December 8, 2024

Vokkuta News

kannada news portal

ಜಿ 20 ವಿದ್ಯುಕ್ತ ಸಮಾರೋಪ, ಬ್ರೆಝಿಲ್ ಗೆ ದಂಡ ಹಸ್ತಾಂತರಿಸಿದ ಪ್ರಧಾನಿ ಮೋದಿ.

ನವದೆಹಲಿ: ಜಿ 20 ಅಧ್ಯಕ್ಷ ಸ್ಥಾನದ ವಿಧ್ಯುಕ್ತ ವರ್ಗಾವಣೆಯನ್ನು ಗುರುತಿಸಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಜಿ.20 ಜವಾಬ್ದಾರಿಯ ದಂಡ ಹಸ್ತಾಂತರಿಸಿದರು ಬ್ರೆಜಿಲ್ ಅಧ್ಯಕ್ಷರು ಅವರು ಉದಯೋನ್ಮುಖ ಆರ್ಥಿಕತೆಗಳ ಹಿತಾಸಕ್ತಿಗಳ ವಿಷಯಗಳ ಬಗ್ಗೆ ಭಾರತವನ್ನು ಶ್ಲಾಘಿಸಿದರು.

ನಿನ್ನೆ, ನಾವು ‘ಒಂದು ಭೂಮಿ, ಒಂದು ಕುಟುಂಬ’ ಅಧಿವೇಶನದಲ್ಲಿ ವ್ಯಾಪಕವಾದ ಚರ್ಚೆಗಳನ್ನು ನಡೆಸಿರುತ್ತೇವೆ. ಇಂದು, ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ದೃಷ್ಟಿಗೆ ಸಂಬಂಧಿಸಿದಂತೆ ಆಶಾವಾದಿ ಪ್ರಯತ್ನಗಳಿಗೆ ಜಿ 20 ಶೃಂಗ ಸಭೆ ವೇದಿಕೆಯಾಯಿತು ಎಂದು ನನಗೆ ತೃಪ್ತಿ ಇದೆ, ”ಎಂದು ಪ್ರಧಾನಿ ಮೋದಿ ಇಂದು ತಮ್ಮ ಸಮಾರೋಪ ಭಾಷಣದಲ್ಲಿ ಹೇಳಿದರು.

ಲುಲಾ ಡ ಸಿಲ್ವಾ ಅವರು ಪ್ರಧಾನಿ ಮೋದಿಯವರನ್ನು ಅಭಿನಂದಿಸಿದರು ಮತ್ತು ಸಾಮಾಜಿಕ ಸೇರ್ಪಡೆ, ಹಸಿವಿನ ವಿರುದ್ಧದ ಹೋರಾಟ, ಶಕ್ತಿ ಪರಿವರ್ತನೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಜಿ 20 ಆದ್ಯತೆಗಳಾಗಿ ಪಟ್ಟಿ ಮಾಡಿದರು. ವಿಶ್ವ ಸಂಸ್ಥೆ ಭದ್ರತಾ ಮಂಡಳಿಗೆ ರಾಜಕೀಯ ಬಲವನ್ನು ಮರಳಿ ಪಡೆಯಲು ಶಾಶ್ವತ, ಶಾಶ್ವತವಲ್ಲದ ಸದಸ್ಯರಾಗಿ ಹೊಸ ಅಭಿವೃದ್ಧಿಶೀಲ ರಾಷ್ಟ್ರಗಳ ಅಗತ್ಯವಿದೆ ಎಂದು ಅವರು ಹೇಳಿದರು. ವಿಶ್ವ ಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ನಲ್ಲಿ ಉದಯೋನ್ಮುಖ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನಾವು ಬಯಸುತ್ತೇವೆ ಎಂದು ಅವರು ಹೇಳಿದರು. ಜಾಗತಿಕ ರಾಷ್ಟ್ರಗಳ ಶೃಂಗ ಸಭೆಯಲ್ಲಿ ನಿನ್ನೆ ಪ್ರಮುಖ ರಾಷ್ಟ್ರಗಳು ನವದೆಹಲಿಯಲ್ಲಿ ಭಾಗವಹಿಸಿ ವಾಣಿಜ್ಯ,ಪ್ರಾದೇಶಿಕ,ಮತ್ತು ತಂತ್ರಜ್ಞಾನ ಸಹಕಾರ ವಿನಿಮಯ ಮತ್ತು ಪರಿಸರ ರಕ್ಷಣೆ ಬಗ್ಗೆ ಮಹತ್ವದ ನಿರ್ಣಯಗಳನ್ನು ಅಂಗೀಕರಿಸಿತು.