July 27, 2024

Vokkuta News

kannada news portal

ಸೌಜನ್ಯ ಪ್ರಕರಣದಲ್ಲಿ ನ್ಯಾಯ ಪಾಲನೆಯಾಗಲಿ: ಕೆ.ಅಶ್ರಫ್ ಮುಸ್ಲಿಮ್ ಒಕ್ಕೂಟ.

ಮೃತ ಸೌಜನ್ಯಳ ಸಾವು ಯಾವುದೇ ಕಾರಣಕ್ಕೂ ನಿಗೂಢವಾಗಿ ಉಳಿಯ ಕೂಡದು ಮತ್ತು ನೈಜ ಆರೋಪಿಗಳು ತಪ್ಪಿಸಿ ಕೊಳ್ಳಕೂಡದು

ಸೌಜನ್ಯ ಪ್ರಕರಣದಲ್ಲಿ ನ್ಯಾಯ ಪಾಲನೆಯಾಗಲಿ: ಕೆ.ಅಶ್ರಫ್ ಮುಸ್ಲಿಮ್ ಒಕ್ಕೂಟ.

ಉಜಿರೆ ಅತ್ಯಾಚಾರ ಮತ್ತು ಹತ್ಯೆ ನತದೃಷ್ಟೆ ಮೃತ ಸೌಜನ್ಯ ಪ್ರಕರಣದಲ್ಲಿ ಸಮರ್ಪಕ ನ್ಯಾಯ ಪಾಲನೆ ಆಗಲಿ ಮತ್ತು ನೈಜ ದುಷ್ಕರ್ಮಿ ಅಪರಾಧಿಗಳಿಗೆ ಶಿಕ್ಷೆ ಆಗಬೇಕಿದೆ.

ಉಜಿರೆಯ ವಿದ್ಯಾರ್ಥಿನಿ ಮೃತ ಸೌಜನ್ಯಳನ್ನು ಅತ್ಯಾಚಾರ ನಡೆಸಿ ಹತ್ಯೆಗೊಳಿಸಿದ ಅಂದಿನ ಪ್ರಕರಣದಲ್ಲಿ ಸಂತೋಷ್ ಎಂಬ ಆರೋಪಿ ದೋಷ ಮುಕ್ತನಾಗಿದ್ದು, ನೈಜ ಅಪರಾಧಿಗಳು ಯಾರೆಂದು ಬಹಿರಂಗ ಪಡಿಸುವುದು ವ್ಯವಸ್ಥೆಯ ಮುಂದಿನ ಸವಾಲು ಆಗಿರುವುದರಿಂದ ಸೌಜನ್ಯ ಪ್ರಕರಣದಲ್ಲಿ ರಾಜ್ಯದ ಜನತೆ ನ್ಯಾಯ ನಿರೀಕ್ಷೆ ಮಾಡುತ್ತಿದೆ. ಮೃತ ಸೌಜನ್ಯಳ ಸಾವು ಯಾವುದೇ ಕಾರಣಕ್ಕೂ ನಿಗೂಢವಾಗಿ ಉಳಿಯ ಕೂಡದು ಮತ್ತು ನೈಜ ಆರೋಪಿಗಳು ತಪ್ಪಿಸಿ ಕೊಳ್ಳಕೂಡದು. ಸೌಜನ್ಯ ನ್ಯಾಯದ ಪರ ಹೋರಾಟಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ ಸೂಚಿಸುತ್ತದೆ ಇಂದು ಕೆ.ಅಶ್ರಫ್ (ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಇವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.