November 5, 2024

Vokkuta News

kannada news portal

ಯುನೈಟಡ್ ಲೀಗಲ್ ಟ್ರಸ್ಟ್ ,ಇತರ ಸಂಸ್ಥೆಗಳ ಆಶ್ರಯದಲ್ಲಿ ಬಂಟ್ವಾಳದಲ್ಲಿ ಕಾನೂನು ಸಲಹಾ ಶಿಬಿರ.

ಬಂಟ್ವಾಳ: ಯುನೈಟೆಡ್ ಲೀಗಲ್ ರಿಸರ್ಚ್ ಅಂಡ್ ಜಸ್ಟಿಸ್ ಟ್ರಸ್ಟ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಮಿತಬೈಲ್ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಮಿತಬೈಲ್ ಈ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ, ಇತ್ತೀಚೆಗೆ ಬಿ.ಸಿ.ರೋಡು,ದಾರುಲ್ ಮೆಹ್ರೀಫೀನ್ ಮದರಸ, ಮಿತಬೈಲ್ ನಲ್ಲಿ ವಕ್ಫ್ ಕಾನೂನು ಮತ್ತು ಮಸ್ಜಿದ್ ಆಡಳಿತ ಕಮಿಟಿಯ ವಿಷಯದಲ್ಲಿ ಕಾನೂನು ಸಲಹಾ ಶಿಬಿರ ನಡೆಸಲಾಯಿತು.

ಶಿಬಿರದ ಅಧ್ಯಕ್ಷತೆಯನ್ನು ಹಿರಿಯ ವಕೀಲರಾದ,ಮತ್ತು ಟ್ರಸ್ಟ್ ಅಧ್ಯಕ್ಷರಾದ ಬಿ.ಇಬ್ರಾಹಿಂ ವಹಿಸಿದರು.
ಸುಮಾರು ಹನ್ನೆರಡು ಮಸೀದಿಗಳ ಆಡಳಿತ ಮಂಡಳಿ ಯು ಈ ಸಲಹಾ ಶಿಬಿರದ ಪ್ರಯೋಜನಾರ್ಥಿ ಗಳಾಗಿ ಭಾಗವಹಿಸಿದ್ದರು.

ವಕೀಲರುಗಳಾದ ಶೇಕ್ ಇಸಾಕ್, ಸರ್ಫರಾಝ್ , ಅಬ್ದುಲ್ ರಝಾಕ್, ಸರ್ಮದ್,ಮುಖ್ತಾರ್, ಅಲ್ತಾಫ್ ನಂದಾವರ, ಹಬೀಬ್ ಕಲ್ಲಡ್ಕ,ಇಸ್ಮಾಯಿಲ್ ಕೃಷ್ಣಾಪುರ, ಇಲ್ಲಿಯಾಸ್, ಅಷ್ಘರ್, ಫೈಝಲ್,ಅಶ್ರಫ್ ಬಿ.ಸಿ.ರೋಡು ರವರು ಕಾನೂನು ಸಲಹಾಗಾರರಾಗಿ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.