ಮಂಗಳೂರು: ಉಜಿರೆ ಕಾಲೇಜು ವಿದ್ಯಾರ್ಥಿನಿ,ಬಹು ಚರ್ಚಿತ ಹತ್ಯೆ ಮತ್ತು ಅತ್ಯಾಚಾರ ನತದೃಷ್ಟೆ ಸೌಜನ್ಯಾ ಪ್ರಕರಣದ ಪುನರ್ ತನಿಖೆಗೆ ಒತ್ತಾಯಿಸಿ ಜಿಲ್ಲೆ ಮತ್ತು ರಾಜ್ಯದಲ್ಲಿನ ವಿವಿದೆಡೆ ನಡೆಯುವ ಪ್ರತಿಭಟನೆಯ ಭಾಗವಾಗಿ ಹೋರಾಟ ಸಂಘಟನೆಗಳು ತಾರೀಕು 28 ಆಗೊಸ್ಟು ರಂದು ಬೆಳ್ತಂಗಡಿ ಚಲೋ ಕಾರ್ಯಕ್ರಮವನ್ನು ಆಯೋಜಿಸಿದ್ದು, ಡಿವೈ ಎಫ್ ಐ ಸಂಘಟನೆಯು ಹಲವಾರು ದಿನಗಳಿಂದ ಬೆಳ್ತಂಗಡಿ ಚಲೋ ಕಾರ್ಯಕ್ರಮ ರೂಪಿಸುವಂತೆ ಜನ ಜಾಗೃತಿ ಅಭಿಯಾನವನ್ನು ಆಯೋಜಿಸಿದ್ದು ,ಅಭಿಯಾನದ ಸಮಾರೋಪ ಜಾಥಾವನ್ನು ಇಂದು ನಗರದಲ್ಲಿ ಘೋಷಣೆ ಮತ್ತು ಸಭೆಗಳ ಮೂಲಕ ನಡೆಸಿತು.
ಸಭೆಯನ್ನು ಉದ್ದೇಶಿಸಿ ಜಿಲ್ಲಾಧ್ಯಕ್ಷರಾದ ಬಿ. ಕೆ. ಇಮ್ತಿಯಾಜ್ ಮಾತನಾಡಿ , ಸೌಜನ್ಯಾ ಪ್ರಕರಣದಲ್ಲಿ ಬಿಜೆಪಿಯ ನಡೆ ಬಗ್ಗೆ ಸಂಶಯ ವ್ಯಕ್ತಪಡಿಸಿದರು ಮತ್ತು ಜಿಲ್ಲೆಯ ನಾಮ ನಿರ್ದೇಶಿತ ಸಂಸದರು ಬಿಜಿಪಿಯ ಸೌಜನ್ಯಾ ಪರ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆಯೆ ? ಎಂದು ಸವಾಲು ಹಾಕಿದರು.
ಸಮಾರೋಪ ಜಾಥಾದಲ್ಲಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್,ಮಾಜಿ ಉಪ ಮೇಯರ್ ಮೊಹಮ್ಮದ್ ಕುಂಜತ್ ಬೈಲ್,ಸಾಮರಸ್ಯ ಸಂಘಟನೆಯ ಅಧ್ಯಕ್ಷೆ ಮಂಜುಳಾ ನಾಯಕ್,ಜಿಲ್ಲಾ ಪ್ರತಿನಿಧಿ ಮತ್ತು ವಕೀಲರಾದ ನವೀನ್ ಕುತ್ತಾರ್,ನವೀನ್ ಕೊಂಚಾಡಿ,ರಫೀಕ್ ಹರೇಕಳ, ತಯ್ಯಿಬ್ ಕಸಬಾ ಬೆಂಗ್ರೆ,ಜಗದೀಶ್ ಬಜಾಲ್, ಭಾರತ ವಿದ್ಯಾರ್ಥಿ ಫೆಡರೇಶನ್ ರೇವಂತ್ ಕದ್ರಿ, ಪ್ರಥಮ್ ಬಜಾಲ್, ಮಾಧುರಿ ಬೋಳಾರ,ಅಸುಂತ ಡಿ ಸೋಜ, ಪ್ರಮೀಳಾ ದೇವಾಡಿಗ, ಪ್ರಮೀಳಾ ಶಕ್ತಿ ನಗರ, ಆಶಾ ಬೋಳೂರು ಮತ್ತಿತರರು ಜಾಥಾದಲ್ಲಿ ಭಾಗವಹಿಸಿದ್ದರು.
ಇನ್ನಷ್ಟು ವರದಿಗಳು
ಉಸ್ತುವಾರಿ ಸಚಿವರು, ಗೃಹ ಸಚಿವರು, ಸ್ಪೀಕರ್ ಯಾರೂ ಪ್ರತ್ಯುತ್ತರ ನೀಡಲಿಲ್ಲ. ಒಟ್ಟು”ಶಾಂತಿ ಸಭೆ” ನಡೆಯಿತು: ಮುನೀರ್ ಕಾಟಿಪಳ್ಳ.
ಇಲಾಖೆಗಳಲ್ಲಿ ಸಂವಹನ: ಆಯುಕ್ತರ ಕಚೇರಿಗೆ ಬ್ಯಾರಿ ಭಾಷೆ ಪಡಿಕೊರು ಕೃತಿ ವಿತರಣೆ.
ದ.ಕ.ಜಿಲ್ಲಾಡಳಿತ ಕಚೇರಿಗಳಲ್ಲಿ ಸುಗಮ ಸಂವಹನಕ್ಕಾಗಿ ಕಲಾರಂಗ ನಿಯೋಗದಿಂದ ಬ್ಯಾರಿ ಭಾಷೆ ಪಡಿಕೊರು ಕೃತಿ ವಿತರಣೆ.