July 27, 2024

Vokkuta News

kannada news portal

ನೆರೆಮನೆಯ ದುಸ್ತರತೆ ಅರಿಯದವ ನನ್ನವನಲ್ಲ ಎಂದ ಪ್ರವಾದಿ: ಯುನಿವೆಫ್ ಸಮಾರೋಪದಲ್ಲಿ ರಫಿಉದ್ಧೀನ್.

ಮಂಗಳೂರು: ನಗರದ ಕುಡ್ಮುಲ್ ರಂಗರಾವ್ ಸಭಾಂಗಣದಲ್ಲಿ ಇಂದು ಸಂಜೆ ನಡೆದ ಯುನಿವೆಫ್ ಕರ್ನಾಟಕ ಸಂಘಟನೆಯ ಅರಿಯಿರಿ ಮನುಕುಲದ ಪ್ರವಾದಿ ಮುಹಮ್ಮದ್ ಸ. ಅ ಸಂದೇಶ ಪ್ರಚಾರ ಅಭಿಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆರಂಭಿಕ ಭಾಷಣ ಮಾಡಿದ ಕರ್ನಾಟಕ ತಿಯೋಲಜಿಕಲ್ ಕಾಲೇಜು ಪ್ರಾಂಶಪಾಲರು ಆದ ರೆ.ಫಾ. ಪ್ರೊಫೆಸರ್ ಏಚ್.ಎಂ.ವಾಟ್ಸನ್ ರವರು ಮಾನವ ಧರ್ಮ ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಎಲ್ಲ ಧರ್ಮಗಳ ಮೌಲ್ಯ ಒಂದಾದರೆ ಮಾನವ ಧರ್ಮ ಆಗುತ್ತದೆ ಮತ್ತು ಪ್ರವಾದಿಯವರು ತನ್ನ ಜೀವನದಲ್ಲಿ ದೇವನ ಇಚ್ಛೆಯನ್ನು ಅನುಷ್ಟಾನ ಗೊಳಿಸಿದ ಮಾಹನ್ ಮಾನವತಾ ವಾದಿ ಎಂದರು.

ಆರಂಭದಲ್ಲಿ ಉಳ್ಳಾಲದ ಉಮರ್ ಮುಕ್ತಾರ್ ಕಿರಾಅತ್ ಪಠಿಸಿದರು, ಉಜೈಫ್ ಕುದ್ರೋಳಿ ಭಾಷಾನ್ ತಿಸಿದರು. ಸೈಫುದ್ದೀನ್ ಕುದ್ರೋಳಿ ಅತಿಥಿಗಳನ್ನು ಸ್ವಾಗತಿಸಿದರು.

ಶ್ರೀ ಸಂತೋಷ್ ಗುರೂಜಿ ವಚಸ್ಪತಿ ಕುಂದಾಪುರ ಸಂಸ್ತಾನಮ್ ಶ್ರೀ ಪಾದರು ಮಾತನಾಡಿ ಪ್ರವಾದಿಯವರ ಜೀವನ ಸಂದೇಶವನ್ನು ಮುಸ್ಲಿಮರು ತಮ್ಮ ಜೀವನದಲ್ಲಿ ಅಳವಡಿಸಬೇಕಿದೆ ಮತ್ತು ನಿಜವಾದ ಮುಸ್ಲಿಮರು ಇದ್ದರೆ ಅದು ಭಾರತದ ಮುಸ್ಲಿಮರು ಮತ್ತು ಅವರು ನಮ್ಮ ಪೂರ್ವಿಕರ ಸಂತಾನದವರು. ಯುನಿವೆಫ್ ನ ಇಂತಾಹ ಸಂದೇಶ ಪ್ರಚಾರ ಅಭಿಯಾನ ಇಡೀ ದೇಶಕ್ಕೆ ಪ್ರಸಾರ ಆಗಬೇಕಿದೆ ಎಂದರು.

ಪ್ರವಾದಿಯವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಲು ಇಸ್ಲಾಮಿಕ್ ಗ್ರಂಥಾಲಯಗಳಲ್ಲಿ ಸಾವಿರಕ್ಕಿಂತಲೂ ಅಧಿಕ ಪುಟಗಳ ಅದೆಷ್ಟೋ ಕೃತಿಗಳಿವೆ ಆದರೆ ಮನುಕುಲದ ಪ್ರವಾದಿ ಬದುಕು ಮತ್ತು ಸಂದೇಶ ಎಂಬ ಈ ಕೃತಿಯನ್ನು ಪ್ರವಾದಿಯವರ ಜೀವನ ಸಂದೇಶವನ್ನು ಸಹ ಧರ್ಮೀಯ ಭಾಂದವರು ಓದುವ ಉದ್ದೇಶಕ್ಕಾಗಿಯೇ ರಚಿಸಲಾಗಿದೆ.ಪ್ರವಾದಿ ಮೊಹಮ್ಮದ್ ಸ.ಅ.ಯಾರು,ಅವರು ಯಾಕಾಗಿ,ಎಲ್ಲಿಗೆ ಈ ಭೂಮಿಗೆ ಅವತೀರ್ಣವಾದರು ಎಂಬ ಪರಿಚಯ ಉದ್ದೇಶಿತ ಕೃತಿ ಇದಾಗಿದೆ ಎಂದು ರಫಿಉದ್ಧೀನ್ ಹೇಳಿದರು. ಮುಂದುವರಿದು,

ಅವರ ಸಂದೇಶದ ಮೌಲ್ಯ ಏನು ಎಂದು ನಮ್ಮ ಸಹೋದರ ಸಮುದಾಯಕ್ಕೆ ತಿಳಿಯ ಪಡಿಸುವುದಾಗಿದೆದೆ ಪ್ರವಾದಿಯವರ ಬಗ್ಗೆಗಿನ 20 ಲಕ್ಷಕ್ಕಿಂತಲೂ ಹೆಚ್ಚಿನ ಭೋದನೆಗಳಿವೆ.ದೇವನನ್ನು ಅನುಭವದ ಮೇಲೆ ಅರಿಯಬಹುದಾಗಿದೆ. ಪ್ರವಾದಿಯವರು ಭೋದೀಸುತ್ತಾರೆ ಮುಸ್ಲಿಮರ ಮೂರನೇ ಬಹು ದೃಢ ವಿಶ್ವಾಸವಾದ ಈ ಲೋಕ ನಶ್ವರ ಈ ಲೋಕದ ನಂತರ ಮತ್ತೊಂದು ಲೋಕವಿದೆ ಪರ ಲೋಕ, ಅಲ್ಲಿ ವಿಚಾರಣೆ ಇದೆ,ಇಲ್ಲಿ ಬದುಕಿದ ಪ್ರಕಾರ ಅಲ್ಲಿ ಶಿಕ್ಷೆ ಅಥವಾ ರಕ್ಷೆ ಇದೆ. ಆ ಪರ ಲೋಕದಲ್ಲಿ ದೇವ ನೇರಾ ತನ್ನ ದಾಸರಲ್ಲಿ ಪ್ರಹ್ನಿಸುತ್ತಾನೆ. ಮನುಷ್ಯನ ಬದುಕು,ಯೌವನ, ಉದ್ದೇಶದ, ವಿಧಾನ ಕುರಿತು ಪ್ರಶ್ನಿಸಲಾಗುತ್ತದೆ.ನಾಳೆ ಪರಲೋಕದಲ್ಲಿ ಅಲ್ಲಾಹನು ಹಸಿವಿಗೆ ಉಣ ಬಡಿಸುವ ಕುರಿತು ತನ್ನ ದಾಸರೊಂಡಿಗೆ ಅಲ್ಲಾಹನು ಪ್ರಶ್ನಿಸಲಿದ್ದಾನೆ ಎಂದು ಪ್ರವಾದಿಯವರು ಭೋದೀಸುತ್ತಾರೆ. ಬಡವನ ಹಸಿವನ್ನು ನೀಗಿಸುವಲ್ಲಿ ತನ್ನ ದಾಸನ ಪಾತ್ರವನ್ನು ಅರಿಯುತ್ತಾನೆ ಅಲಾಹು. ಕೋವಿಡ್ ವ್ಯಾಪಕವಾದಾಗ ಮುಸಲ್ಮಾನರು ತಮ್ಮ ಸಹ ಧರ್ಮೀಯ ಮೃತರ ಶವಗಳನ್ನು ಭೇದ ಭಾವ ವಿಲ್ಲದೆ ಅಂತ್ಯ ಕ್ರಿಯೆಗೊಳಿಸಿದ್ದು ಪ್ರವದಿಯವರ ಭೋಡನೆಯ ಪ್ರೇರಣೆಯಿಂದ ಆಗಿದೆ.
ಓರ್ವ ವ್ಯಕ್ತಿ ಅರೇಬಿಕ್ ಹೆಸರಿದ್ದು ಅವನು ನಾಮಧಾರಿ ಮುಸ್ಲಿಮನಾಗಿ ತಪ್ಪು ಕೃತ್ಯವೆಸಗಿದರೆ ಅವನು ಮುಸ್ಲಿಮ್ ಭಯೋತ್ಪಾದಕ ಎಂದು ಚಿತ್ರೀಕರಿಸುವುದು, ಪ್ರವಾದಿ ಹೇಳುತ್ತಾರೆ ನನ್ನ ಸಮುದಾಯದವ ಭಯೋತ್ಪಾದಕ ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ತನ್ನ ನೆರೆಯವನಿಗೆ ಉಪದ್ರ ಮಾಡುವವನು ಮುಸಲ್ಮಾನನಲ್ಲ. ಸಮಾಜ ದೇಶ ಯಾ ಇತರರಿಗೆ ಬಿಡಿ ತನ್ನ ಮನೆಯವರಿಗೆ ನೀವು ತಿಂಡಿ ಕೊಂಡೊಯ್ಯುವಿದಾದರೆ ನಿಮ್ಮ ನೆರೆ ಹೊರೆ ಮಕ್ಕಳಿಗೂ ವಿತರಿಸಿ ಎಂದು ಹೇಳಿದ ಪ್ರವಾದಿ. ನೀವು ಉತ್ತಮ ಆಹಾರ ತಯಾರಿಸಿದರೆ ನಿಮ್ಮ ನೆರೆ ಮನೆಯವರಿಗೂ ವಿತರಿಸಿ. ಇಂತಹ ಪ್ರವಾಡಿಯನ್ನು ನಂಬುವವರು ಭಯೋತ್ಪಾದಕರು ಆಗಲು ಹೇಗೆ ಸಾದ್ಯ. ಮಾಧ್ಯಮವು ಒಂದು ಕಡೆ ಕಡಿವಾಣ ಹಾಕಿ ಮುಸಲ್ಮಾನರ ವಿರುದ್ಧ ಪುಂಕಾನುಪುಂಕ ವರದಿ ಮಾಡುತ್ತಿದೆ.ನೈಜ ಸುದ್ದಿಗಳನ್ನು ಮರೆ ಮಾಚಲು ಪ್ರಯತ್ನಿಸುತ್ತಿವೆ.ವ್ಯಕ್ತಿಗಳು ತಪ್ಪು ಕೃತ್ಯಗಳು ಧರ್ಮಕ್ಕೆ ಸಂಭಂದಿಸಿದ್ದಲ್ಲ. ಮುಸ್ಲಿಮ್ ರಾಜರು ಅದೇ ರೀತಿ ಹಿಂದೂ ರಾಜರು ಧಾರ್ಮಿಕ ಕೇಂದ್ರಗಳ ಮೇಲೆ ಮಾಡಿದ ಅಂದಿನ ದಾಳಿ ಅದು ಕೇವಲ ರಾಜಕೀಯ ಧಾಳಿಯೆ ಹೊರತು ಮತೀಯ ದಾಳಿ ಅಲ್ಲ. ಇಂತಹ ವಿಷಯಗಳ ಬಗ್ಗೆ ದೃಶ್ಯ ಮಾಧ್ಯಮದಲ್ಲಿ ಉದ್ದುದ್ದ ಭಾಷಣ ಮಾಡಿ ಸಮಾಜದ ಮಧ್ಯೆ ಮತ್ಸರ ವೈಷಮ್ಯ ಸೃಷ್ಟಿಸುವುದು ಸರಿಯೇ,ಇತಿಹಾಸವನ್ನು ಇತಿಹಾಸಕ್ಕೆ ಬಿಟ್ಟು ನಾವು ಉತ್ತಮ ವರ್ತಮಾನವನ್ನು ನಿರ್ಮಾಣ ಮಾಡುವ ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ಯು
ಕೆ.ಖಾಲಿದ್ ರವರು ಮಾತನಾಡುತ್ತಾ ಅರಿಯಿರಿ ಮನುಕುಲದ ಪ್ರವಾದಿ ಮುಹಮ್ಮದ್ ಸ. ಅ ಕಾರ್ಯಕ್ರಮ ಕಳೆದ ಹದಿನೆಂಟು ವರ್ಷದಿಂದ ನಿರಂತರ ಒಂದೇ ಘೋಷ ವಾಕ್ಯದೊಂದಿಗೆ ಆಚರಿಸುವ ಈ ರಾಜ್ಯದ ಮತ್ತು ಜಿಲ್ಲೆಯ ಏಕೈಕ ಕಾರ್ಯಕ್ರಮ ಆಗಿದೆ. ಮುಸ್ಲಿಮರು ಮತ್ತು ಮುಸ್ಲಿಮೇತರ ಮಧ್ಯೆ ಇಸ್ಲಾಮಿನ ಮತ್ತು ಪ್ರವಾದಿಯವರು ವಿರುದ್ಧದ ತಪ್ಪು ಕಲ್ಪನೆ ಅಥವಾ ಅಪ ನಂಬಿಕೆಯನ್ನು ದೂರಿಕರಿಸುವ ಒಂದು ವ್ಯವಸ್ಥಿತ ಅಭಿಯಾನ ಕಾರ್ಯಕ್ರಮ ಇದಾಗಿದೆ ಕಳೆದ ಎರಡು ತಿಂಗಳಿನಿಂದ ನಿರಂತರ ಜಿಲ್ಲೆಯಲ್ಲಿ ಪ್ರಚಾರ ಅಭಿಯಾನದ ಕಾರ್ಯ ಕ್ರಮಗಳು ನಡೆದಿದೆ ಎಂದರು.

ಕಾರ್ಯಕ್ರಮದಲ್ಲಿ ತುಳು ನಾಡು ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಯೋಗೇಶ್ ಶೆಟ್ಟಿ ಜೆಪ್ಪು ,ಮೋಹನ್ ಮೆಂಡನ್,ಸದ್ಭಾವನಾ ವೇದಿಕೆ ಜೆಪ್ಪು ಇದರ ಅಧ್ಯಕ್ಷರಾದ ಕೇಶವ ಭಟ್,ಕಾಂಗ್ರೆಸ್ ಕಾರ್ಮಿಕ ಘಟಕದ ಜ್ಞಾನೇಶ್ ಕುಮಾರ್, ಎಂ. ಜೆ. ಎಫ್ ಪ್ರಧಾನ ಕಾರ್ಯದರ್ಶಿ ವಹಾಬ್ ಕುದ್ರೋಳಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂತೋಷ್ ಗುರೂಜಿ ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.