January 25, 2026

Vokkuta News

kannada news portal

ಪೌರತ್ವ ನಿರ್ಧರಿಸುವ  ಚುನಾವಣಾ ಆಯೋಗದ ಪ್ರಕ್ರಿಯೆ ಅಸಂವಿಧಾನಿಕ: ಆನ್ಲೈನ್ ಸಂವಾದದಲ್ಲಿ ಚಿಂತಕ ರಾ ಚಿಂತನ್.

ವೆಬ್: ಪಬ್ಲಿಕ್ ವಾಯ್ಸ್ ವಾಟ್ಸ್ ಆ್ಯಪ್ ಹ್ಯಾಂಡಲ್ಸ್ ನಲ್ಲಿ ಇಂದು ಭಾ. ಕಾ. ಸಮಯ 7.30 ಕ್ಕೇ ಜರುಗಿದ ಎಸ್. ಐ ಆರ್ ಪ್ರಕ್ರಿಯೆ ಎಂಬ ಶೀರ್ಷಿಕೆ ಅಡಿಯಲ್ಲಿ ನಡೆದ ಸಮಾಜಿಕ ಜಾಲ ತಾಣ ಆನ್ಲೈನ್ ಸಂವಾದದಲ್ಲಿ ಚಿಂತಕ ರಾ ಚಿಂತನ್ ಅವರು ಮಾತನಾಡುತ್ತಾ ಭಾರತೀಯ ಚುನಾವಣಾ ಆಯೋಗ ಎಸ್ ಐ ಆರ್ ಮೂಲಕ ಭಾರತೀಯರ ಪೌರತ್ವವನ್ನು ಪರೀಕ್ಷಸಲು ಹೊರಟಿದೆ ಇದು ಅಸಾಂವಿಧಾನಿಕ ಎಂದು ಹೇಳಿದರು. ಸಂವಾದದ ಆರಂಭದಲ್ಲಿ.ಸಲೀಮ್ ಪರಂಗಿಪೇಟೆ ಸ್ವಾಗತಿಸಿ, ರಫೀಕ್ ಪರ್ಲಿಯಾ ನಿರೂಪಿಸಿದರು.

ರಾ ಚಿಂತನ್: ಎಸ್ ಐ ಆರ್ ಅಂದರೆ ವಿಶೇಷ ತೀವ್ರ ಪರಿಷ್ಕರಣೆ,ನಿಮ್ಮ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡುವುದು. ಜನರಿಗೆ ಒಂದು ಅನುಮಾನ ಇದೆ, 2002ರ ಪಟ್ಟಿ ಏನಿದೆ,ಅಲ್ಲಿ ಹೆಸರು ಇದ್ದರೆ ಈಗ ನಮಗೆ ಮತದಾನ ಮಾಡಬಹುದು ಎಂದು, ಮತದಾರರ ಪಟ್ಟಿಯಲ್ಲಿ ಹೆಸರು ನಮೂದು ಇದ್ದರ ಸಾಕು. ಚುನಾವಣಾ ಆಯೋಗ ಈ ಎಸ್ ಐಆರ್ ಅನ್ನು ಈಗಿನ ಪಟ್ಟಿಯಲ್ಲಿ ನ ಹೆಸರಿನೊಂದಿಗೆ ಸುಲಭವಾಗಿ ಮಾಡಬಹುದು ಎಂಬುದಾಗಿದೆ.ಅಲ್ಲಿ ಮ್ಯಾಪಿಂಗ್ ಆದರೆ ಈ ವರ್ಷದ ಪಟ್ಟಿಯಲ್ಲಿ ಸುಲಭ ನಮೂದು ಆಗುತ್ತದೆ. ಸಾಮಾನ್ಯವಾಗಿ, ಅನರ್ಹ ಹೆಸರು,ನಕಲಿ ಹೆಸರು, ದ್ವಿನಮೂಡು,ಮರಣ ಹೊಂದಿದವರ ಹೆಸರು ತೆರವು ಇತ್ಯಾದಿ ವಿಷಯಕ್ಕೆ ಪರಿಷ್ಕರಣೆ ಆಗುತ್ತಿದೆ,ಎಂದು ಹೇಳಲಾಗುತ್ತಿದೆ, ಇಲ್ಲಿ ಮಿತ ಜನರನ್ನು ತೆರವು ಮಾಡಲು ,ಅಗಾಧ ಜನರನ್ನು ಬಲಿ ಕೊಡುತ್ತಿದ್ದಾರೆ.ಪರಿಷ್ಕರಣೆ ಹೆಸರಲ್ಲಿ ಪೌರತ್ವ ಪರಿಶೀಲನೆಗೆ ಹೊರಟಿದ್ದಾರೆ. ಇದು ಯಾವುದೇ ಕಾರನಕ್ಕೂ ನಮ್ಮ ಕಾನೂನಿನಲ್ಲಿ ಮಾನ್ಯತೆ ಇಲ್ಲದ ವಿಷಯ.ಚುನಾವಣಾ ಆಯೋಗಕ್ಕೆ ನಮ್ಮ ಪೌರತ್ವವನ್ನು ಪರೀಕ್ಷಿಸುವ ಯಾವುದೇ ಅಧಿಕಾರ ಇಲ್ಲ. ಎಸ್ ಆರ್ ಐ ಎನ್ನುವುದು ಎನ್.ಆರ್.ಸಿ ಯ ಶ್ಯಾಡೊ ರೂಪ. ಆದಿವಾಸಿ ಅಲೆಮಾರಿಗಳನ್ನು ಗುರಿಯಾಗಿಸಿದ್ರೆ ಇವರಲ್ಲಿ ಯಾವುದೇ ಪೂರಕ ದಾಖಲೆ ಇರುವುದಿಲ್ಲ.ವಿವಿಧ ದಾಖಲೆ ಪತ್ರದ ಬೇಡಿಕೆ ಇಟ್ಟಿದ್ದಾರೆ. ಪಾಸ್ಪೋರ್ಟ್ ಇತ್ಯಾದಿ ಇದು ಎಷ್ಟು ಜನರಲ್ಲಿ ಲಭ್ಯ ಇದೆ?. ನಾನು ಹುಟ್ಟಿದ್ದೇನೆ ನಮ್ಮ ಅಪ್ಪ ಅಮ್ಮ ಹುಟ್ಟಿದ್ದು ನಾವು ಸಾಬೀತು ಮಾಡಬೇಕು? ಈ ತರಹದ ಕಾನ್ಸೆಪ್ಟ್? ಎಷ್ಟು ಜನ ವಿದ್ಯಾವಂತರು ಇದ್ದಾರೆ?.

ಹಿಂದಿನ ಕಾಲದ ಜನರು ಶಾಲೆಗೆ ಹೋಗಿರುವುದಿಲ್ಲ, ಶಾಲಾ ದಾಖಲಾತಿ ಇರಲ್ಲ, ಮನೆಯಲ್ಲೇ ಜನನ ಆಗಿರುತ್ದೆ, ಪ್ರಮಾಣ ಪತ್ರ ಇರಲ್ಲ, ಪರಿಷ್ಕರಣೆ ಹೆಸರಲ್ಲಿ ದಾಖಲಾತಿ ಕೇಳಿದರೆ ಎಲ್ಲಿಂದ ತರಲು ಸಾಧ್ಯ?.

ಅಧಿಕಾರದಲ್ಲಿ ಶಾಶ್ವತ ವಾಗಿ ಇರಲು ಈ ರೀತಿಯ ಪ್ರಕ್ರಿಯೆ ತರುತ್ತಿದ್ದಾರೆ.

ನಮ್ಮ ಸಂವಿಧಾನ ಹೇಳುತ್ತದೆ, ನೂರು ಅಪರಾಧಿ ತಪ್ಪಿಸಿ ಕೊಂಡರು ಪರವಾಗಿಲ್ಲ ಆದರೆ ಓರ್ವ ನಿರಪರಾಧಿ ಗೆ ಶಿಕ್ಷೆ ಆಗಬಾರದು. ನೂರು ಅಕ್ರಮ ಮತದಾರರನ್ನು ಗುರುತಿಸುವುದಕ್ಕೆ ಸಾವಿರಾರು ಲಕ್ಷಾಂತರ ಮತದಾರರನ್ನು ಬಲಿ ಕೊಡುತ್ತಿದ್ದಾರೆ. ಇದು ಸಂವಿಧಾನ ಬಾಹಿರ, ಪೊಲೀಸರಿಗೆ ಕಳ್ಳರನ್ನು ಹಿಡಿಯಲು ಅಸಾಧ್ಯವಾದರೆ ಎಲ್ಲರನ್ನೂ ಕಳ್ಳರನ್ನಾಗಿಸುವುದು ತಪ್ಪು! ಈ ಹಿಂದಿನ ಹದಿನೇಳು ಲೋಖ ಸಭಾ ಚುನಾವಣೆಯಲ್ಲಿ ಕಳೆದ ಮೂರು ಬಾರಿ ಮೋದಿಯವರು ಗೆದ್ದು ಬಂದ್ದಾರೆ ಹಾಗಂತ ಕಳೆದ ಮತ ಹಾಕಿದೆ ನಾವೆಲ್ಲ ಅನರ್ಹರ? ಕರ್ನಾಟಕದಲ್ಲಿ ಎರಡು ಕೋಟಿಗೂ ಅಧಿಕ ಜನರದ್ದು ಮ್ಯಾಪಿಂಗ್ ಆಗಿಲ್ಲ ಎಂದು ಹೇಳಲಾಗುತ್ತಿದೆ ಬಿಹಾರದಲ್ಲಿ ಅರವತ್ತ ಐದು ಲಕ್ಷ ಜನ ರನ್ನು ಹೊರಗೆ ಇಡಲಾಗಿದೆ.ಇದರಲ್ಲಿ ಮೂವತ್ತಾರು ಲಕ್ಷ ಜನ ಮುಸ್ಲಿಮರು. ದುರಂತ ಅಂದರೆ ದೇಶಕ್ಕೆ ವರ್ಲ್ಡ್ ಕಪ್ ತಂದು ಕೊಟ್ಟ ಮೊಹಮ್ಮದ್ ಶಮಿ, ನೌಕಾ ಪಡೆ ಮುಖ್ಯಸ್ಥ ಅರುಣ್ ಪ್ರಕಾಶ್, ನೊಬೆಲ್ ವಿಜೇತ ಅಮೃತ ಸೇನ್ ಇವರಿಗೆ ನೋಟೀಸು ಹೋಗಿದೆ.

ಹೋರಾಟದ ಭಾಗವಾಗಿ ಹೇಳುವುದಾದರೆ, ಎಸ್ ಐ ಆರ್ ಪಟ್ಟಿಯಿಂದ ಎಲ್ಲರೂ ಹೊರಗೆ ಹೋದ ಮೇಲೆ, ಅವರ ಮ್ಯಾಪಿಂಗ್ ಪ್ರಕ್ರಿಯೆ ಮುಗಿದ ನಂತರ, ಎ ಎಸ್ ಟಿ ಡಿ, ಆಬ್ಸೆಂಟ್, ಸತ್ತು ಹೋದವರು ಡ್ಯೂಪ್ಲಿ ಕೆಟ್ಟು ಈ ನಾಲ್ಕು ವಿಭಾಗ, ಇದರಿಂದ ಆಚೆ ಹೋದಮೇಲೆ ಮತದಾರರನ್ನು ಸತ್ತು ಹೋಗಿದ್ದಾರೆ ಎಂದು ಮಾಡಲಾಗುತ್ತೆ ನಾವು ನೇರ ಇ ಆರ್ ಓ ಹತ್ತಿರ ಹೋಗಬೇಕಾಗುತ್ತದೆ. ಇ ಆರ್ ಓ ಎಲೆಕ್ಟೊರಳ ರಿಜಿಸ್ಟ್ರೇಷನ್ ಆಫೀಸರ್ ಮುಂದೆ ಹೋಗಿ ಕುಳಿತರು, ನಾವು ಸತ್ತು ಹೋಗಿಲ್ಲ ಸರ್, ನಾನು ಬದುಕಿದ್ದೀನಿ, ಹೇ ಅದೆಲ್ಲ ಗೊತ್ತಿಲ್ಲ, ಒಂದು ವೇಳೆ ನೀವು ಬದುಕಿದ್ದೀನಿ ಅಂದರೆ ಫಾರ್ಮ್ ಸಿಕ್ಸ್ ತುಂಬಿಸಿ ಕೊಡಿ ಎನ್ನುತ್ತಾರೆ.ಅದರಲ್ಲಿ ಶಿಫ್ಟ್,ಸತ್ತು,ಆಬ್ಸೆಂಟ್ ಡಿಪ್ಲಿಕೆಟ್ಟು ಅಲ್ಲ ಎಂದು ಬರೆದು ಕೊಟ್ಟರೆ ನಾವು ಪರಿಶೀಲನೆ ಮಾಡುತ್ತೇವೆ ಎನ್ನುತ್ತಾರೆ.ಆಮೇಲೆ.district ಎಲೆಟ್ರೆಲ್ ಆಫೀಸರ್ ಆಲ್ಲಿ ಹೋಗಿ ನಾನು ಈ ದೇಶದ ಪ್ರಜೆ ಎಂದು ಸಾಬೀತು ಪಡಿಸಬೇಕು. ಅದನ್ನು ನಾವು ಸಾಬೀತು ಪಡಿಸಲು ವಿಫಲ ಆದರೆ ನಾವು ಚುನಾವಣಾ ಆಯೋಗಕ್ಕೆ ಹೋಗಿ ಸಾಬೀತು ಪಡಿಸ ಬೇಕಾಗುತ್ತದೆ. ಆ ಮೇಲೆ ಸುಪ್ರೀಮ್ ಕೋರ್ಟು ಇತ್ಯಾದಿ ಸವಾಲುಗಳು.

ಹೋರಾಟದ ಪ್ರಶ್ನೆ ಕೇಳಿದಿರಿ ಹೋರಾಟ ಮಾಡಲೇ ಬೇಕಾಗುತ್ತದೆ. ದೇಶದಲ್ಲಿ ಹೋರಾಟ ನಡೆಯುತ್ತಾ ಇದೆ ಆದರೆ ನಾವು ಅಂದು ಕೊಂಡಷ್ಟು ತುಂಬಾ ಪರಿಣಾಮಕಾರಿಯಾಗಿ ಕಾಂಗ್ರೆಸ್ ಪಕ್ಷ ಮಾಡುತ್ತಾ ಇಲ್ಲ.ರಾಹುಲ್ ಗಾಂಧಿ ಮಾತ್ರಾ ಒಬ್ಬರು ಒದ್ದಾಡುತ್ತಾ ಇದ್ದಾರೆ. ಆ ಬದ್ಧತೆ ಕಾಂಗ್ರೆಸ್ ನಿಂದ ಇಲ್ಲ, ಅನೇಕ ಪಕ್ಷಗಳು ಎಸ್ ಡಿಪಿಐ ಸೇರಿದಂತೆ ಎನ್ ಆರ್ ಸಿ, ಸಿ ಏ ಏ ಯಲ್ಲಿ ಮಾಡಿದ ಹಾಗೆ ಅದನ್ನು ಅವರು ಮುಂದುವರಿಸಿದ್ದಾರೆ, ವಿರೋಧ ಶಕ್ತಿಗಳು ಎಲ್ಲ ಸೇರಿದರೆ ಹೋರಾಟ ಮಾಡಿದರೆ ಜಯ ಸಾಧಿಸ ಬಹುದು. ಎನ್ ಆರ್ ಸಿ ಇವತ್ತು ಕೋರ್ಟಿನಲ್ಲಿ ಇದೆ.ಅದರ ತೀರ್ಪು ಇನ್ನೂ ಬಂದಿಲ್ಲ. ಅಲ್ಲಿರುವ ಸಮಸ್ಯೆ ತಿಳಿದು, ಆ.ಕಾರಣಕ್ಕೆ ಇವರು ಹಿಂಬಾಗಿಲ ಮೂಲಕ ಬಂದು ಶುರು ಮಾಡಿದ್ದಾರೆ. ಮತ ಪಟ್ಟಿಯಲ್ಲಿ ಹೆಸರು ತೆಗೆದರೆ ಸುಲಭವಾಗಿ ಹೋಗುತ್ತೆ. ಬಿ ಎಲ್ ಒ ಗಳಿಗೆ ಎಲ್ಲಾ ಬಹಳ ಒತ್ತಡ ಹಾಕಿದ್ದಾರೆ. ನಾನುಬರೆದ ಸ್ಕ್ರಿಪ್ಟ್ ಪ್ರಕಾರ ಕೆಲಸ ಮಾಡಿ ಮಾಡಿಲ್ಲ ಅಂದರೆ,… ಅಕ್ಕ ಪಕ್ಕದ ಜನರನ್ನು ಟಾರ್ಗೆಟ್ ಮಾಡಿ ಮುಗಿಸಿ ಬಿಡಿ ಅಂದರೆ ಅವರು ಏನು ಮಾಡಲಿಕ್ಕೆ ಸಾದ್ಯ, ನೂರಾರು ಬಿಎಲ್ ಓ ಗಳು ಒತ್ತಡಕ್ಕೆ ಸಿಲುಕಿ ಸತ್ತರು. ಈ ತರಹದ ದುರಂತಗಳು ಯಾಕೆ ಆಗುತ್ತಿದೆ. ಪೌರತ್ವ ವನ್ನು ನಿರ್ಧಾರ ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ, ಎಂದು ಹೇಳಿದರು.