May 3, 2025

Vokkuta News

kannada news portal

ವಕ್ಫ್ ಕಾಯ್ದೆ ವಿರುದ್ಧ,ಉಲೇಮಾ ಸಂಘಟನೆಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ.

ಮಂಗಳೂರು: ಏಪ್ರಿಲ್ 19, ಮಂಗಳೂರು ಅಡ್ಯಾರ್ ನಲ್ಲಿ ನಿನ್ನೆ ತಾರೀಕು18 ರಂದು, ಕೇಂದ್ರಸರ್ಕಾರದ ಇತ್ತೀಚೆಗೆ ಜಾರಿಗೆ ತಂದ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ, ಕರ್ನಾಟಕ ಉಲೇಮಾ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.

ಪ್ರತಿಭಟನಾ ಸಮಾವೇಶದಲ್ಲಿ ಸಾವಿರಾರು ಜನ ಜಮಾವಣೆ ಗೊಂಡು, ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿರೋಧ ಸಮಾವೇಶ ನಡೆಸಿದರು. ಸಮಾವೇಶದಲ್ಲಿ ನಿರಂತರ ಅಜಾದಿ ಘೋಷಣೆಗಳು ಮೊಳಗಿದವು. ಭಾರತದ ತ್ರಿವರ್ಣ ಧ್ವಜ ಸಭೆಯಾದ್ಯಂತ ರಾರಾಜಿಸುತ್ತಿದ್ದವು.

ಸಭೆಯನ್ನು ದ.ಕ.ಜಿಲ್ಲಾ ಖಾಝಿ ಶೈಖುನಾ ಅಹಮದ್ ಮುಸ್ಲಿಯಾರ್ ತ್ವಾಕ ಅವರು ಉದ್ಘಾಟಿಸಿದರು. ಸಭೆಯನ್ನು ಉದ್ದೇಶಿಸಿ, ಮೌಲಾನ ಶಾಫಿ ಸಅದಿ, ಯುಸ್ಮಾನುಲ್ ಫೈಝಿ ತೊಡಾರು, ಅಬ್ದುಲ್ ಖಾದರ್ ಮುಸ್ಲಿಯಾರ್ ಬಾಂಬ್ರಾನ, ಎಂ ಎಸ್ ಎಂ ಅಬ್ದುಲ್ ರಶೀದಿ ಝೈನಿ ಅಲ್ ಖಾಮಿಲ್,ಅಬ್ದುಲ್ ಅಜೀಜ್ ದಾರಿಮಿ ಚೊಕ್ಕ ಬಿಟ್ಟು, ಅಬ್ದುಲ್ ನಾಸೀರ್ ಲಕಿ ಸ್ಟಾರ್ ಮುಂತಾದವರು ಭಾಷಣ ಮಾಡಿದರು. ಕ್ರಾಂತಿ ಗೀತೆ ಹಾಡಲಾಯಿತು, ಸಿನನ್ ರವರ ನೇತೃತ್ವದಲ್ಲಿ ಘೋಷಣೆ ಮೊಳಗಿದವು. ಕೊನೆಯಲ್ಲಿ ವಕ್ಫ್ ತಿದ್ದುಪಡಿ ಕಾಯಿದೆ ವಿರುದ್ಧ ನಿರ್ಣಯ ಅಂಗೀಕಾರ ಕೈ ಗೊಳ್ಳಲಾಯಿತು.