June 29, 2025

Vokkuta News

kannada news portal

‘ ಬ್ಯಾರಿ ಭಾಷೆ ಪಡಿಕೂರು’, ಅಝೀಝ್ ಬೈಕಂಪಾಡಿ ಕೃತಿ ಬಿಡುಗಡೆ.

ಮಂಗಳೂರು: ಹಿರಿಯ ಸಾಹಿತಿ,ಕಲಾವಿದ ಸಂಘಟಕ, ಬ್ಯಾರಿ ಕಲಾರಂಗ ಸಂಸ್ಥೆ, ಅಖಿಲ ಭಾರತ ಬ್ಯಾರಿ ಮಹಾಸಭಾ ಅಧ್ಯಕ್ಷ ರಚಿತ ಕೃತಿ ‘ ಬ್ಯಾರಿ ಭಾಷೆ ಪಡಿ ಕೂರು’ ಎಂಬ ಪದಪುಂಜ ವನ್ನು ಇಂದು ಮಂಗಳೂರಿನ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ , ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ರೈ ಅವರು ಬಿಡುಗಡೆ ಗೂಳಿಸಿದರು. ಅಝೀಝ್ ಬೈಕಂಪಾಡಿ ಅವರು ಬ್ಯಾರಿ ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ರಂಗದಲ್ಲಿ ತನ್ನ ತೊಡಗಿಸಿ ಕೊಂಡಿದ್ದು, ಬ್ಯಾರಿ ದಿನವಹಿ ಬಳ ಕೆಯ ಪದಗಳ ಪುಂಜ ವನ್ನು ಹೊಂದಿದ ಈ ಕೃತಿಯನ್ನು ಉಚಿತ ಹಂಚಿಕೆಗಾಗಿ ರಚಿಸಿದ್ದು, ಸರಕಾರಿ ಇಲಾಖೆ, ಗ್ರಂಥಾಲಯ, ಗಡಿನಾಡು ಕೇರಳದಲ್ಲಿ ಕೂಡ ವಿತರಣೆಯ ಉದ್ದೇಶದಲ್ಲಿ ಮುದ್ರಿಸಲಾಗಿದ್ದು, ಈ ಕೃತಿಯಿಂದಾಗಿ ಸರಕಾರಿ ನೌಕರರು ಇತರ ಭಾಷಿಕರು ಬ್ಯಾರಿ ಭಾಷೆ ಕಲಿಯುವ ಪ್ರಯೋಜನ ಪಡೆಯಲಿದ್ದಾರೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಹೇಳಿದರು. ಅಥಿತಿಗಳಾಗಿ ಹಿರಿಯ ಸಾಹಿತಿ ಮಹಮ್ಮದ್ ಬಡ್ಡುರು, ದ.ಕ.ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್, ಬ್ಯಾರಿ ಕಲಾರಂಗದ ಉಪಾಧ್ಯಕ್ಷ.ರಾದ ಸತೀಶ್ ಸುರತ್ಕಲ್ ಡಾ. ಸಿದ್ದೀಕ್ ಗುರುಪುರ, ಇಸ್ಮಾಯಿಲ್ ಮೂಡು ಶೆಡ್ಡೆ , ಶಾಹುಲ್ ಹಮೀದ್ ತಾಲೀಮು ಉಸ್ತಾದ್ ರವರು ಉಪಸ್ಥಿತರಿದ್ದರು.