್ದು, ರಾಜ್ಯ ಸರಕಾರದ ವತಿಯಿಂದ ಇಂದು ರಾಜ್ಯದ ಪ್ರಮುಖ ನಗರ,ತಾಲೂಕು ಕೇಂದ್ರಗಳಲ್ಲಿ ಫಲಾನುಭವಿಗಳ ಸಮಕ್ಷಮ ರಾಜ್ಯದ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಯನ್ನು ಉದ್ಘಾಟಿಸಲಿದ್ದು , ಉಳ್ಳಾಲ ನಗರ ಸಭೆ ಇಂದು ಆಯೋಜಿಸಿದ ಸಭಾಂಗಣದಲ್ಲಿ ಕೂಡಾ ಫಲಾನುಭವಿಗಳು ಭಾಗವಹಿಸುತ್ತಾರೆ.