ಮಂಗಳೂರು. ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಜನಾಕ್ರೋಶ ಪ್ರತಿಭಟನೆ ಹಾಗೂ ರ್ಯಾಲಿ ನಡೆಸಲಾಯಿತು. ಕೇಂದ್ರದಲ್ಲಿ ಆಡಳಿತದಲ್ಲಿರುವ ಬೀ.ಜೆ. ಪೀ ಸರಕಾರದ ದುರಾಡಳಿತ,ಬೆಲೆಯೇರಿಕೆ,ಖಾಸಗೀಕರಣ.ಉದ್ಯೋಗ ನಷ್ಟ ಇತ್ಯಾದಿ ಪ್ರಮುಖ ವಿಷಯಗಳ ಬಗ್ಗೆ ಜನ ನಾಯಕರ ಮತ್ತು ಸದಸ್ಯರ ಭಾಗವಹಿಸುವಿಕೆ ಯಲ್ಲಿ ನಗರದ ಮಧ್ಯ ಭಾಗದಿಂದ ದ.ಕ.ಜಿಲ್ಲಾಧಿಕಾರಿ ಕಚೇರಿ ವರೆಗೆ ರ್ಯಾಲಿ ಮತ್ತು ಜಿಲ್ಲಾಧಿಕಾರಿ ಕಚೇರಿಯ ಹತ್ತಿರ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗ ಲಾಯಿತು.ನಂತರ ಕೇಂದ್ರದ ಬೆಲೆಯೇರಿಕೆ,ಗ್ಯಾಸ್,ಪೆಟ್ರೋಲ್,ದಿನಸಿ,ಅಡುಗೆ ಎಣ್ಣೆ,ಧಾನ್ಯ ಇತ್ಯಾದಿಗಳ ಬೆಲೆ ಏರಿಕೆ ,ರೈತರ ಕಡೆಗಣನೆ,ಖಾಸಗೀಕರಣ ಗಳ ಬಗ್ಗೆ ಕಾಂಗ್ರೆಸ್ ಮುಖಂಡರು ಮಾತನಾಡಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.ಪ್ರತಿಭಟನೆ ಯಲ್ಲಿ ಶ್ರೀ ಬೀ. ರಮಾನಾಥ ರೈ,ಮಂಗಳೂರು ಶಾಸಕ ಯು. ಟಿ.ಖಾದರ್, ಮೊಯಿದಿನ್ ಬಾವ,ಸಾಹುಲ್ ಹಮೀದ್,ಶಶಿಧರ ಹೆಗ್ಡೆ, ಹರೀಶ್ ಕುಮಾರ್,ಐವನ್ ಡಿ ಸೋಜ, ಮಿಥುನ್ ರೈ,ಇಬ್ರಾಹಿಂ ಕೋಡಿಜಾಲ್, ಜೇ.ಆರ್.ಲೋಬೋ, ಶಾಲೆಟ್ಟ್ ಪಿಂಟೋ ,ಅಬ್ದುಲ್ ರವೂಫ್ ಬಾಜಾಲ್, ಅಯ್ಯೂಬ್ ಮಂಚಿಳ, ಲತೀಫ್ ಕಂದಕ, ಸುಹೈಲ್ ಕಂದಕ,ಸದಾಶಿವ ಉಳ್ಳಾಲ್,ಸಂತೋಷ್ ಕುಮಾರ್ ರೈ,ಎಂ.ಎಸ್ ಮೊಹಮ್ಮದ್,ಮುಸ್ತಫಾ ಉಳ್ಳಾಲ್ ಅಬ್ದುಲ್ ಜಲೀಲ್ ಕೃಷ್ಣಾಪುರ ಯೂಸುಫ್ ಉಚಿಲ್,ಪ್ರತಿಭಾ ಕುಳಾಯಿ ,ಶಂಶುದೀನ್ ಕುದ್ರೋಳಿ ಮತ್ತಿತರರು ಉಪಸ್ಥತರಿದ್ದರು.
kannada news portal
ಇನ್ನಷ್ಟು ವರದಿಗಳು
ಮಂಗಳೂರು: ಆನ್ಲೈನ್ ವಂಚಕ ಪೊಲೀಸ್ ಅಧಿಕಾರಿಯಂತೆ ನಟಿಸಿ 50 ಲಕ್ಷ ರೂ ಮಹಿಳೆಗೆ ವಂಚನೆ.
‘ಐಕ್ಯ ಮಂತ್ರ’ ಕೃತಿ ಬಿಡುಗಡೆ, ‘ಕಾಸರಗೋಡು ಕರ್ನಾಟಕದ ಭಾಗವಾಗಬೇಕಿತ್ತೆಂಬ ಆಶಯ ‘ ಮಂಗಳೂರಿನಲ್ಲಿ ಕಯ್ಯಾರ ಕಿಂಞಣ್ಣ ರೈಗೆ ಶ್ರದ್ಧಾಂಜಲಿ.
ಕೆಲಸದ ಒತ್ತಡ,ಇಂದಿನಿಂದ ಗ್ರಾಮ ಆಡಳಿತಾಧಿಕಾರಿಗಳ ಅನಿರ್ಧಾಷ್ಟಾವಧಿ ಮುಷ್ಕರ,ಬೇಡಿಕೆ.