ವೆಬ್: ಕೇಂದ್ರ ಸರಕಾರ ಜ್ಯಾರಿಗೆ ತರಲು ಪ್ರಯತ್ನಿಸುತ್ತಿರುವ, ಹಾಲಿ ಜಂಟಿ ಸಮಿತಿಗೆ ಚರ್ಚೆಗೆ ಮತ್ತು ವರದಿ ನೀಡಲು ನೀಡಿದ ವಿವಾದಿತ ವಕ್ಫ್ ತಿದ್ದುಪಡಿ ಕಾನೂನು ವಿಷಯದ ಬಗ್ಗೆ ಇಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರುರವರು ನಿನ್ನೆ ರಾತ್ರಿ 9.30 ಕ್ಕೆ ನಡೆದ ರಾಜಕೀಯ ಚರ್ಚಾ ಗೋಷ್ಟಿ ವಾಟ್ಸ್ ಆ್ಯಪ್ ಆನ್ಲೈನ್ ಸಂವಾದದಲ್ಲಿ ಈ ಬಗ್ಗೆ ಮಾತನಾಡಿ ಹಾಲಿ ವಿರೋಧ ಪಕ್ಷಗಳು ವಕ್ಫ್ ತಿದ್ದುಪಡಿ ಕಾಯಿದೆಯ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.ನಿರೂಪಕ ಪತ್ರಕರ್ತ ಮತ್ತು ಕಾನೂನು ವಿಧ್ಯಾರ್ಥಿ ರಿಲ್ವಾನ್ ಹುಸೈನ್ ಸಂವಾದ ನಿರೂಪಣೆ ಮಾಡಿದ್ದಾರೆ.
ರಿಲ್ವಾನ್ ಹುಸೈನ್: ವಕ್ಫ್ ಬೋರ್ಡ್ ಬಗ್ಗೆ ಒಂದು ಸಂಕ್ಷಿಪ್ತವಾದ ಮಾಹಿತಿಯ ಅಗತ್ಯವಿದೆ, ಯಾರಿಂದ, ಯಾವಾಗ, ಏಕೆ ಸ್ಥಾಪನೆಯ ಆಯಿತು? ಇದರ ಸದುಪಯೋಗ ?
ಅಬ್ದುಲ್ ಮಜೀದ್ ಮೈಸೂರು:
ಮೋದಿ ಸರ್ಕಾರ ವಕ್ಫ್ ಯಾಕ್ಟ್ ಗೆ ನೂತನವಾಗಿ ಸರಿ ಸುಮಾರು ನಲವತ್ತು ತಿದ್ದುಪಡಿಗಳನ್ನು ತಂದಿದೆ. ಇದರ ಬಗ್ಗೆ ದೊಡ್ಡ ಒಂದು ಚರ್ಚೆ ದೇಶದಾದ್ಯಂತ ನಡೀತಾ ಇದೆ, ಅದರ ಅಂಗವಾಗಿ ಈ ಸಂವಾದ, ವಕ್ಫ್ ಎಂಬುದು ಇಸ್ಲಾಮಿನಲ್ಲಿ ಮೊದಲಿನಿಂದಲೇ ಇರುವಂತದ್ದು , ಭಾರತದ್ದು ವಕ್ಫ್ ನೋಡಿದರೆ, ದೆಹಲಿಯ ಸುಲ್ತಾನತ್ ಇತ್ತು, ಅದರಲ್ಲಿ ಮೊಹಮ್ಮದ್ ಘೋರಿ ಅವರು , ಜಾಮಿಯಾ ಮಸೀದಿ ಮುಲ್ತಾನ್ ಗೆ, ಒಂದು ಹಳ್ಳಿಯನ್ನ ಈ ಮಸೀದಿಯ ಸುಪರ್ದಿಗೆ ಬಿಟ್ಟು ವಕ್ಫ್ ಮಾಡಿದ್ರು. ಇದು ಒಂದು ದಾಖಲೆಯಲ್ಲಿ ಕಾಣುವಂತದ್ದು, ಇಲ್ಲಿಂದ ಭಾರತದಲ್ಲಿ ವಕ್ಫ್ ಮಾಡುವಿಕೆ ಪ್ರಾರಂಭ ಗೊಂಡಂತದ್ದು. ಇನ್ನು ಸ್ವಾತಂತ್ರ್ಯ ಪೂರ್ವದಲ್ಲಿ 1923 ರಲ್ಲಿ ಮುಸಲ್ಮಾನ್ ವಕ್ಫ್ ಯಾಕ್ಟ್ ಅಂತ ಇದನ್ನು ಸಾಮಣ್ಯಕರಣ ಮಾಡಲು ಪ್ರಾರಂಭ ಆಯಿತು. ಆ ನಂತರ ಪೂರ್ಣ ಮಟ್ಟದ ವಕ್ಫ್ ಯಾಕ್ಟ 1954 ರಲ್ಲಿ ಆರಂಭ ಆಯಿತು. 1995 ರಲ್ಲಿ ಈ ವಕ್ಫ್ ಯಾಕ್ಟ್ ಮತ್ತೊಮ್ಮೆ ತಿದ್ದು ಪಡಿ ಆಗಿ ಹೊಸ ಸೇರ್ಪಡೆ ಯೊಂದಿಗೆ ಬಂತು. ವಕ್ಫ್ ಬೋರ್ಡ್ ಗೆ ಅತಿ ಹೆಚ್ಚು ಬಲ ತಂದು ಕೊಟ್ಟದ್ದು 2013 ರಲ್ಲಿ ಬಂದಂಥ ತಿದ್ದು ಪಡಿ. ಜಸ್ಟಿಸ್ ರಾಜೇಂದ್ರ ಸಾಚಾರ್ ಏನು ಕಮಿಟಿ ನೇಮಕ ಆಗಿತ್ತು ಒಟ್ಟಾರೆ, ಮುಸ್ಲಿಮರ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸ್ಥಿತಿಯನ್ನು ಪರಿಶೀಲನೆ ಮಾಡಿ ಒಂದು ವರದಿ ಇತ್ತು ವಕ್ಫ್ ಬೋರ್ಡ್ ಬಗ್ಗೆ ಅವರ ಶಿಫಾರಸು ಕೂಡಾ ಇತ್ತು. ಜಂಟಿ ಪಾರ್ಲಿಮೆಂಟರಿ ಕಮಿಟಿ ಇದರ ನೇತೃತ್ವ ರೆಹಮಾನ್ ಖಾನ್, ವಕ್ಫ್ ಕೌನ್ಸಿಲ್ ಗಳು ಇವೆಲ್ಲವನ್ನೂ ಒಳಗೊಂಡಂತಹ ವರದಿ ಎಲ್ಲಾ ಸುದೀರ್ಘ ಚರ್ಚೆಯ ನಂತರ ಬಂದಂತಹ ಶಿಫಾರಸು ಗಳನ್ನು ಹಾಕಿ 2013 ರಲ್ಲಿ ಒಂದು ಪೂರ್ಣ ಪ್ರಮಾಣದ ಒಂದು ವಕ್ಫ್ ತಿದ್ದುಪಡಿ ಯಾಕ್ಟ್ ಜಾರಿಗೆ ಬಂದಿದ್ದು ಹಾಲಿ ಜಾರಿಯಲ್ಲಿದೆ. ಅದರಲ್ಲಿ ವಕ್ಫ್ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ,ಬೋರ್ಡ್ ಗೆ ಆಗಲಿ ಅಥವಾ ಮುಟವಲ್ಲಿ ಗೆ ಆಗಲಿ ಅದನ್ನು ಮಾರಾಟ ಮಾಡುವಂತಿಲ್ಲ. ಇನ್ನು ಕಲಂ 40 ರಲ್ಲಿ ವಕ್ಫ್ ಸಂಭಂಧಿಸಿದ ಆಸ್ತಿ ಯಾವುದು ಎಂದು ನಿರ್ಧರಿಸುವ ಹಕ್ಕನ್ನು ಕೂಡಾ ನೀಡಿದೆ. ಈ ತಿದ್ದು ಪಡಿ ಅತಿ ಹೆಚ್ಚು ಅಧಿಕಾರವನ್ನು ವಕ್ಫ್ ಬೋರ್ಡ್ ಗೆ ನೀಡುತ್ತದೆ.
ರಿಲ್ವಾನ್ ಹುಸೈನ್: ದೇಶದಲ್ಲಿ ಅಂದಾಜು ಎಷ್ಟು ಕೋಟಿ ರೂಪಾಯಿಯ ವಕ್ಫ್ ಆಸ್ತಿಗಳು ಇರಬಹುದು. ಇದರ ಮೇಲೆ ಸರಕಾರಕ್ಕೆ ಯಾವ ರೀತಿಯ ಹಕ್ಕುಗಳು ಇದೆ. ವಕ್ಫ್ ಇಲಾಖೆಯ ಅಧಿಕಾರ, ಸಂವಿಧಾನದಲ್ಲಿ ಏನೆಲ್ಲಾ ಹೇಳಲಾಗಿದೆ?.
ಅಬ್ದುಲ್ ಮಜೀದ್ ಮೈಸೂರು: ಇನ್ನು ಭಾರತದ ವಕ್ಫ್ ಆಸ್ತಿ ಯ ಬಗ್ಗೆ ಹೇಳುವುದಾದರೆ, ಭಾರತೀಯ ಸೇನೆ ಮತ್ತು ರೈಲ್ವೆ ಇಲಾಖೆ ಬಿಟ್ಟರೆ, ಮೂರನೇ ಅತಿ ದೊಡ್ಡ ಆಸ್ತಿ ಹೊಂದಿದ ಒಂದು ಸಂಸ್ಥೆ ಆಗಿರುತ್ತದೆ ಭಾರತೀಯ ವಕ್ಫ್ ಬೋರ್ಡ್. ಒಟ್ಟು ಮೂವತ್ತ ಎರಡು ವಕ್ಫ್ ಸಂಸ್ಥೆ ಗಳು ಇದೆ. ಅದರಲ್ಲಿ ಎರಡು ಶಿಯ ವಕ್ಫ್ ಸಂಸ್ಥೆ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಇದೆ. ಉಳಿದೆಲ್ಲ ಕಡೆ ಒಂದೇ ವಕ್ಫ್ ಬೋರ್ಡ್. ಒಟ್ಟು ಎಂಟು ಲಕ್ಷದ ಎಪ್ಪತ್ತು ಸಾವಿರ ಸ್ಥಿರಾಸ್ತಿ ಇದೆ. ಹದಿನಾರು ಸಾವಿರದ ನೂರ ಎಪ್ಪತ್ತ ಮೂರು ಚರಾಸ್ತಿಗಳು ಇದೆ. ಮೂರು ಲಕ್ಷದ ಐವತ್ತು ಸಾವಿರದ ಮೂವತ್ತೊಂದು ಎಸ್ಟೇಟ್ ಗಳು ಇದೆ. ಒಟ್ಟು ಎಂಟು ಲಕ್ಷ ಎಕ್ರೆ, ಇನ್ನೊಂದು ವರದಿ ಒಂಬತ್ತು ಲಕ್ಷ ನಲವತ್ತು ಸಾವಿರ ಎಕರೆ. ಇನ್ನು ಅದರ ಮೌಲ್ಯ 1.2 ಲಕ್ಷ ಕೋಟಿ ರುಪಾಯಿಯ ಒಂದು ಆಸ್ತಿ ಭಾರತದ ವಕ್ಫ್ ಬೋರ್ಡ್ ನಲ್ಲಿ ಇದೆ. ಇದು ನಿಜಕ್ಕೂ ಕೂಡ ನಾವು ಅಭಿಮಾನ ಪಡಬೇಕಾದ ಒಂದು ವಿಷಯ. ಆದರೆ ದುರಾದೃಷ್ಟ ವಶಾತ್ ಈ ಅಗಾಧ ಪ್ರಮಾಣದ ಆಸ್ತಿಯನ್ನು ಇಲ್ಲಿನ ಮುಸ್ಲಿಮರ ಆರ್ಥಿಕ ಶೈಕ್ಷಣಿಕ ಸಾಮಾಜಿಕ ಅಭಿವೃದ್ಧಿಗೆ ಬಳಕೆ ಆಗಿಲ್ಲ ಎಂಬುದನ್ನು ಕೂಡಾ ನಾವು ಎಲ್ಲರೂ ಒಪ್ಪ ಬೇಕಾದ ವಿಷಯ. ವಕ್ಫ್ ಬೋರ್ಡ್ ಇದನ್ನು ಮ್ಯಾನೇಜ್ ಮಾಡುವ ಸಂಸ್ಥೆ ಆಗಿರುತ್ತದೆ. ಅದರಲ್ಲಿ ಸೆಂಟ್ರಲ್ ಮತ್ತು ರಾಜ್ಯದಲ್ಲಿ ಸ್ಟೇಟ್ ವಕ್ಫ್ ಬೋರ್ಡ್ ಇವೆ. ಅದು ಬಿಟ್ಟರೆ ಜಿಲ್ಲೆಯಲ್ಲಿ ಸಲಹಾ ಸಮಿತಿ ಎಂಬುದು. ಆದರೆ ಈ ಸಲಹಾ ಸಮಿತಿಗೆ ಜಿಲ್ಲೆಯಲ್ಲಿ ಅಧಿಕ ಅಧಿಕಾರ ಇಲ್ಲ. ನಿಜವಾಗಿ ಧೀಮಂತ ವ್ಯಕ್ತಿಗಳು ಜನಪರ ಆಲೋಚನೆ ಇರುವವರು ಅಂದರೆ ಡೈನಮಿಕ್ ಆದ ವ್ಯಕ್ತಿಗಳು ಇದರ ಸೂತ್ರದಾರರು ಆದರೆ ನಿಜಕ್ಕೂ ಕೂಡ ಒಂದು ದೊಡ್ಡ ಮಟ್ಟದ ಚಳುವಳಿಯನ್ನೇ ಮಾಡಬಹುದು. ಇನ್ನು ವಕ್ಫ್ ಆದಾಯದಲ್ಲಿ ಮೂವತ್ತು ಶೇಕಡಾ ಆದಾಯವನ್ನು ಮುಸ್ಲಿಮರ ಆರ್ಥಿಕ ಶೈಕ್ಷಣಿಕ ಸಾಮಾಜಿಕ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದು ಇದೆ. ಆದರೆ ದುರಾದೃಷ್ಟ ವಶಾಟ್ ಅದು ಬಳಕೆ ಆಗ್ತಾ ಇಲ್ಲ ಎಂಬುದು ಕಟು ಸತ್ಯ. ಇಂತ ಹ ಆಸ್ತಿಯನ್ನು ಮುಸ್ಲಿಮರ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ಕೊಡದೆ ವಾಣಿಜ್ಯ ಸಂಕೀರ್ಣ ಉದ್ದೇಶಕ್ಕೆ ಬಳಸಲಾಗುತ್ತಿರುವ ಪ್ರವರ್ತಿ ಇದೆ. ಇದರಲ್ಲಿ ಭ್ರಷ್ಟಾಚಾರ ಇದೆ, ಇದು ಅತಿ ದೊಡ್ಡ ದುರಂತ. ( 3.45).
ರಿಲ್ವಾನ್ ಹುಸೈನ್: ಕೇಂದ್ರದ ಬಿಜೆಪಿ ಸರಕಾರವು ವಕ್ಫ್ ಇಲಾಖೆಯ ಮೇಲೆ ಧಾಳಿ ನಡೆಸುವುದಕ್ಕಾಗಿಯೇ ಹೊಸದಾದ ಕಾನೂನನ್ನು ಅನುಷ್ಠಾನ ಗೊಳಿಸುವ ಹುನ್ನಾರ ನಡೆಸುತ್ತಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಆ ಮಸೂದೆಯೂ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ, ಅದರ ಪರಿಣಾಮ ಏನು?.
ಅಬ್ದುಲ್ ಮಜೀದ್ ಮೈಸೂರು:
ಇನ್ನು ಏನು ಮೊನ್ನೆ ನರೇಂದ್ರ ಮೋದಿ ನೇತೃತ್ವದ ಸರಕಾರ ಒಂದು ಹೊಸ ವಕ್ಫ್ ನ ತಿದ್ದುಪಡಿ ಯಾಕ್ಟ್ ಏನಿದೆ ಇದು ನಿಜಕ್ಕೂ ಕೂಡ ಆಘಾತ ಕಾರಿ ಆದದ್ದು, ಇದರ ಉದ್ದೇಶ, ದುರುದ್ದೇಶ ಆಗಿರುತ್ತದೆ. ಪ್ರಥಮವಾಗಿ ನಮಗೆ ಅರಿವು ಇರಬೇಕಾದುದು ವಕ್ಫ್ ಸೊತ್ತು ಅನ್ನುವಂತಾದುದು ಅದು ಸರ್ಕಾರದ ಸೊತ್ತು ಅಲ್ಲ, ಅದು ಶುದ್ಧವಾಗಿ ಖಾಸಗಿ ಸೊತ್ತು ಆಗಿರುತ್ತದೆ. ಅಂದರೆ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಜಾಗ ಆಗಿರುತ್ತದೆ. ಅಂದರೆ ಸರಕಾರದ ಸೊತ್ತು ಅಲ್ಲ ಎಂಬುದು ಸತ್ಯ. ಸರಕಾರದ ಸಂಸ್ಥೆಯ ಸೊತ್ತು ಕೂಡಾ ಅಲ್ಲ. ಅದು ಕೆಲವರು ವಕ್ಫ್, ಅಲ್ಲಾಹನ ಹೆಸರಿನಲ್ಲಿ ದಾನವಾಗಿ ಕೊಟ್ಟ ಸೊತ್ತು ಆದುದರಿಂದ ಮುಸ್ಲಿಮರ ಧಾರ್ಮಿಕ ಶೈಕ್ಷಣಿಕ ಆರ್ಥಿಕ ಸಾಮಾಜಿಕವಾದ ಅಭಿವೃದ್ಧಿಗೆ ಬೇಕಾಗಿ ಅವರು ದಾನವಾಗಿ ಕೊಟ್ಟಂತಹ ಒಂದು ಆಸ್ತಿ ಆಗಿರುತ್ತದೆ. ಈಗ ಅದು ಸಂಪೂರ್ಣ ವಕ್ಫ್ ಬೋರ್ಡ್ ನ ಸುಪರ್ದಿಯಲ್ಲಿ ಇತ್ತು, ಈಗ ಅದರ ಮೇಲೆ ಒಂದು ಕಡಿವಾಣ ಹಾಕುವ ಅಥವಾ ನಿಯಂತ್ರಣ ಮಾಡುವ ಒಂದು ಹುನ್ನಾರ ಆಗಿರುತ್ತದೆ ಈ ಕಾನೂನಿನ ಮೂಲಕ ತರಲು ಹೊರಟಿರುವ ವಂತದ್ದು ಇದರಲ್ಲಿ ಯಾವುದೇ ಒಳ್ಳೆಯ ಉದ್ದೇಶ ಇಲ್ಲ, ಎರಡನೆಯದ್ದು ಇದು ಒಂದು ದ್ರುವೀಕರಣ ವಿಶಯವಾಗಿ ಅಂದರೆ ಮುಂದಿನ ಬರುವ ಚುನಾವಣೆಗೆ ಹರಿಯಾಣ, ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಗೆ ಮುಂಚೆ ಒಂದು ಡ್ರವೀಕರಣ ಆಗಬೇಕು, ಮುಸಲ್ಮಾನರು ವಕ್ಫ್ ಆಸ್ತಿಯನ್ನು ತೆಗೆಯುತ್ತಾರೆ, ಮೋದಿ ಹಾಗೆ… ಅದನ್ನು ನಿಯಂತ್ರಣ ಮಾಡಿದರು… ಎಂದು ಪ್ರೋಪ ಗಾಂಡ ಮಾಡಿ ಅದರಿಂದ ಒಂದು ಬಿಜೆಪಿಗೆ ಲಾಭ ಮಾಂಡುವ ಉದ್ದೇಶ. ಈ ಹಿಂದೆ ತಿದ್ದು ಪಡಿ ಆದ ಕಾನೂನು ವಿಸ್ತೃತ ಚರ್ಚೆ ನಡೆದು, ರಾಜೇಂದ್ರ ಸಾಚಾರ್ ವರದಿ, ವಕ್ಫ್ ಕೌನ್ಸಿಲ್, ಪಾರ್ಲಿಮೆಂಟ್ ರಿ ಕಮಿಟಿ ಚರ್ಚೆ ಆದ ನಂತರ ಶಿಫಾರಸು ಗೊಂಡು ಮಾಡಲಾಗಿತ್ತು.( 2.57ನಿ).
ಅಬ್ದುಲ್ ಮಜೀದ್ ಮೈಸೂರು: ಹೊಸ ಕಾನೂನಿನಲ್ಲಿ
ಸೆಂಟ್ರಲ್ ವಕ್ಫ್ ಕೌನ್ಸಿಲ್ ಮೊದಲು 14 ಸದಸ್ಯರನ್ನು ಒಳಗೊಂಡಿತ್ತು. ಈಗ 23 ಸದಸ್ಯರನ್ನುಮಾಡಿದ್ದಾರೆ
ಮೊದಲು ಅದರಲ್ಲಿ ವಕ್ಫ್ ಚೇರ್ಮನ್ ಮುಸ್ಲಿಮ್ ಅಲ್ಲದ ವ್ಯಕ್ತಿ ಇದ್ದರು, ಆದರೆ ಈಗ ಏಳು ಜನ ಮುಸ್ಲಿಮ್ ಅಲ್ಲದವರು ಇರಬಹುದು. ಇಬ್ಬರನ್ನೂ ಖಡ್ಡಾಯ ಮುಸ್ಲಿಮ್ ಆಲ್ಲದವರು ಇರಬೇಕಾಗುತ್ತದೆ. ಮತ್ತೆ ಏಳು ಆ ಸದಸ್ಯರು ಏನು ಇದ್ದರೆ ಅವರನ್ನು ನಾಮ ನಿರ್ದೇಶನ ಮಾಡುವುದು. ಹಾಗಾಗಿ ಸರಕಾರ ಯಾರಿಗೆ ಬೇಕಾದವರನ್ನು ಕೊಡ ಮಾಡಬಹುದು ಸಾದ್ಯತೆ ಇದೆ. ಮುಸ್ಲಿಂ ರಿಗೆ ಸೇರಿದ ಸರಕಾರದ ಯಾವುದೇ ಸಂಸ್ಥೆಗೆ ಸೇರದ ಅಧಿಕಾರವಿಲದ ಆಸ್ತಿ ಆಗಿರುತ್ತದೆ .
ನಿಯಂತ್ರಣವ್ಯನ್ನು ಹೇರಲು, ಒಂದು ಷಡ್ಯಂತ್ರ, ಅಘಾದ ಆಸ್ತಿ ಗಳು ಕಬಳಿಕೆ ಆಗಿದೆ. ಅದು ದೊಡ್ಡ ಇತರರ ಕೈಯಲ್ಲಿ ಇದೆ ಅದನ್ನು ಸಕ್ರಮ ಮಾಡಲಿಕ ಇರುವ ಒಂದು ಯೋಜನೆ ಆಗಿರ ಬಹುದು. ಇನ್ನು ರಾಜ್ಯದ ವಕ್ಫ್ ಸಂಸ್ಥೆಯಲ್ಲಿ ಕೂಡಾ ಮೊದಲು ಏಳರಿಂದ ಹನ್ನೊಂದು ಸದಸ್ಯರು ಇದ್ದರು. ಈಗ ಹನ್ನೊಂದು ಸದಸ್ಯ ಮಾಡುತ್ತಾರೆ ಅದರಲ್ಲಿ ಏಳು ಸದಸ್ಯರು ಮುಸ್ಲಿಮ್ ಅಲ್ಲದ ವ್ಯಕ್ತಿಗಳು ಆಗಬಹುದು. ಇದರಲ್ಲಿ ಇಬ್ಬರು ಹಿಂದೂ ಮತ್ತು ಇಬ್ಬರು ಮಹಿಳೆ ಖಡ್ಡಾಯ. ಮೊದಲು ಮಹಿಳೆಯರಿಗೆ ಪ್ರಾತಿನಿಧ್ಯ ಇರಲಿಲ್ಲ ರಾಜೇಂದ್ರ ಸಚಾರ ವರದಿಯಲ್ಲಿ ಕೂಡಾ ಮಹಿಳೆಯರ ಪ್ರಾತಿನಿಧ್ಯ ಇರಲಿಲ್ಲ.
ಕೇಂದ್ರ ಸರಕಾರ ರಚಿಸಿದ ವಕ್ಫ್ ಪೋರ್ಟಲ್ ನಲ್ಲಿ ವಕ್ಫ್ ಸಂಭಂಧಿಸಿದ ಮಾಹಿತಿಯನ್ನ ಆರು ತಿಂಗಳ ಒಳಗಾಗಿ ಕೊಡಬೇಕು ಎಂದು ಹೇಳಲಾಗಿದೆ. ಸರಕಾರ ಮೊದಲು ವಕ್ಫ್ ಆಸ್ತಿಯನ್ನು ತೀರ್ಮಾನ ಮಾಡುವುದು ವಕ್ಫ್ ಬೋರ್ಡ್ ಆಗಿತ್ತು,ಈಗ ಅದು ಸರಕಾರಕ್ಕೆ ಹೋಗಿದೆ. ಸರಕಾರ ಏನು ಮಾಡಬಹುದು ಅಂತ ಹೇಳಿದರೆ ಪ್ರಭಾವಿ ವ್ಯಕ್ತಿ ಗಳು ಏನು ಇಂದು ವಕ್ಫ್ ಭೂಮಿಯನ್ನು ಕಬಳಿಸಿದ್ದಾರೆ, ಏನು ಅಂಬಾನಿ ಮನೆ ಮುಂಬೈ ಯಲ್ಲಿ ಇರುವುದು ವಕ್ಫ್ ಆಸ್ತಿ ಆ ಸಂಧರ್ಭದಲ್ಲಿ ವಕ್ಫ್ ಆಗಿದ್ದವರು ಅದನ್ನು ಮಾರಾಟ ಮಾಡಿದ್ದರು. ಆಗ ಮಾರಾಟ ಆಯ್ಕೆ ಇತ್ತು
ಈಗ ಇಲ್ಲ. ಹಾಗೆ ಕರ್ನಾಟಕದಲ್ಲಿ ರಾಜಭವನ ಇರಬಹುದು, ಹಲವು ಪ್ರತಿಷ್ಠಿತ ಸಂಸ್ಥೆಗಳು ಕೊಡ ವಕ್ಫ್ ಆಸ್ತಿ ಆಗಿರುತ್ತದೆ. ಇದನ್ನು ರೆಗುಲಾರೈಸ್ ಮಾಡುವುದಕ್ಕೆ ಕಾನೂನನ್ನು ದುರ್ಬಳಕೆ ಮಾಡಲಾಗುತ್ತದೆ. ಮೊದಲು ವಕ್ಫ್ ಬೋರ್ಡು ಗೆ ಈ ಹಿಂದೆ ಇದ್ದ ಕಾನೂನು ಪ್ರಕಾರ ವಕ್ಫ್ ಯಾರು ಕೂಡಾ ಮಾಡಬಹುದು ಆಗಿತ್ತು. ಯಾವುದೇ ಜಾತಿ ಧರ್ಮಕ್ಕೆ ಸೇರಿದವರು ವಕ್ಫ್ ಮಾಡಬಹುದಿತ್ತು ಆದರೆ ಈಗ ಏನು ಅಂದರೆ. ಒಬ್ಬ ಮುಸ್ಲಿಮ್ ಮಾತ್ರ ಆಗಬೇಕು ಮತ್ತು ಅವನು ಕನಿಷ್ಠ ಐದು ವರ್ಷ ದಿಂದ ಮುಸ್ಲಿಮ್ ಆಗಿರಬೇಕು. ಮುಸ್ಲಿಮರು ಇತರ ಧರ್ಮಕ್ಕೆ ದಾನ ಮಾಡಿದ ಹಾಗೆ ಹಿಂದೂಗಳು ಕೂಡ ಮಸೀದಿಗೆ ಯತೀಮ್ ಖನ ಗೆ ದಾನ ಮಾಡಿದ್ದು ಮೋಡಿದೇವೆ. ಈ ಐದು ವರ್ಷ ಖಡ್ಡಾಯ ಮುಸ್ಲಿಮ್ ಎಂಬ ಇದು ಒಂದು ಕೆಟ್ಟ ನಡೆ, ಮತ್ತು ಜಾತಿ ಬೇಧ ಮಾಡುವುದು ಆಗಿದೆ.ಮೊದಲು ಸರ್ವೇ ಕಮಿಟಿ ಎಂದು ಪ್ರತ್ಯೇಕ ಇದ್ದುದನ್ನು ಜಿಲ್ಲಾಧಿಕಾರಿ ಇವರಿಗೆ ನೀಡಲಾಗಿದೆ.( 3.06).
ಒಂದು ದೊಡ್ಡ ಕೊರತೆ ಏನಂದರೆ ಈ ಮೊದಲು ವಕ್ಫ್ ಆಸ್ತಿಯ ವಿವಾದಗಳನ್ನು ಇತ್ಯರ್ಥ ಪಡಿಸಲು ವಕ್ಫ್ ಟ್ರಿಬುನಲ್ ಇತ್ತು, ಈಗ ಟ್ರಿಬುನಾಲ್ ತೆಗೆದು ಹಾಕಿ ರೆಗ್ಯುಲರ್ ನ್ಯಾಯಾಲಯ ವೆ ಇದನ್ನು ತೀರ್ಮಾನ ಮಾಡಬೇಕು ಎಂದು ಹೇಳುತ್ತದೆ. ಇದು ಕೆಲವೊಮ್ಮೆ ಜನ ವಿರೋಧಿ ಆದ ತೀರ್ಮಾನವನ್ನು ಮಾಡುತ್ತದೆ ಎಂದು ನಮಗೆ ಗೊತ್ತಿದೆ. ಮುಸ್ಲಿಮ್ ವಿರೋಧಿ ತೀರ್ಮಾನ, ಬಾಬ್ರಿ ಮಸೀದಿ ವಿವಾದದಲ್ಲಿ ನಾವೇನು ತೀರ್ಪು ಪಡೆದೆವು ಎಂದು ನಮಗೆ ಗೊತ್ತಿದೆ.(1.18).
ಇನ್ನೊಂದು ಕೊರತೆ ಅಂದರೆ, ಬೊಹ್ರ ಮತ್ತು ಆಗಾ ಖಾನ್ ಗೆ ಪ್ರತ್ಯೇಕ ವಕ್ಫ್ ಮಾಡಬೇಕು ಎಂದು ಹೇಳುತ್ತದೆ. ವಕ್ಫ್ ಗೆ ಸೆಂಟ್ರಲ್ ಬೇಸ್ ನಲ್ಲಿ ಡಾಟ ಎಂಟ್ರಿ ಮಾಡಬೇಕು , ಹಾಲಿ ಕಂದಾಯ ಕಾನೂನು ಜಾರಿ ಇದೆ ಎಂದು ಹೇಳುತ್ತದೆ. ಸೆಕ್ಷನ್ 40 ರ ವಕ್ಫ್ ಬೋರ್ಡ್ ಅಧಿಕಾರ ವನ್ನೂ ತೆಗೆದು ಹಾಕಿರುತ್ತಾರೆ. ಪ್ರಭಾವಿ ವ್ಯಕ್ತಿಗಳು ಜಿಲ್ಲಾಧಿಕಾರಿಗೆ ಲಂಚ ನೀಡಿ ಪ್ರಶ್ನಿತ ಆಸ್ತಿ ವಕ್ಫ್ ಬೋರ್ಡು ಅಲ್ಲಾ ಎಂದು ಹೇಳಿದರೆ ಹಾಗೆ ತೀಮಾನ ಆಗುತ್ತದೆ. ಆಡಿಟ್ ವಿಚಾರ ಕೂಡಾ ಹಾಗೆ ಇದೆ , ವಕ್ಫ್ ಬೋರ್ಡ್ ನ ಅಧಿಕಾರವನ್ನು ತೆಗೆದು ಹಾಕುವುದು. ಹುನ್ನಾರ ಮೂಲಕ ಆಸ್ತಿ ಲಾಪಟಯಿಸುವುದು ಆಗಿದೆ. ಸರಕಾರದ ಮೂಲಕ ಕರ್ನಾಟಕದ ರಾಜ ಭವನ ವಿಂಡ್ಸರ್ ಮ್ಯಾನರ್ ಇತ್ಯಾದಿ ಆಸ್ತಿಗಳನ್ನು ಕಬಳಿಸುವ ಹುನ್ನಾರ ಇದೆ.
ರಿಲ್ವಾನ್ ಹುಸೈನ್:
ಕೇಂದ್ರದ ಬಿಜೆಪಿ ಸರಕಾರವು ದುರುದ್ದೇಶದಿಂದಲೇ ಇಂತಹ ಒಂದು ಕಾನೂನನ್ನು ಈ ನಡೆಯ ವಿರುದ್ಧ ಸಂಸತ್ ನಲ್ಲಿ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.ಜಂಟಿ ಸಮಿತಿ ರಚಿಸಿದೆ. ಆದರೆ ವರದಿ ಚರ್ಚೆ ನಂತರವೂ ಕೂಡ ಕೇಂದ್ರ ಸರ್ಕಾರ ಈ ವಿವಾದಿತ ವಕ್ಫ್ ಮಸೂದೆಯನ್ನು ಜಾರಿಗೆ ತರಲು ಹಟ ಹಿಡಿದರೆ ಮುಸ್ಲಿಮ್ ಸಮುದಾಯ ಯಾವ ರೀತಿಯ ಹೋರಾಟ ನಡೆಸಬಹುದು?.
ಅಬ್ದುಲ್ ಮಜೀದ್ ಮೈಸೂರು:
ವಿವಿಧ ಪಕ್ಷಗಳನ್ನು ಒಳಗೊಂಡ ಜಂಟಿ ಸಮಿತಿ ನೇಮಕ ಮಾಡಿದೆ. ಅದರಲ್ಲಿ ದುರಾದೃಷ್ಟ ಏನು ಅಂದರೆ ಅತಿ ಹಳೆಯ ಮುಸ್ಲಿಮ್ ಲೀಗ್ ಪಕ್ಷದ ಯಾವುದೇ ಸದಸ್ಯರನ್ನು ಒಳಪಡಿಸಿಲ್ಲಾ. ಕೆಲವು ವಿಚಾರಗಳು ಒಳ್ಳೆಯದೆಂದು ಇದೆ, ಹೇಗಿರುವ ವಕ್ಫ್ ಮಂಡಳಿ ಯಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ನಿಷ್ಕ್ರಿಯತೆ,ಒಂದು ವಿಷಣರಿ ಇರುವ ನಾಯಕರ ಕೊರತೆ, ಕಾಟಾಚಾರಕ್ಕೆ ಬಾಲ ಬಡುಕರ, ರಾಜಕೀಯ ವ್ಯಕ್ತಿ, ಓದು ಬರಹ ಇಲ್ಲದ ವರ ನೇಮಕ,ಇದನ್ನು ಸರಿಪಡಿಸಬಹುದು. ಸ್ವಲ್ಪ ಜ್ಞಾನ ಇರುವ ವ್ಯಕ್ತಿ ಗಾಳನ್ನು ಆಯ್ಕೆ ಮಾಡ್ಬೇಕು ಎಂದು ಇದೆ, ಬುದ್ಧಿ ಜೀವಿಗಳನ್ನು ಆಯ್ಕೆ ಮಾಡಬೇಕು ಎಂದು ಇದ್ದರು ಕೂಡಾ ಕೆಲವು ವಿಷಯಗಳು ಪ್ರಯೋಜನ ರೀತಿಯದ್ದು.ನೆಗೆಟಿವ್ ಜಾಸ್ತಿ ಇದೆ.ಜಂಟಿ ಸಮಿತಿಯು ಇದನ್ನು ಸರಿಪಡಿಸಬಹುದು ಆಗಿದೆ. ಒಂದು ವೇಳೆ ಅದನ್ನು ಸರಿಪಡಿಸದೆ ಮಂಡನೆ ಆದರೆ ರಾಜ್ಯ ಸಭೆಯಲ್ಲಿ ಅದನ್ನು ಸೋಲಿಸುವ ಸಾದ್ಯತೆ ಇರುತ್ತದೆ. ಹೊರಗೂ ಕೂಡಾ ಒಂದು ದೊಡ್ಡ ಮಟ್ಟದ ಹೋರಾಟ ಕೂಡಾ ಅಗತ್ಯ ಇದೆ. ಮುಸ್ಲಿಮ್ ಸಮುದಾಯ ಮಾಡಬೇಕಾದುದು ಏನು ಅಂದರೆ ನಾವು ಕೇವಲ ಒಟ್ ಬ್ಯಾಂಕ್ ಆಗಿದ್ದೇವೆ ಹೊರತು, ನಾವು ಓಟು ಹಾಕಿದ ಪಕ್ಷದಿಂದ ನಾವು ಕೆಲಸ ತಗೊಳ್ಳುವುದಿಲ್ಲ. ಈ ವಿಷಯದಲ್ಲಿ ನೀವು ಹೋರಾಟ ನಡೆಸಿ ಎಂದು, ನೇತೃತ್ವ ವಹಿಸಿ ಎಂದು ಒತ್ತಡ ಮಾಡಬೇಕಾಗುತ್ತದೆ. ಉದಾಹರಣೆಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸೋನಿಯಾ ಗಾಂಧಿ,ರಾಹುಲ್ ಗಾಂಧಿ, ದೇವೆ ಗೌಡರ ಬಗ್ಗೆ ವೈಯುಕ್ತಿಕ ಟೀಕೆ ಬಂದಾಗ ನೀವು ದೊಡ್ಡ ಮಟ್ಟದ ಹೋರಾಟ ಮಾಡುತ್ತೀರಿ. ಆದರೆ ಇಡೀ ಸಮುದಾಯಕ್ಕೆ ಈ ರೀತಿ ತೊಂದರೆ ಆದಾಗ ಈ ರೀತಿಯ ಹೋರಾಟ ಸಂಘಟಿಸುವುದಿಲ್ಲ. ಮುಸ್ಲಿಮ್ ಸಮುದಾಯ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ.(3.21).
ಮುಂದಿನ ಇನ್ನೊಂದು ಉಪಾಯ ಈ ಕಾನೂನನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದು, ಅದಕ್ಕೂ ಮುಂಚೆ ಜನ ಹೋರಾಟ, ಜನಾಂದೋಲನ ಆಗಬೇಕಾಗಿದೆ ಇದಕ್ಕೆ ಹಲವು ಉದಾಹರಣೆ ಇದೆ, ಚಳುವಳಿಗಳು ವಿಜಯಿಯಾಗಿದೆ, ಒಂದು ದೊಡ್ಡ ಜನಾಂದೋಲನ ಇದರ ವಿರುದ್ಧ ರೂಪ್ಪುಗೊಳ್ಳಬೇಕಾಗುತ್ತದೆ. ಇದು ಮುಸ್ಲಿಮರ ವೈಯುಕ್ತಿಕ ಆಸ್ತಿ, ಇದು ಸರಕಾರದ ಆಸ್ತಿ ಅಲ್ಲ. ಈ ಆಸ್ತಿಯನ್ನು ಸಂಪೂರ್ಣ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಬಳಸಿ ಕೊಳ್ಳುವುದರಿಂದ ನಾವು ವಿಫಲ ಆಗಿದ್ದೇವೆ, ಜ್ಞಾನ ಹೊಂದಿದ ನಾಯಕರ ಕೊರತೆ , ಜನ ಪರ ಕಾಳಜಿ ಇರುವ ಪ್ರತಿನಿಧಿಗಳ, ಇಚ್ಛಾ ಶಕ್ತಿ ಹೊಂದಿದ ನಾಯಕರ ಕೊರತೆ ಇರುವ ಕಾರಣ ಆಗಿದೆ, ಒಂದು ಒಳ್ಳೆಯ ವಿಶನರಿ ಇರುವಂತಹ ಒಂದು ತಂಡ ಇದಕ್ಕೆ ಆಯ್ಕೆ ಆಗಿ ಬಂದರೆ ಖಂಡಿತವಾಗಲೂ ಕೂಡಾ ಮತ್ತು ಒಂದು ಒಳ್ಳೆಯ ಸರಕಾರವೂ ಕೂಡಾ ಇದರ ಬಗ್ಗೆ ಕಾರ್ಯ ಯೋಜನೆ ರೂಪಿಸಿದ್ದರೆ ಮುಸ್ಲಿಮ್ ಸಮುದಾಯಕ್ಕೆ ಒಳ್ಳೆಯ ಪ್ರಯೋಜನ ಈ ಆಸ್ತಿಗಳಿಂದ ಲಭಿಸುತ್ತೆ ಮತ್ತು ಲಕ್ಷಾಂತರ ಕೋಟಿ ರೂಪಾಯಿ ಏನು ಒತ್ತುವರಿ ಆಗಿದೆ, ಬೇರೆಯವರು ಖಬಳಿ ಸಿದ್ದಾರೆ ಅದನ್ನು ಬಿಡಿಸುವ ಕೆಲಸ ಕೂಡಾ ಆಗಬೇಕಾಗುತ್ತದೆ, ಈಗ ಹಾಲಿ ಇರುವ ವಕ್ಫ್ ಬೋರ್ಡು ನಲ್ಲಿ ಹಲವು ತಪ್ಪುಗಳು ಇದೆ. ಈ ತಪ್ಪುಗಳನ್ನು ಸರಿ ಪಡಿಸಿದರೆ ದೊಡ್ಡ ಮಟ್ಟದ ಪ್ರಯೋಜನ ಮುಸ್ಲಿಮ್ ಸಮುದಾಯಕ್ಕೆ ಆಗುತ್ತದೆ.( 2.18 ನಿ)
ಇನ್ನಷ್ಟು ವರದಿಗಳು
ವಕ್ಫ್ ವಿಚಾರದಲ್ಲಿ ಮುಸ್ಲಿಮ್ ನಾಯಕರು ದ್ವನಿ ಎತ್ತಲೇ ಬೇಕಿದೆ: ಆನ್ ಲೈನ್ ಸಂವಾದದಲ್ಲಿ ಡಾ. ನಾಝಿಯಾ ಕೌಸರ್.
ವಕ್ಫ್ ಮತ್ತು ಸಮುದಾಯದ ಬಗ್ಗೆ ಚಿಂತನೆ ನಡೆಯಬೇಕಿದೆ: ಆನ್ಲೈನ್ ಸಂವಾದದಲ್ಲಿ ಮೌಲಾನ ಶಾಫಿ ಸಹದಿ.
ಮುಸ್ಲಿಮ್ 2 ಬಿ ಮೀಸಲಾತಿ ಮರುಸ್ಥಾಪನೆ ಆಗಬೇಕಿದೆ: ಆನ್ಲೈನ್ ಸಂವಾದದಲ್ಲಿ ಕೆಎಂಯು ಪ್ರ ಕಾರ್ಯದರ್ಶಿ ಕಾಸಿಮ್ ಸಾಬ್ ಎ.