September 17, 2024

Vokkuta News

kannada news portal

ವಕ್ಫ್ ಸ್ಥಿರಾಸ್ತಿ ಹಗರಣ ತನಿಖೆ ಆಗಬೇಕಿದೆ:ಆನ್ ಲೈನ್ ಸಂವಾದದಲ್ಲಿ ಅ.ಸ.ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ.

ವೆಬ್: ಪ್ರಸ್ತುತ ಕೇಂದ್ರ ಸರಕಾರ ಪ್ರಸ್ತಾಪಿಸಿದ ಮತ್ತು ಉದ್ದೇಶಿತ ವಕ್ಫ್ ಕಾನೂನು ತಿದ್ದುಪಡಿ ಕಾಯ್ದೆಯ ಬಗ್ಗೆಗಿನ ದೇಶದ್ದದ್ಯಾಂತ ಚರ್ಚೆ ನಡೆಯುತ್ತಿದ್ದು, 2012 ನೇ ಇಸವಿಯಲ್ಲಿ ಕರ್ನಾಟಕ ರಾಜ್ಯದ ಅಲ್ಪ ಸಂಖ್ಯಾತ ಆಯೋಗದ ಅಂದಿನ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ಕರ್ನಾಟಕದ ವಕ್ಫ್ ಸ್ಥಿರಾಸ್ತಿ ಅಕ್ರಮ ಒತ್ತುವರಿ ವರದಿ ತಯಾರಿಸಿ ವಕ್ಫ್ ಹಗರಣ ಎಂದೇ ಬಿಂಬಿತವಾಗಿ ಸರಕಾರಕ್ಕೆ ಸಲ್ಲಿಸಲಾಗಿದ್ದ ವಿಷಯದಲ್ಲಿ ಸದ್ರಿ ವರದಿಯ ಬಗ್ಗೆ ಸಮಾಜಿಕ ಜಾಲತಾಣ ಪಬ್ಲಿಕ್ ವಾಯ್ಸ್ ವಾಯ್ಸ್ ಮೆಸೆಂಜೆರ್ ಗ್ರೂಪ್ ಆನ್ಲೈನ್ ಸಂವಾದದ ಲ್ಲಿ ಹಲವು ಪ್ರಮುಖ ವಿಷಯಗಳ ನ್ನು ಇಂದು ತಾರೀಕು 08 ಸೆಪ್ಟೆಂಬರ್ 2024 ರಂದು ಭಾ.ಕಾ. ಗಂಟೆ ರಾತ್ರಿ 09.00 ಕ್ಕೆ ಚರ್ಚಿಸಿದ್ದು, ವಕ್ಫ್ ಸ್ಥಿರಾಸ್ತಿ ಹಗರಣ ತನಿಖೆ ಆಗಬೇಕಿದೆ ಎಂದಿದ್ದಾರೆ. ಸಂವಾದ ನಿರೂಪ ಣೆಯನ್ನು ಗ್ರೂಪ್ ಅಡ್ಮಿನ್ ರಫೀಕ್ ಪರ್ಲಿಯಾ ನೇರವೇರಿಸಿರುತ್ತಾರೆ, ಈ ಬಗ್ಗೆ ವರದಿ.

1.ರಫೀಕ್ ಪರ್ಲಿಯ: ವಕ್ಫ್ ಆಸ್ತಿಯ ಬಗ್ಗೆ ಜನರಲ್ಲಿ ಗೊಂದಲ ಇದೆ, ವಕ್ಫ್ ಆಸ್ತಿ ಏನು,ಯಾರಿಗೆ ಸೇರಿದ್ದು,ವಕ್ಫ್ ಮಂಡಳಿ ಯಾಕಾಗಿ ಸ್ಥಾಪಿತವಾಗಿದೆ?

ಅನ್ವರ್ ಮಾಣಿಪ್ಪಾಡಿ: ವಕ್ಫ್ ಮಂಡಳಿ ಅಂದರೆ ನಮ್ಮ ಮುಸ್ಲಿಮ್ ಸಮುದಾಯಕ್ಕೆ ಹಿಂದಿನ ರಾಜರು,ಸಂಸ್ಥೆಗಳು ದಾನ ಮಾಡಿದ್ದು,ಇದು ಬಡ ಮುಸ್ಲಿಮರಿಗೆ ಒಂದು ಆದಾರ,ಶಿಕ್ಷಣ,ಆರೋಗ್ಯ,ಇನ್ನಿತರ ಉಪಯೋಗಕ್ಕೆ ಆಗಿದೆ,ದೇಶದ ಅಧಿಕ ಆಸ್ತಿಯಲ್ಲಿ ಪ್ರಥಮ ರಕ್ಷಣ ಇಲಾಖೆ , ರೈಲ್ವೆ, ನಂತರ ವಕ್ಫ್ ಆಸ್ತಿ ಅಧಿಕತೆಯಲ್ಲಿ ಇದೆ. ಧಾರ್ಮಿಕ ಸಂಸ್ಥೆಯ ಮಟ್ಟದಲ್ಲಿ ನಾವು ಪ್ರಥಮ ವಾಗಿದ್ದೇವೆ. ಇದನ್ನು ನಿರ್ವಹಿಸಲು ವಕ್ಫ್ ಮಂಡಳಿ ಇದೆ.

2.ರಫೀಕ್ ಪರ್ಲಿಯ: ವಕ್ಫ್ ಹಗರಣದ ಬಗ್ಗೆ ನೀವು 2012 ರಲ್ಲಿ ಒಂದು ದೊಡ್ಡ ಮಟ್ಟದ ಸುಮಾರು 7000 ಪುಟದ ಅಕ್ರಮ ಆಸ್ತಿ ಒತ್ತುವರಿ ವರದಿ ನಡೆಸಲು ಆದ ಪ್ರೇರಣೆ ಮತ್ತು ಇದಕ್ಕೆ ಲಭಿಸಿದ ಸಹಕಾರ ಏನು?

ಅನ್ವರ್ ಮಾಣಿಪ್ಪಾಡಿ: ನಾನು ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಸಂಧರ್ಬದಲ್ಲಿ ಪ್ರತಿ ಹದಿನೈದು ದಿವಸಕ್ಕೆ ಒಂದು ಬಾರಿ ಪ್ರತೀ ಜಿಲ್ಲೆಗೆ ಭೇಟಿ ಮಾಡಿ ಪರಿಶೀಲನಾ ಸಭೆ ಮಾಡುತ್ತಿದ್ದೆ,ಎಲ್ಲಾ ಇಲಾಖೆ ಅಧಿಕಾರಿಗಳ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೆ. ಅಲ್ಲಿ ವಿಸ್ತೃತ ಚರ್ಚೆ ನಡೆಯುತ್ತಿದ್ದು,ಬೀದರ್ ಜಿಲ್ಲೆಯಲ್ಲಿ ಓರ್ವರು ಮುಸ್ಲಿಮ್ ವಿದ್ವಾಂಸರು ಏಶ್ಯಾದ ಅತಿ ದೊಡ್ಡ ಧಫನ ಭೂಮಿ ಆ ಜಿಲ್ಲೆಯಲ್ಲಿ ಇದ್ದು ಅದನ್ನು ಜನರು ಒತ್ತುವರಿ ಮಾಡಿ ಕೊಳ್ಳು ತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಯಲ್ಲಿ ಅಂದೇ ಎಲ್ಲಾ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ವಾರ ವಕ್ಫ್ ಇಲಾಖೆ ಕಾರ್ಯದರ್ಶಿ ಆತಿಕ್ ಮೊಹಮ್ಮದ್ ಮತ್ತು ಇನ್ನೋರ್ವ ಅಧಿಕಾರಿಯೊಂದಿಗೆ ಬೀದರ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿ ನಂತರ ಎಲ್ಲಾ ಜಿಲ್ಲೆಗಳಲ್ಲಿ ಆದ ಒತ್ತುವರಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಸುಪ್ರೀಮ್ ಕೋರ್ಟಿನ ನಿರ್ದೇಶನದಂತೆ ಇದು ವಕ್ಫ್ ಮಂಡಳಿ ಸೇರಿದ್ದಾಗಿದೆ.

3.ರಫೀಕ್ ಪರ್ಲಿಯ: ವರದಿಯ ಪ್ರಕಾರ ಹಗರಣದ ಒಟ್ಟು ಮೌಲ್ಯ, ಕಬಳಿಕೆ ಆದ ಆಸ್ತಿಯ ವಿಸ್ತೀರ್ಣ ಎಷ್ಟು?

ಅನ್ವರ್ ಮಾಣಿಪ್ಪಾಡಿ: 29000 ಎಕ್ರೆ ವಕ್ಫ್ ಆಸ್ತಿ ಕಬಳಿಕೆ ಮತ್ತು ಎರಡು ಲಕ್ಷ ಮೂವತ್ತು ಸಾವಿರ ಕೋಟಿ ಸರಕಾರಿ ಮೌಲ್ಯ, ನೈಜ ಮಾರ್ಕೆಟ್ಟು ಧರ ಇದರ ನಾಲ್ಕು ಪಟ್ಟು ಅಧಿಕ.

4.ರಫೀಕ್ ಪರ್ಲಿಯ : ವಕ್ಫ್ ಸ್ಥಿರಾಸ್ತಿ ಇಷ್ಟೊಂದು ಮಟ್ಟದಲ್ಲಿ ಹಗರಣ ಮತ್ತು ಒತ್ತುವರಿ ಆಗುವಾಗ ಸಂಭಂದ ಪಟ್ಟ ಇಲಾಖೆಗಳು ಮೌನ ವಹಿಸಲು ಇರುವ ಕಾರಣ ಏನು?

ಅನ್ವರ್ ಮಾಣಿಪ್ಪಾಡಿ:
ಈ ಬಗ್ಗೆ ತುಂಬಾ ಬೇಸರ ಇದೆ.ಇದಕ್ಕೆ ಮೂಲ ಕಾರಣ ವಕ್ಫ್ ಬೋರ್ಡ್ . ಬೇಲಿ ಹೊಲ ಮೇಯ್ದ ಕಥೆ ಇದು, ವಕ್ಫ್ ಬೋರ್ಡ್ ನಾಯಕರೊಂದಿಗೆ ಸೇರಿಕೊಂಡು ಕಬಳಿಕೆ ಗೆ ಸಹಕರಿಸಿದ್ದಾರೆ. ವಕ್ಫ್ ಅಧಿಕಾರಿಗಳು ಬ್ರಿಷ್ಟಾಚರ ಎಸಗಿದ್ದಾರೆ, ಕಬಳಿಕೆಗೆ ಮೌನ ವಹಿಸಿದ್ದಾರೆ. ಈ ಕಬಳಿಕೆ ಅವರಿಗೆ ದುಡ್ಡು ಸಿಕ್ಕಿದೆ.

5.ರಫೀಕ್ ಪರ್ಲಿಯ: ವಕ್ಫ್ ಆಸ್ತಿ ಆಕ್ರಮ ಓತ್ತುವರಿ ವರದಿಯನ್ನು 2012 ರಲ್ಲಿ ಸದಾನಂದ ಗೌಡ ನೇತೃತ್ವದ ಸರಕಾರ ಕ್ಕೆ ಸಲ್ಲಿಸುವಾಗ ಆದ ಸಮಸ್ಯೆಗಳು ಏನು?

ಅನ್ವರ್ ಮಾಣಿಪ್ಪಾಡಿ: ಮುತವಲ್ಲಿ ಗಳು ಈ ವಕ್ಫ್ ಆಸ್ತಿಯನ್ನು ನೋಡಿ ಕೊಳ್ಳುವ ಕೇರ್ ಟೆಕರ್ಸ್, ಅಲ್ಲಿನ ಆದಾಯವನ್ನು ಅವರು ಆರೋಗ್ಯ ಮತ್ತು ಶಿಕ್ಷಣಕ್ಕೆ ವ್ಯಯಿಸಬೇಕಿತ್ತು ಆದರೆ ಅವರು ಭೂ ತೆರಿಗೆಯನ್ನು ಸ್ವತ ಹೆಸರಲ್ಲಿ ಪಾವತಿಸಿ,ಮನೆ ತೆರಿಗೆ, ವಿದ್ಯುಚ್ಛಕ್ತಿ ಬಂದಾಗ ವಿದ್ಯುತ್ ಖಾತೆ ಬಿಲ್ ಕೂಡಾ ಅವರ ಹೆಸರಲ್ಲಿ ಪಡೆದು , ನೀರು ಕೂಡಾ ಅವರ ಹೆಸರಿನಲ್ಲಿ ಪಡೆದು, ಈ ಆಸ್ತಿಗೆ ಉತ್ತಮ ದರ ಬರುವಾಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾರಾಟ ನೋಂದಣಿಗೆ ಹೋಗಿ ತಡೆ ಆದಾಗ ವಕ್ಫ್ ಬೋರ್ಡ್ ಗೆ ಹೋಗಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಅಘಾದ ಮೊತ್ತಕ್ಕೆ ಮಾರಾಟ ಮಾಡಿ ಪಾಲು ಪಡೆದು ಭ್ರಷ್ಟಾಚಾರ ಎಸಗಲಾಗಿದೆ.

6. ರಫೀಕ್ ಪರ್ಲಿಯ : ಈ ವರದಿಯನ್ನು ಆಗ ಇದ್ದ ನಿಮ್ಮದೇ ಬಿಜೆಪಿ ಸರಕಾರ ಮಂಡನೆ ಮಾಡಿ ಚರ್ಚೆಗೆ ತರಲು ಯಾಕೆ ಸಾಧ್ಯ ಆಗಿಲ್ಲ?

ಅನ್ವರ್ ಮಾಣಿಪ್ಪಾಡಿ: ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಮಾಡಲು ಸರಕಾರ ತಯಾರಾದಾಗ ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿ ವರದಿಗೆ ಕಾನೂನಾತ್ಮಾಕ ಶಿಫಾರಸು ಅಗತ್ಯ ಇದೆ ಎಂದಾಗ ಲೀಗಲ್ ಅಡ್ವೋಕೇಟ್ ಜನರಲ್ ಗೆ ಕಳುಹಿಸಲಾಯ್ತು,ನಂತರ ವರದಿಯ ಅಲಭ್ಯತೆ, ಸರಕಾರಿ ಅಧಿಕಾರಿಗಳ ರಜೆ ಕಾರಣ,ನಂತರ ಒಂದೆರಡು ತಿಂಗಳ ಮಧ್ಯೆ ಕ್ಯಾಬಿನೆಟ್ ಸಭೆ ಪ್ರಸ್ತಾಪದಲ್ಲಿ ಒಪ್ಪಿಕೊಂಡು ಈ ವರದಿಯ ನೈಜತೆಯನ್ನು ಸದನದಲ್ಲಿ ಒಪ್ಪಿ ಕೊಳ್ಳಲಾಯಿತು. ಪೂರಕವಾಗಿ ವಕ್ಫ್ ಸಂಬಂಧಿತ ಆರು ವಿದೆಯಕ ಗಳ ನ್ನು ತರಲಾಯಿತು. ಸಂಪೂರ್ಣವಾಗಿ ವಕ್ಫ್ ಆಸ್ತಿಗಳನ್ನು ಸಂರಕ್ಷಿಸುವುದು ಹೇಗೆ ಎಂಬ ಬಗ್ಗೆ ವಿಧ್ಯೇಯಕ ಅಂಗೀಕರ ಆಗಿದೆ ಇದು ಮುಸ್ಲಿಮ್ ಸಮುದಾಯ ಕ್ಕೆ ತುಂಬಾ ಪ್ರಯೋಜನ ತಂದಿದೆ.ನಂತರ ಲೋಕಾಯುಕ್ತ ಇಲಾಖೆಗೆ ಸಲಹೆಗೆ ನೀಡಲಾಯಿತು. ಸರಕಾರದ ಮುಖ್ಯ ಕಾರ್ಯದರ್ಶಿ ಗೆ ಕೂಡಾ ವರದಿ ನೀಡಿ ಸಲಹೆ ನೀಡಲು ಹೇಳ ಲಾಯ್ತು.ನಂತರ ಬಂದ ಸರಕಾರ ಕೂಡಾ ಈ ವರದಿ ಬಗ್ಗೆ ಉತ್ಸಾಹ ತೋರಲಿಲ್ಲ, ನಂತರ ಜಸ್ಟಿಸ್ ಆನಂದ್ ಜಿ ಉಪ ಲೋಕಾಯುಕ್ತ ರು ಕೂಡಾ ಇದರ ಬಗ್ಗೆ ವರದಿ ನೀಡಿ ದ್ದಾರೆ. ಅದನ್ನು ಮಂಡನೆ ಮಾಡಲಿಲ್ಲ . ಶಂಕರ ಮೂರ್ತಿ ಸಭಾಧ್ಯಕ್ಷರೂ ಕೊಡ ಇದನ್ನು ಉಭಯ ಸದನದಲ್ಲಿ ಮಂಡನೆ ಮಾಡ ಬೇಕೆಂದು ಆಜ್ಞೆ ಹೊರಡಿಸಿದರು ಕೂಡಾ ಸಣ್ಣ ಮಟ್ಟದ ಚರ್ಚೆ ಆಗಿ ಮಂಡನೆ ಆಗಲಿಲ್ಲ. ನಂತರ ರಾಜ್ಯ ಪಾಲರ ನ್ನು ಕೂಡಾ ಭೇಟಿ ಮಾಡಿ ಮನವಿ ಮಾಡಲಾಗಿ ಅವರು ಕೂಡಾ ಆಜ್ಞೆ ಮಾಡಿ ಕೂಡಾ ಮಂಡನೆ ಆಗಲಿಲ್ಲ, ನಂತರ ನಾವು ಉಚ್ಚ ನ್ಯಾಯಾಲಯಕ್ಕೆ ಹೋದೆವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದಾಗ, ಹಾಲಿ ಆಡಳಿತ ಸರ್ಕಾರ ವಿರೋಧ ಸಲ್ಲಿಸಿ,ನಂತರ ದ್ವಿ ಸದಸ್ಯ ಬೆಂಚ್ ಹಾಗು ನಾಗ ರತ್ನಮ್ಮ ರವರ ನಿರ್ದೇಶನ ಮೇರೆಗೆ ಅಂದಿನ ಅಡ್ವೋಕೇಟ್ ಜನರಲ್ ಒಪ್ಪಿಕೊಂಡರು, ಆದರೂ ಮಾಡಲಿಲ್ಲ,ಇದಾದ ನಂತರ ಅವರು ಎರಡನೇ ಬೆಂಚ್ ಗೆ ಅಪೀಲು ಹಾಕಿ ಕೂಡಾ ಸರ್ಕಾರ ಸೋತು, ನಂತರ ಅವರು ಸುಪ್ರೀಮ್ ಕೋರ್ಟ್ ಗೆ ತಡವಾಗಿ ಹೋದರು ಕೂಡಾ ನಂತರ ಜಸ್ಟಿಸ್ ಬಾಬ್ದೆ ಮತ್ತು ನಝೀರ್ ಸಾಬ್ ಅವರ ಬೆಂಚ್ ಉತ್ತಮ ತೀರ್ಪು ನೀಡಿ ಮಂಡನೆ ಮಾಡಲು ಸೂಚಿಸಿದ್ದಾರೆ. ನಂತರ ಬಂದ ನಮ್ಮ ಬಿಜೆಪಿ ಸರಕಾರ ಮಂಡನೆ ಮಾಡಿದ್ದಾರೆ, ಚರ್ಚೆಗೆ ದಿನ ನಿಗದಿ ಪಡಿಸಲು ಹೇಳಲಾಯಿತು ಮತ್ತು ನಾವು ಅಧಿಕರ ಕಳೆದು ಕೊಂಡ ನಂತರ ಅದರ ಚರ್ಚೆ ಆಗಲಿಲ್ಲ.

7.ರಫೀಕ್ ಪರ್ಲಿಯ: ಈ ಬಗ್ಗೆ ನಿಮ್ಮ ಪರಿಹಾರ ಕ್ರಮ ಏನು

ಇದು ಬಹಳ ಒಂದು ಕಷ್ಟ ಪಟ್ಟು ಮಾಡಿದ ವರದಿ, ಅಧಿಕಾರಿ ಗಳಾದ ಅತಿಕ್ ಮೊಹಮ್ಮದ್ ಮತ್ತು ಪಿಲಿಪ್ ಬಿಟ್ಟರೆ ಇತರ ಅಧಿಕಾರಿಗಳು ನನಗೆ ಸಹಕರ ನೀಡಲಿಲ್ಲ, ಅವರು ಬ್ರಿಷ್ಟರ ಜೊತೆಯೇ ಇದ್ದರು, ಚರ್ಚೆ ಕೂಡಾ ಆಗಲಿಲ್ಲ, ನಾನು ವಿವಿಧ ಬರಹ, ಭಾಷಣದ ಮೂಲಕ ಇದರ ಚರ್ಚೆ ಅನಿವಾರ್ಯ ಎಂದರೂ ಕೂಡಾ ಮುಗ್ಧ ಮುಸ್ಲಿಮ್ ಸಮುದಾಯ ಇದನ್ನು ನಂಬಲಿಕ್ಕೇ ಸಾಧ್ಯ ಆಗಿಲ್ಲ. ಮುಗ್ದ ಮುಸ್ಲಿಮರನ್ನು ನಂಬಲಿಕ್ಕೇ ಬಿಡಲೋ ಇಲ್ಲ,ಇದು ರಾಜಕೀಯ ಹುನ್ನಾರ ಎಂದು ಬಿಂಬಿಸಲಾಯಿತು.ನಂತರ ಬಹಳ ಆಸ್ತಿ ಒತ್ತುವರಿ ವಿಷಯ ಬರುವಾಗ ಕ್ರಮೇಣ ಸತ್ಯ ಹೊರಬರಲು ಕಾರಣವಾಗಿದೆ , ವರದಿ ಮಂಡನೆಯ ನಂತರ ಈ ವರದಿ ಸಾರ್ವಜನಿಕೀಕರಣ ವಾದ ನಂತರ ಜನರಿಗೆ ಇದರ ಬಗ್ಗೆ ಆಸಕ್ತಿ ಮೂಡಿದೆ, ಈ ವರದಿ ಉಭಯ ಸದನದಲ್ಲಿ ಮಂಡನೆ ಆದರೆ ಮಾತ್ರ ಅದು ಮಹತ್ವ ಹೊಂದುತ್ತದೆ ಎಂಬುದಾಗಿದೆ.ಇನ್ನೂ ಇದು ಚರ್ಚೆ ಆಗಿ ತನಿಖೆ ಆಗಬೇಕು, ಹಾಲಿ ಈಗ ನಿಮ್ಮಂತವರೂ ಸೇರಿ ಇದನ್ನು ಚರ್ಚೆ ಮಾಡುಲು ಒತ್ತಾಯಿಸಬೇಕಿದೆ. ಪಬ್ಲಿಕ್ ವಾಯ್ಸ್ ಸಲೀಂ ಪರಂಗಿ ಪೇಟೆ ಮತ್ತು ಮುಸ್ಲಿಮ್ ವಾಯ್ಸ್ ಅಷ್ಪಕ್ ತೋಟಲ್ ತಂಡಕ್ಕೆ ಆಭಾರಿ ಆಗಿದ್ದೇನೆ ನಿಮ್ಮಂತವರು ಇದನ್ನು ಮುಂದೆ ಕೊಂಡು ಹೋಗಬೇಕಿದೆ.

ಅಡ್ಮಿನ್ ಹಾರೂನ್ ಅಗ್ನಾಡಿ ಸ್ವಾಗತಿಸಿ, ಶೇಖ್ ಮೊಹಮ್ಮದ್ ಇರ್ಫಾನೀ ಫೈಝಿ ವಂದಿಸಿದರು.