February 19, 2025

Vokkuta News

kannada news portal

ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳಿಂದ ಪತ್ರಿಕಾ ಶಿಕ್ಷಣ ಸಮೀಕ್ಷೆ.

ಮಂಗಳೂರು:  ನಗರದ ಪ್ರತಿಷ್ಠಿತ ಸಂತ ಅಲೋಶಿಯಸ್ ಪರಿಗಣಿತ ವಿದ್ಯಾಲಯ ( ಡೀಮ್ಡ್ ಯೂನಿವರ್ಸಿಟಿ) ಪತ್ರಿಕೋದ್ಯಮ  ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಭಾಗವಾಗಿ ಇಂದು ನಗರದ ವಿವಿಧ ಕಡೆಯಲ್ಲಿ ಮಾಧ್ಯಮ ಸಮೀಕ್ಷೆ, ಸಂದರ್ಶನ ತರಭೇತಿ ನಡೆಸಿದರು.

ಪ್ರಥಮ ಪದವಿ ವಿದ್ಯಾರ್ಥಿಗಳಾದ ಆಯೇಷಾ ಇಷ್ಮ, ಫಝೀಮ ಹಕ್, ಸೋನಾಲಿ. ಆರ್, ಮತ್ತು ಅಕ್ಷಯ ತಂಡ ನಗರದ ಮಾನವ ಹಕ್ಕು ಕಾರ್ಯಕರ್ತರಾದ ಮೊಹಮ್ಮದ್ ಹನೀಫ್.ಯು ಅವರನ್ನು ಸಂದರ್ಶಿಸಿ ಚಟುವಟಿಕೆ, ಜನಾಂಗೀಯ ಸೇವೆ, ಸೇವಾ ಸಂಸ್ಥೆಗಳು, ಯೋಜನೆ ರೂಪಿಕರಣ, ಸಮುದಾಯಿಕ ಅಭಿವೃದ್ಧಿ ವಿಷಯದಲ್ಲಿ ಮಾಧ್ಯಮ ಮತ್ತು ವೈಯುಕ್ತಿಕ ಸೇವೆಯ ವ್ಯಾಪ್ತಿ ಇತ್ಯಾದಿ ಬಗ್ಗೆ ಮಾಹಿತಿ ಪಡೆದರು.