ಇತ್ತೀಚೆಗೆ ಜಿಲ್ಲೆಯ ಕೆಲವು ನಾಯಕರು ಶೀಘ್ರ ರಾಜಕೀಯ ಅಧಿಕಾರ ಹಪಿಸುತ್ತಾ, ಸಂಘೀ ಪ್ರೇರಿತ ಚೀಟಿ ಹೇಳಿಕೆಗಳ ಭರದಲ್ಲಿ ಮದರಸಗಳ ಬೋಧನೆಯ ಬಗ್ಗೆ ಸಾರ್ವಜನಿಕ ಗೊಂದಲ ಸೃಷ್ಟಿಸಿ ಮತೀಯ ಧೃವೀಕರಣಕ್ಕೆ ಪ್ರಯತ್ನಿಸುತ್ತಿರುವುದು ಖಂಡನೀಯ.
ಮುಸ್ಲಿಮ್ ಧಾರ್ಮಿಕ ಸಂಸ್ಥೆಗಳು ಸಮೂಜೋ ನೈತಿಕತೆಯನ್ನು ಸಂರಕ್ಷಿಸುವ ಕೇಂದ್ರಗಳಾಗಿವೆ. ಆರೋಗ್ಯಕರ ಸಮಾಜ ನಿರ್ಮಾಣ ಮದರಸದ ಮೂಲ ಉದ್ದೇಶವಾಗಿದೆ. ಮಾದರಿ ನಾಗರೀಕರನ್ನು ರೂಪಿಸುವ ಶೈಕ್ಷಣಿಕ ಸಂಸ್ಥೆಗಳಾಗಿ ಕಾರ್ಯಾಚರಿಸುತ್ತಿದೆ.
ಪ್ರವಾದಿಗಳು,ದಾರ್ಶನಿಕರು,ಸಂತರು ಗತ ಕಾಲಗಳಿಂದ ಪ್ರತಿಪಾದಿಸುತ್ತಾ ಬಂದಿರುವ ಒಂದೇಮತ,ಒಂದೇ ಕುಲ,ಒಂದೇ ದೇವರು ಎಂಬ ಘೋಷ ವಾಕ್ಯದ ದೇವ ನಂಬಿಕೆಯನ್ನು ಬೋಧಿಸುವ ಕೇಂದ್ರಗಳಾಗಿವೆ. ದಕ್ಷಿಣ ಭಾರತದ ಗತಿಸಿ ಹೋದ ಖ್ಯಾತ ದಾರ್ಶನಿಕರು ಇದೇ ಮಂತ್ರವನ್ನು ಜನರಿಗೆ ಮುಖ್ಯವಾಗಿ ಪ್ರತಿಪಾದಿಸಿದ್ದಾರೆ.
ಕ್ಷಣಿಕ ಲಾಭಕ್ಕಾಗಿ ಹಪ ಹಪಿಸುವ ವಿಭಜನಾ ಶಕ್ತಿಗಳು ಇದನ್ನು ಅರಿಯಲಿ. ಜನತೆಯ ಕುಲಗುರು ಗಳು,ದಾರ್ಶನಿಕರು ಅಂದು ಬೋಧಿಸಿದ ಪ್ರತಿಪಾದನೆ ಸರ್ವ ಕಾಲಕ್ಕೂ ಶಾಶ್ವತ ಎಂದು ಜನರು ಅರಿಯಬೇಕಿದೆ.
ಕೆ.ಅಶ್ರಫ್.
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ಇನ್ನಷ್ಟು ವರದಿಗಳು
ಇಂದು ನಗರದಲ್ಲಿ ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶ.
ಬ್ಯಾರಿ ಮಹಾ ಸಭಾ ನಿಯೋಗದಿಂದ ಕೆ.ಎಸ್.ಮೊಹಮ್ಮದ್ ಮಸೂದ್ ಭೇಟಿ, ಸಮಾವೇಶ ಬಗ್ಗೆ ಸಲಹಾಪೇಕ್ಷೆ.
ವಖ್ಫ್ ವಿವಾದ: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ರನ್ನು ಬೇಟಿಯಾದ ಮುಸ್ಲಿಮ್ ವಾಯ್ಸ್ ಫಾರ್ ಜಸ್ಟಿಸ್ ನಿಯೋಗ