ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಆಪರೇಶನ್ ಟೈಗರ್ ಕಾರ್ಯಾಚರಣೆಯಲ್ಲಿ ಬೀದಿ ಬದಿ ಯಲ್ಲಿನ ಬಡ ವ್ಯಾಪಾರಿಗಳನ್ನು ತೆರವುಗೊಳಿಸಿ ಅವರ ಗಾಡಿ ರಿಕ್ಷಾಗಳನ್ನು ಬುಲ್ಡೋಜರ್ ಉಪಯೋಗಿಸಿ ನಾಶ ಮಾಡುವ ಅನ್ಯಾಯ ಪ್ರಯತ್ನ ಖಂಡನೀಯ. ಮನಪ ಮೇಯರ್ ಅವರು ಪ್ರವಾಸದಲ್ಲಿರುವಾಗ ಅಧಿಕಾರಿಗಳು ನಡೆಸಿರುವ ಈ ಕಾರ್ಯಾಚರಣೆ ಸರಿಯಲ್ಲ ಹಲವಾರು ಕುಟುಂಬಗಳ ಜೀವನೋಪಾಯವನ್ನು ದುಸ್ತರತೆ ಗೊಳಿಸಿದ್ದು, ಬಡವರ ಜೀವಿತ ಹಕ್ಕನ್ನು ಕಸಿಯಲಾಗಿದೆ
ಮನಪಾ ದ ಈ ಪ್ರಯತ್ನ ಅಮಾನವೀಯ. ಬಡವರ ದುಡಿಮೆಯನ್ನು ಹತ್ತಿಕ್ಕಿ ಅವರ ಹೊಟ್ಟೆಗೆ ಕಲ್ಲು ಹಾಕುವ ಮನಪಾ ಜನ ವಿರೋಧಿ ಕೃತ್ಯ ತೀವ್ರ ಖಂಡನೀಯ . ಮನಪಾ ತಕ್ಷಣ ತನ್ನ ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಮಾಜಿ ಮೇಯರ್ ಕೆ.ಅಶ್ರಫ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವರದಿಗಳು
ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳೂರಿನಲ್ಲಿ ಎಸ್ಡಿಪಿಐ ಪ್ರತಿಭಟನೆ
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಪ್ರಾದೇಶಿಕ ಸ್ಥಾನಮಾನ ಕೋರಿ ದ.ಕ ಸಂಸದ ಬ್ರಿಜೇಶ್ ಚೌಟ ಮುಖ್ಯ ಮಂತ್ರಿಗೆ ಮನವಿ.
ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳಿಂದ ಪತ್ರಿಕಾ ಶಿಕ್ಷಣ ಸಮೀಕ್ಷೆ.